ಪಂಚರಾಜ್ಯ ಚುನಾವಣಾ ಫಲಿತಾಂಶ 
ದೇಶ

5 States Election results 2026: ತ.ನಾಡಿನಲ್ಲಿ TVK Vijay ಐತಿಹಾಸಿಕ ಸಾಧನೆ, ದೀದಿ 'ಕೈ' ತಪ್ಪಿದ ಬಂಗಾಳ, ಅಸ್ಸಾಂನಲ್ಲಿ BJP ಕ್ಲೀನ್ ಸ್ವೀಪ್, ಕೇರಳದಲ್ಲಿ UDF ಅಲೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನಿಕಟ ಪೈಪೋಟಿ ಇದೆಯಾದರೂ, ಹಾಲಿ ಟ್ರೆಂಡ್ ಗಳು ಬಿಜೆಪಿಯನ್ನು ಮುನ್ನಡೆಯಲ್ಲಿ ನಿಲ್ಲಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ದ್ರಾವಿಡ ಪಕ್ಷಗಳಿಗೆ ಆಘಾತ ನೀಡಿದೆ.

ಅಂತೆಯೇ ಬಿಜೆಪಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಕೇರಳದಲ್ಲಿ 10 ವರ್ಷಗಳ ಬಳಿಕ ಯುಡಿಎಫ್ ಅಲೆ ಆರಂಭವಾಗಿದೆ. ಇತ್ತೀಚಿನ ಟ್ರೆಂಡ್‌ಗಳು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಪ್ರಬಲ ಮುನ್ನಡೆ ಸಾಧಿಸಿದೆ. ಆದರೆ ನಟ ವಿಜಯ್ ಅವರ ಟಿವಿಕೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಗಿಂತ ಅಚ್ಚರಿಯ ಮುನ್ನಡೆ ಸಾಧಿಸಿದ್ದು, ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದಾರೆ.

ಪೆರಂಬೂರ್ ಮತ್ತು ತಿರುಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ವಿಜಯ್ ಮುಂದಿದ್ದಾರೆ, ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವಾರು ಡಿಎಂಕೆ ಮಂತ್ರಿಗಳೊಂದಿಗೆ ಕೊಳತ್ತೂರಿನಲ್ಲಿ ಹಿಂದುಳಿದಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಎಡಪ್ಪಾಡಿಯಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ರಾಜ್ಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಸತ್ತೂರಿನಲ್ಲಿ ಹಿನ್ನಡೆಯಲ್ಲಿದ್ದಾರೆ.

ಈ ಅಂಕಿಅಂಶಗಳು ಚುನಾವಣಾ ಆಯೋಗ ಮತ್ತು ಟಿವಿ ಚಾನೆಲ್‌ಗಳ ಟ್ರೆಂಡ್‌ಗಳನ್ನು ಆಧರಿಸಿವೆ, ಚುನಾವಣಾ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಸಂಖ್ಯೆಗಳನ್ನು ಘೋಷಿಸಿಲ್ಲ.

ಬಂಗಾಳದಲ್ಲಿ ಬಿಜೆಪಿ ಮ್ಯಾಜಿಕ್

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನಿಕಟ ಪೈಪೋಟಿ ಇದೆಯಾದರೂ, ಹಾಲಿ ಟ್ರೆಂಡ್ ಗಳು ಬಿಜೆಪಿಯನ್ನು ಮುನ್ನಡೆಯಲ್ಲಿ ನಿಲ್ಲಿಸಿದೆ. ಇತ್ತೀಚಿನ ವರದಿಗಳು ಬಂದಾಗ ಬಿಜೆಪಿ 194 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 94 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಎಡಪಕ್ಷಗಳು 2ರಲ್ಲಿ ಮುನ್ನಡೆಯಲ್ಲಿವೆ.

ತವರಿನಲ್ಲಿ ಕೊನೆಗೂ ದೀದಿ ಮುನ್ನಡೆ

ಇನ್ನು ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರ ಭವಾನಿಪುರದಲ್ಲೇ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆಯಲ್ಲಿದ್ದರು. ಇದೀಗ ಮಮತಾ ಬ್ಯಾನರ್ಜಿ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. 20 ಸುತ್ತಿನ ಮತ ಎಣಿಕೆಗಳ ಪೈಕಿ ಈ ವರೆಗೂ 4 ಸುತ್ತಿನ ಮತಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮಮತಾ ಬ್ಯಾನರ್ಜಿ ಒಟ್ಟು 17244 ಮತಗಳನ್ನು ಪಡೆದಿದ್ದಾರೆ.

