ರಾಹುಲ್ ಗಾಂಧಿ 
ದೇಶ

ನೆಹರೂ ಬದುಕಿದ್ದರೆ, ಕಾನ್ಶಿರಾಮ್ ಅವರನ್ನು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿ ಮಾಡುತ್ತಿದ್ದರು: ರಾಹುಲ್

ಕಾನ್ಶಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್‌) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್‌ ಸಮಾಜ ಪಕ್ಷವನ್ನು ಹುಟ್ಟುಹಾಕಿದ್ದರು.

ಲಕ್ನೋ: ಜವಾಹರಲಾಲ್‌ ನೆಹರೂ ಬದುಕಿದ್ದರೆ, ಕಾನ್ಶಿರಾಮ್ ಅವರನ್ನು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿ ಮಾಡುತ್ತಿದ್ದರು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾನ್ಶಿರಾಮ್ ಅವರ ಜನ್ಮದಿನಕ್ಕೂ ಮುನ್ನಾ ಲಕ್ನೋದಲ್ಲಿ ಶುಕ್ರವಾರ ನಡೆದ ಸಂವಿಧಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರು 1964ರಲ್ಲಿ ಮೃತಪಟ್ಟಿದ್ದರು. ಕಾನ್ಶಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್‌) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್‌ ಸಮಾಜ ಪಕ್ಷವನ್ನು ಹುಟ್ಟುಹಾಕಿದ್ದರು.

ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಹಾಗೂ ಕಾನ್ಶಿರಾಮ್ ಅವರು ಎಂದಿಗೂ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಎಂದರು. ನಾವು ಸಾಗಬೇಕಿದ್ದ ಹಾದಿಯಲ್ಲಿ ವೇಗವಾಗಿ ಸಾಗಬೇಕಿತ್ತು, ಆದರೆ ಕಾಂಗ್ರೆಸ್‌ನಿಂದಲೂ ಕೆಲವು ನ್ಯೂನತೆಗಳಾಗಿವೆ.

ಕಾಂಗ್ರೆಸ್‌ ಆ ಕೆಲಸ ಮಾಡಿದ್ದರೆ, ಕಾನ್ಶಿರಾಮ್ ಯಶಸ್ವಿಯಾಗುತ್ತಿರಲಿಲ್ಲ. ಒಂದೊಮ್ಮೆ ನೆಹರೂ ಅವರು ಬದುಕಿದ್ದರೆ, ಅವರು (ಕಾನ್ಶಿರಾಮ್) ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಯಾಗುತ್ತಿದ್ದರು’ ಎಂದು ರಾಹುಲ್‌ ತಿಳಿಸಿದ್ದಾರೆ.

ದೇಶದ ಇಂಧನ ಭದ್ರತೆಯೊಂದಿಗೆ ಮೋದಿ ರಾಜಿ ಮಾಡಿಕೊಂಡಿದ್ದಾರೆ. ನಾವು ಯಾರಿಂದ ತೈಲ ಖರೀದಿಸಬೇಕೆಂದು ಅಮೆರಿಕ ನಿರ್ಧರಿಸುತ್ತಿದೆ. ಇದರಿಂದ ಇಂಧನ ಕ್ಷೇತ್ರದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೆ. ಆದರೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಬಗ್ಗೆ ಜನರು ಅನೇಕ ವಿಷಯಗಳನ್ನು ಹೇಳುತ್ತಾರೆ, ಅವರು ಕೊಲಂಬಿಯಾದಲ್ಲಿ ಅಧ್ಯಯನ ಮಾಡಿದರು, ಅವರು ದಲಿತರಿಗಾಗಿ ಹೋರಾಡಿದರು, ಅವರು ಒಬ್ಬ ಬುದ್ಧಿಜೀವಿ, ಅವರು ದಲಿತ ಉದ್ದೇಶವನ್ನು ಪ್ರತಿಪಾದಿಸಿದರು ಮತ್ತು ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟರು. ಆದರೆ ಅಗತ್ಯ ಅಂಶವೇನು? ಅಗತ್ಯ ಅಂಶವೆಂದರೆ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ" ಎಂದು ರಾಹುಲ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