ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಗೆ ಅಭಾವ ಉಂಟಾಗಿದೆಯಾ? IOCL ಹೇಳಿದ್ದೇನು

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೆಟ್ರೋಲ್ ಬಂಕ್ ವೊಂದರ ವಿಡಿಯೋವೊಂದನ್ನು ಹಂಚಿಕೊಂಡಿರುವ IOCL, ಎಂದಿನಂತೆ ಸಾಮಾನ್ಯ ದಿನವಾಗಿದ್ದು, ಪೂರೈಕೆ ಹಾಗೂ ಕಾರ್ಯಾಚರಣೆ ಸಾಮಾನ್ಯವಾಗಿದೆ ಎಂದು ಪೋಸ್ಟ್ ಮಾಡಿದೆ.

ನವದೆಹಲಿ: ಅಂತಾರಾಷ್ಟ್ರೀಯ ಇಂಧನ ಬಿಕ್ಕಟ್ಟಿನ ನಡುವೆ ಎಂದಿನಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತೀಯ ತೈಲ ನಿಗಮ ನಿಯಮಿತ (IOCL)ಹೇಳಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೆಟ್ರೋಲ್ ಬಂಕ್ ವೊಂದರ ವಿಡಿಯೋವೊಂದನ್ನು ಹಂಚಿಕೊಂಡಿರುವ IOCL, ಎಂದಿನಂತೆ ಸಾಮಾನ್ಯ ದಿನವಾಗಿದ್ದು, ಪೂರೈಕೆ ಹಾಗೂ ಕಾರ್ಯಾಚರಣೆ ಸಾಮಾನ್ಯವಾಗಿದೆ ಎಂದು ಪೋಸ್ಟ್ ಮಾಡಿದೆ.

ಆಧುನಿಕ ಇತಿಹಾಸದಲ್ಲಿ ಜಗತ್ತು ತನ್ನ ಕೆಟ್ಟ ತೈಲ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಇದು ಭಾರತದ ತೈಲ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಆಗಿದೆ. ಬೆಳಗ್ಗೆ 10 ಗಂಟೆಯ ಪೀಕ್ ಅವರ್ ನಲ್ಲಿ ಮುಂಬೈಯ COCO BKC ಪೆಟ್ರೋಲ್ ಬಂಕ್ ನಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ಯಾವುದೇ ಆತಂಕ ಇಲ್ಲ. ಯಾವುದೇ ದಟ್ಟಣೆ ಇಲ್ಲ. ಎಂದಿನಂತೆ ವ್ಯವಹಾರ ನಡೆಯುತ್ತಿದೆ ಎಂದು ಪೋಸ್ಟ್ ನಲ್ಲಿ IOCL ಹೇಳಿದೆ.

ಎಂದಿನಂತೆ ಸಾಮಾನ್ಯ ದಿನ, ಸಾಮಾನ್ಯ ತೈಲ ಪೂರೈಕೆ ಮತ್ತು ಸಾಮಾನ್ಯ ಕಾರ್ಯಾಚರಣೆಗಳನ್ನು ತೋರಿಸುವ ಮೂಲಕ ದೇಶದ ಇಂಧನ ಭದ್ರತೆಯು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದ್ದು, ದೃಢವಾಗಿದೆ ಎಂಬುದನ್ನು ಇಂಡಿಯನ್ ಆಯಿಲ್ ಸಾರ್ವಜನಿಕರಿಗೆ ಭರವಸೆ ನೀಡಿದೆ.

ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಅಭಾವದಿಂದ ಭಾರತೀಯ ಪೆಟ್ರೋಲಿಯಂ ಕಂಪನಿಗಳ ಸಂಕಷ್ಟ ಕುರಿತು UBS ಇತ್ತೀಚಿಗೆ ವರದಿ ಮಾಡಿತ್ತು.

ಭಾರತೀಯ ತೈಲ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಭಾರತೀಯ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳನ್ನು ಒಂದುಗೂಡಿಸಿದರೂ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿ ಒತ್ತಡಕ್ಕೆ ಒಳಗಾಗಬಹುದು ಎಂದು UBS ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್