ಇರ್ಷಾದ್-ಪ್ರತಿಭಾ 
ದೇಶ

ದೈಹಿಕ ಸೌಂದರ್ಯದಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ: MLA ಪ್ರತಿಭಾ ವಿರುದ್ಧ Muslim League ನಾಯಕನ ಹೇಳಿಕೆ

ಕಾಯಂಕುಲಂನಲ್ಲಿ ಯುಡಿಎಫ್ ಅಭ್ಯರ್ಥಿ ಎಂ. ಲಿಜು ಪರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ Muslim League ನಾಯಕ ಇರ್ಷಾದ್ ಚಕ್ಕಲಶ್ಸೆರಿ, ಕಾಯಂಕುಲಂನ LDF ಅಭ್ಯರ್ಥಿ ಪ್ರತಿಭಾ ಅವರನ್ನು ಗುರಿಯಾಗಿಸಿಕೊಂಡಿದ್ದರು.

ಕಾಯಂಕುಲಂ: ಕಾಯಂಕುಲಂನಲ್ಲಿ ಯುಡಿಎಫ್ ಅಭ್ಯರ್ಥಿ ಎಂ. ಲಿಜು ಪರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ Muslim League ನಾಯಕ ಇರ್ಷಾದ್ ಚಕ್ಕಲಶ್ಸೆರಿ, ಕಾಯಂಕುಲಂನ LDF ಅಭ್ಯರ್ಥಿ ಪ್ರತಿಭಾ ಅವರನ್ನು ಗುರಿಯಾಗಿಸಿಕೊಂಡಿದ್ದರು. ದೈಹಿಕ ಸೌಂದರ್ಯದಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ.

UDF ನಾಯಕನ ತಮ್ಮ ವಿರುದ್ಧ ಮಾಡಿರುವ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಯಂಕುಲಂನ ಎಲ್‌ಡಿಎಫ್ ಅಭ್ಯರ್ಥಿ ಯು. ಪ್ರತಿಭಾ ಹೇಳಿದ್ದಾರೆ. ಲೀಗ್ ನಾಯಕ ಇರ್ಷಾದ್ ಚಕ್ಕಲಶ್ಸೆರಿ ಮಾಡಿರುವ ಹೇಳಿಕೆಗಳು ಇಡೀ ಮಹಿಳಾ ಸಮುದಾಯಕ್ಕೆ ಅವಮಾನಕರ. ತಮ್ಮ ವಿರುದ್ಧ ಮಾಡಿರುವ ಹೇಳಿಕೆಗಳ ಕುರಿತು ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಶಾಸಕಿ ಪ್ರತಿಭಾ ಹೇಳಿದ್ದಾರೆ.

'ಕಾಂಗ್ರೆಸ್ ಗೆ ಇಂದಿರಾ ಗಾಂಧಿಯಂತಹ ಮಹಿಳಾ ನಾಯಕಿಯ ನೇತೃತ್ವವಿತ್ತು. ಸೋನಿಯಾ ಗಾಂಧಿಯಂತಹ ಮಹಿಳಾ ನಾಯಕಿ ಅದರ ಮುಖ್ಯಸ್ಥರೂ ಆಗಿದ್ದರು. ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಬಂದು ಸ್ಪರ್ಧಿಸಿದರು. ಮಹಿಳೆಯರ ನೇತೃತ್ವದ ಪಕ್ಷದ ನಾಯಕ ಇಂತಹ ಕೆಟ್ಟ ಹೇಳಿಕೆ ನೀಡಿದ್ದಾರೆ. ನನಗೆ ಆಘಾತವಾಗಿದೆ. ನಾನು ಯಾವುದೇ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಳ ವಿರುದ್ಧ ಎಂದಿಗೂ ವೈಯಕ್ತಿಕ ಹೇಳಿಕೆ ನೀಡಿಲ್ಲ. ಇದು ವ್ಯಕ್ತಿತ್ವ ಹತ್ಯೆಯ ಪರಮಾವಧಿ ಎಂದು ಪ್ರತಿಭಾ ಹೇಳಿದರು.

ಚುನಾವಣೆಯಲ್ಲಿ ಜನರು ದೇಹವನ್ನು ಅಲ್ಲ, ಮನಸ್ಸನ್ನು ನೋಡುತ್ತಾರೆ. ಯಾವುದೇ ಮಹಿಳೆಯನ್ನು ಅಂತಹ ಮಾತುಗಳಿಂದ ಅವಮಾನಿಸಬಾರದು ಎಂದು ಪ್ರತಿಭಾ ಹೇಳಿದರು. ಕಾಯಂಕುಲಂನ ಯುಡಿಎಫ್ ಸಂಚಾಲಕ ಇರ್ಷಾದ್ ಮಾತನಾಡುತ್ತಿದ್ದಾಗ, ಅನೇಕ ಪ್ರಮುಖ ನಾಯಕರು ವೇದಿಕೆಯಲ್ಲಿ ಹಾಜರಿದ್ದರು. ಮಹಿಳೆಯರು ಸೇರಿದಂತೆ ಹಾಜರಿದ್ದವರು ಏನನ್ನೂ ಹೇಳಲಿಲ್ಲ. ಇರ್ಷಾದ್ ಅವರ ಕ್ಷಮೆಯಾಚನೆಯನ್ನು ಯಾವುದೇ ರೀತಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪ್ರತಿಭಾ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್