ಪ್ರಧಾನಿ ಮೋದಿ 
ದೇಶ

ಕೇರಳ ವಿಧಾನಸಭಾ ಚುನಾವಣೆ: BJP ಎ- ಟೀಮ್ ಅಂತಾ LDF, UDF ಒಪ್ಪಿಕೊಂಡ್ರಾ? ಪ್ರಧಾನಿ ಮೋದಿ ಹೇಳಿದ್ದೇನು?

ಎಲ್‌ಡಿಎಫ್ ಮತ್ತು ಯುಡಿಎಫ್ ದಶಕಗಳ ಕಾಲ "ಹಗರಣಗಳ" ನಡುವೆ ಅಧಿಕಾರವನ್ನು ವ್ಯವಹಾರ ಮಾಡಿಕೊಂಡಿವೆ. ಆದರೂ ಪರಸ್ಪರರ ವಿರುದ್ಧ ಎಂದಿಗೂ ವರ್ತಿಸಿಲ್ಲ. ಜನರಿಗೆ ಸುಳ್ಳು ಹೇಳಿಕೆಗಳ ಮೂಲಕ ವಂಚಿಸಿವೆ ಎಂದರು.

ಪಾಲಕ್ಕಾಡ್‌: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎ-ಟೀಮ್ ಅಂತಾ LDF ಮತ್ತು UDF ಪಕ್ಷಗಳು ಒಪ್ಪಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು.

ಪ್ರತಿಸ್ಪರ್ಧಿ ವಿರೋಧ ಪಕ್ಷಗಳು ಭ್ರಷ್ಟಾಚಾರ ಮತ್ತು ರಾಜಕೀಯ ಅವಕಾಶವಾದಿಗಳು ಎಂದು ಆರೋಪಿಸಿದರು. ಪಾಲಕ್ಕಾಡ್‌ನಲ್ಲಿ ಎನ್‌ಡಿಎ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇರಳ ರಾಜ್ಯ ಸ್ವಾರ್ಥ ರಾಜಕಾರಣದ ಎರಡು ಪಕ್ಷಗಳ ನಡುವಣ ಸಿಲುಕಿಕೊಂಡಿದೆ ಎಂದರು.

ಎಲ್‌ಡಿಎಫ್ ಮತ್ತು ಯುಡಿಎಫ್ ದಶಕಗಳ ಕಾಲ "ಹಗರಣಗಳ" ನಡುವೆ ಅಧಿಕಾರವನ್ನು ವ್ಯವಹಾರ ಮಾಡಿಕೊಂಡಿವೆ. ಆದರೂ ಪರಸ್ಪರರ ವಿರುದ್ಧ ಎಂದಿಗೂ ವರ್ತಿಸಿಲ್ಲ. ಜನರಿಗೆ ಸುಳ್ಳು ಹೇಳಿಕೆಗಳ ಮೂಲಕ ವಂಚಿಸಿವೆ. ದಶಕಗಳಿಂದ ಒಟ್ಟಾಗಿ ಕೇರಳವನ್ನು ಲೂಟಿ ಮಾಡಿದೆ. ವ್ಯವಸ್ಥೆಯಲ್ಲಿ ನಮ್ಮ ಕೇರಳ ಸಿಕ್ಕಿಬಿದ್ದಿದೆ ಎಂದು ಟೀಕಾಪ್ರಹಾರ ಮಾಡಿದರು.

ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪರಸ್ಪರ ಸುಳ್ಳು ನಿಂದನೆ ಮಾಡುತ್ತಿವೆ... ನೀವು ಅವರಿಬ್ಬರ ಬಗ್ಗೆ ಜಾಗರೂಕರಾಗಿರಬೇಕು. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ 'ಬಿ-ಟೀಮ್' ಎಂದು ಹೇಳಿಕೊಳ್ಳುತ್ತಾರೆ, ಆದರೆ ಕೇರಳದ ಚುನಾವಣೆಯಲ್ಲಿ ಬಿಜೆಪಿ ಮಾತ್ರ ನಿಜವಾದ ಸ್ಪರ್ಧಿ ಎಂದು ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಎರಡೂ ಪಕ್ಷಗಳು ಬಿಜೆಪಿಯ ಬೆಳವಣಿಗೆಗೆ ಭಯಪಡುತ್ತವೆ. ಅವರ "ತಪ್ಪುಗಳು ಬಹಿರಂಗಗೊಳ್ಳುತ್ತವೆ" ಎಂದು ಎಚ್ಚರಿಸಿದರು.

ಕೇರಳದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುಂದಿನ ಸರ್ಕಾರ ರಚಿಸಲಿದೆ. ಕೇರಳದ ಜನತೆಯ ಆಶೀರ್ವಾದದೊಂದಿಗೆ ಇಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ ಪ್ರಧಾನಿ, ಈ ಹಣ ನಿಮಗೆ ಸೇರಿದ್ದು, ಆದರೆ ಅವರು ಅದನ್ನು ಲೂಟಿ ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು. ಎನ್‌ಡಿಎ ಸರ್ಕಾರ ಲೂಟಿ ಮಾಡಿದ ಹಣವನ್ನು ಮರುಪಡೆಯುತ್ತದೆ. ಕೇರಳದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ಅವರು ಭರವಸೆ ನೀಡಿದರು.

"ಕೇರಳದ ಸಾಲವು 5 ಲಕ್ಷ ಕೋಟಿ ರೂ. ದಾಟಿದೆ, ಕಳೆದ ದಶಕದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಕೇರಳದ ಎನ್‌ಡಿಎ ಸರ್ಕಾರ ಭ್ರಷ್ಟರಿಂದ ಹಣವನ್ನು ವಸೂಲಿ ಮಾಡುತ್ತದೆ ಮತ್ತು ಅದನ್ನು ರಾಜ್ಯದ ಅಭಿವೃದ್ಧಿಗೆ ಬಳಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊನೆಗೂ ಇರಾನ್ ನೆಲದಲ್ಲಿ ಸೇನೆ ಇಳಿಸ್ತಾ ಅಮೆರಿಕ?: 20 ವರ್ಷಗಳಲ್ಲಿ ಅತಿದೊಡ್ಡ ಸೇನಾ ಜಮಾವಣೆ, Hormuz ವಶಕ್ಕೆ ಇನ್ನಿಲ್ಲದ ಕಸರತ್ತು!

ಸ್ನಾನಗೃಹದಲ್ಲಿ ಬಿದ್ದು ತಲೆಗೆ ಗಾಯ: ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್ ಬಜ್ವಾ ನಿಧನ!

IPL 2026: ಇತಿಹಾಸ ಬರೆದ ಕಿಂಗ್ Virat kohli, ಒಂದೇ ಪಂದ್ಯದಲ್ಲಿ ಬರೊಬ್ಬರಿ 10 ದಾಖಲೆ ನಿರ್ಮಾಣ! ಏಕೈಕ ಆಟಗಾರ

West Asia Conflict- ವದಂತಿಗಳಿಗೆ ಕಿವಿಗೊಡಬೇಡಿ, ಎಚ್ಚರಿಕೆ ಇರಲಿ, ಸವಾಲನ್ನು ಒಟ್ಟಾಗಿ ಎದುರಿಸೋಣ: ಪ್ರಧಾನಿ ಮೋದಿ-Video

ಟ್ರಂಪ್ ಎಚ್ಚರಿಕೆಗೆ ಬಗ್ಗದ ಇರಾನ್: ಸೌದಿ ವಾಯುನೆಲೆ ಮೇಲೆ ಮುಂದುವರೆದ ಕ್ಷಿಪಣಿ ದಾಳಿ; ಅಮೆರಿಕಾದ 15 ಸೈನಿಕರಿಗೆ ಗಾಯ, ಐವರ ಸ್ಥಿತಿ ಗಂಭೀರ

SCROLL FOR NEXT