ಅವರ ಪ್ರತಿಸ್ಪರ್ಧಿ ಬಿಜೆಪಿಯ 8762 ಮತಗಳನ್ನು ಪಡೆದಿದ್ದು ಆ ಮೂಲಕ ಮಮತಾ ಬ್ಯಾನರ್ಜಿ 8482 ಮತಗಳ ಮುನ್ನಡೆ ಸಾಧಿಸಿದ್ದಾರೆ. ಸುವೇಂದು ಅಧಿಕಾರಿ ತಾವು ಸ್ಪರ್ಧಿಸಿರುವ 2 ಕ್ಷೇತ್ರಗಳ ಪೈಕಿ 1ರಲ್ಲಿ ಮುನ್ನಡೆಯಲ್ಲಿದ್ದು, ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಒಟ್ಟು 7114 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಟಿಎಂಸಿಯ ಪಬಿತ್ರಾಕರ್ 6452 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಸುವೇಂದು ಒಟ್ಟು 662 ಮತಗಳ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಅಸ್ಸಾಂನಲ್ಲಿ BJP ಕ್ಲೀನ್ ಸ್ವೀಪ್

ಅಸ್ಸಾಂನಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯದ 126 ಸ್ಥಾನಗಳಲ್ಲಿ 90 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಕ್ರಮವಾಗಿ ಜಲುಕ್ಬರಿ ಮತ್ತು ಜೋರ್ಹತ್‌ನಲ್ಲಿ ಮುನ್ನಡೆಯಲ್ಲಿದ್ದರೆ, ಅಸ್ಸಾಂ ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಲುರಿಂಜ್ಯೋತಿ ಗೊಗೊಯ್ ಖೋವಾಂಗ್‌ನಲ್ಲಿ ಮುಂದಿದ್ದಾರೆ.

ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕರಾದ ಪ್ರದ್ಯುತ್ ಬೋರ್ಡೊಲೊಯ್ ಮತ್ತು ಭೂಪೇನ್ ಬೋರಾ ಕ್ರಮವಾಗಿ ದಿಸ್ಪುರ್ ಮತ್ತು ಬಿಹ್ಪುರಿಯಾದಲ್ಲಿ ಮುನ್ನಡೆಯಲ್ಲಿದ್ದಾರೆ.

ಕೇರಳದಲ್ಲಿ UDF ಅಲೆ

ಕೇರಳದಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 75 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಹಾಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸುಮಾರು 45 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ನಾಲ್ಕು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಪುದುಚೇರಿಯಲ್ಲಿ ಮತ್ತೆ ಎನ್ ಡಿಎಗೆ ಅಧಿಕಾರದ ಗದ್ದುಗೆ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತ್ತೆ ನಾರಾಯಣ ಸ್ವಾಮಿ ನೇತತ್ವದ ಎನ್ ಆರ್ ಸಿ-ಎನ್ ಡಿಎ ಮೈತ್ರಿಕೂಟ ಅಧಿಕಾರ ರಚನೆ ಬಹುತೇಕ ಖಚಿತವಾಗಿದ್ದು, ಇಲ್ಲಿ ಒಟ್ಟು 30 ಸ್ಥಾನಗಳ ಪೈಕಿ ಎನ್ ಆರ್ ಸಿ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 11ರಲ್ಲಿ ಮುನ್ನಡೆಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka By-poll & Assembly elections 2026 LIVE updates (KL, TN, AS, WB): ನಿರ್ಣಾಯಕ ಘಟ್ಟದಲ್ಲಿ ಮತ ಎಣಿಕೆ: ತ.ನಾಡಿನಲ್ಲಿ ನಟ ವಿಜಯ್ ಮ್ಯಾಜಿಕ್, ಬಂಗಾಳದಲ್ಲಿ ದೀದಿಗೆ ಮುಖಭಂಗ

ಪಂಚರಾಜ್ಯ ಚುನಾವಣೆ ಫಲಿತಾಂಶ 2026: ಬಂಗಾಳದಲ್ಲಿ BJP ಮುನ್ನಡೆ, ಕೇಸರಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಲೂ ಪೂರಿ, ರಸಗುಲ್ಲ ಸಿದ್ಧತೆ

Keralam Election results 2026: 10 ವರ್ಷಗಳ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ; CM ಪಿಣರಾಯಿಗೆ ತವರಿನಲ್ಲೇ ಹಿನ್ನಡೆ!

'ಪವರ್ ಕಟ್, ಸಿಸಿಟಿವಿಗಳು ಸ್ಥಗಿತ.. ಬಿಜೆಪಿಯವ್ರು ಏನೋ ಮಾಡ್ತಾ ಇದಾರೆ': ಪಶ್ಚಿಮ ಬಂಗಾಳ ಸಿಎಂ Mamata Banerjee ಆತಂಕ

ಕರ್ನಾಟಕ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಕಂಗೆಡಿಸಿರುವ 'ಬಾಂಧವರು'; ಬಿಜೆಪಿಗೆ ವರವಾಗಲಿದ್ಯಾ ಹಿಂದೂ ಮತಗಳ ಧ್ರುವೀಕರಣ!

SCROLL FOR NEXT