ಎಂ ಕೆ ಸ್ಟಾಲಿನ್  
ದೇಶ

'ವಿಜಯ್ ಸರ್ಕಾರ ರಚನೆ ಮಾಡಲಿ, ನಾವು 6 ತಿಂಗಳು ತೊಂದರೆ ಕೊಡೋದಿಲ್ಲ': ಮೈತ್ರಿ ವದಂತಿಗೆ ತೆರೆ ಎಳೆದ MK Stalin

ಅವರ ಈ ಹೇಳಿಕೆಯಿಂದ AIADMK ಮತ್ತು DMK ಮೈತ್ರಿ ಸಾಧ್ಯತೆಗಳ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸ್ಟಾಲಿನ್ ತೆರೆ ಎಳೆದಿದ್ದಾರೆ.

ತಮಿಳು ನಾಡಿನ ನಿರ್ಗಮಿತ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪ್ರಮುಖ ಇಂಗ್ಲಿಷ್ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ, ಡಿಎಂಕೆ ಪಕ್ಷವು ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚಿಸುವುದಕ್ಕೆ ಕಾಯಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಆರು ತಿಂಗಳು ಯಾವುದೇ ಅಡ್ಡಿಪಡಿಸದೇ ಗಮನಿಸುತ್ತೇನೆ ಎಂದೂ ಅವರು ತಿಳಿಸಿದ್ದಾರೆ.

ಅವರ ಈ ಹೇಳಿಕೆಯಿಂದ AIADMK ಮತ್ತು DMK ಮೈತ್ರಿ ಸಾಧ್ಯತೆಗಳ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸ್ಟಾಲಿನ್ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಸಂಕಷ್ಟ ಅಥವಾ ಮತ್ತೊಂದು ಚುನಾವಣೆ ಎದುರಾಗಬಾರದು ಎಂಬ ಆಶಯವನ್ನು ಸೂಚಿಸಿದ ಅವರು, ಹೊಸ ಸರ್ಕಾರವು ತಮ್ಮ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಮುಂದುವರಿಸಬೇಕು ಹಾಗೂ ಟಿವಿಕೆ ತನ್ನ ಚುನಾವಣಾ ಘೋಷಣಾಪತ್ರದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹೊಸ ಸರ್ಕಾರವು ಶಾಲಾ ಮಕ್ಕಳ ಉಚಿತ ಬೆಳಗಿನ ಉಪಹಾರ ಯೋಜನೆಯನ್ನು ಮುಂದುವರಿಸಬೇಕು ಮತ್ತು ‘ಕಲೈಞರ್ ಮಹಿಳಿರ್ ಉರಿಮೈ ತೊಗೈ’ (ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 1,000 ಭತ್ಯೆ) ಯೋಜನೆಯೂ ಮುಂದುವರಿಯಬೇಕು ಎಂದರು.

ಮಹಿಳೆಯರಿಗೆ 2,500 ರೂಪಾಯಿ ಪ್ರತಿ ತಿಂಗಳು ನೀಡುವ ವಿಜಯ್ ಅವರ ಭರವಸೆ ಕುರಿತು ಮಾತನಾಡಿದ ಸ್ಟಾಲಿನ್, ಅದು ನಿರ್ವಹಿಸಲು ಕಷ್ಟದ ಭರವಸೆ. ಕನಿಷ್ಠ ನಾವು ನೀಡಿದಂತೆ 1,000 ಆದರೂ ನೀಡಿ ಎಂದು ಹೇಳಿದರು.

ಡಿಎಂಕೆ ಅಧ್ಯಕ್ಷರಾದ ಸ್ಟಾಲಿನ್, ತಮ್ಮ ಸರ್ಕಾರವು 2021ರ ಚುನಾವಣಾ ಘೋಷಣಾಪತ್ರದ 90 ಶೇಕಡಾ ಭರವಸೆಗಳನ್ನು ಈಡೇರಿಸಿದೆ, ನೀಟ್ ಪರೀಕ್ಷೆ ರದ್ದತಿ ಮುಂತಾದ ಕೆಲವು ವಿಷಯಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದ್ದ ಕಾರಣ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಈ ಚುನಾವಣೆಯಲ್ಲೂ ನಾವು ಈಡೇರಿಸಬಹುದಾದ ಭರವಸೆಗಳನ್ನಷ್ಟೇ ನೀಡಿದ್ದೇವೆ. ಟಿವಿಕೆ ತನ್ನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲವೆಂದು ನನಗೆ ತೋರುತ್ತದೆ. ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್ ಪಿಜಿ ಸಿಲಿಂಡರ್ ನೀಡುವ ಭರವಸೆಯನ್ನು ಅವರು ಈಡೇರಿಸಿದರೆ ನಮಗೆ ಸಂತೋಷವೇ ಎಂದರು.

ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಏಕಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಅಗತ್ಯವಿದ್ದ ಸಂಖ್ಯೆಯಿಂದ 10 ಸ್ಥಾನ ಕಡಿಮೆಯಾಗಿದೆ.

ಕಾಂಗ್ರೆಸ್ ಬೆಂಬಲ ನೀಡಿದ ನಂತರ ಟಿವಿಕೆಗೆ ಇನ್ನೂ ಐದು ಸ್ಥಾನಗಳ ಬೆಂಬಲ ದೊರಕಿದೆ. ಆದರೂ ಸರ್ಕಾರ ರಚಿಸಲು ಇನ್ನೂ ಐದು ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಸಿಪಿಐ ಮತ್ತು ವಿಡುತಲೈ ಚಿರುಥೈಗಲ್ ಕಚ್ಚಿ ಪಕ್ಷಗಳ ಬೆಂಬಲಕ್ಕೂ ಮನವಿ ಮಾಡಿದೆ.

ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ನಿನ್ನೆ ಹೋಗಿದ್ದ ಟಿವಿಕೆ ಪಕ್ಷಕ್ಕೆ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರು ಸಾಕಷ್ಟು ಸಂಖ್ಯಾಬಲದೊಂದಿಗೆ ಬನ್ನಿ ಎಂದಿದ್ದಾರೆ. ಇದಾದ ನಂತರ ಎಡಿಎಂಕೆ ಮತ್ತು ಡಿಎಂಕೆ ಮೈತ್ರಿ ಸಾಧ್ಯತೆಗಳ ಕುರಿತು ಊಹಾಪೋಹಗಳು ಆರಂಭವಾಯಿತು.

ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳು, ಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಎಂ 2 ಸ್ಥಾನಗಳನ್ನು ಗೆದ್ದರೆ, ಬಿಜೆಪಿ,ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನ ಗೆದ್ದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

Operation Sindoorಗೆ 1 ವರ್ಷ: 'ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ'; ಶತ್ರುರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತೀಯ ಸೇನೆ

TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ, ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!

'ಜಪ್ಪಯ್ಯ ಅಂದರೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ನನ್ನನ್ನು ವಜಾ ಮಾಡಲಿ': ಮಮತಾ ಬ್ಯಾನರ್ಜಿ

SCROLL FOR NEXT