ರಿವಾ ಅರೋರಾ 
ದೇಶ

'ಅಸಭ್ಯ ವರ್ತನೆ, ನಿಂದನೆ': ಬ್ಲಿಂಕಿಟ್ ಡೆಲಿವರಿ ಏಜೆಂಟ್‌ನಿಂದಾದ ಕಿರುಕುಳ ನೆನಪಿಸಿಕೊಂಡ 'ಉರಿ' ಚಿತ್ರದ ನಟಿ ರಿವಾ ಅರೋರಾ!

ರಿವಾ ಅರೋರಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಬ್ಲಿಂಕಿಟ್ ಡೆಲಿವರಿ ಏಜೆಂಟ್ ಜೊತೆ ನಡೆದ ಆತಂಕಕಾರಿ ಘಟನೆಯ ಹತ್ತು ದಿನಗಳ ನಂತರ, ಉರಿ ಚಿತ್ರದ ನಟಿ ರಿವಾ ಅರೋರಾ ತಮ್ಮ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡರು. ಪರಿಸ್ಥಿತಿ ನಿಯಂತ್ರಣ ಮೀರಿದ್ದು, ಪೊಲೀಸರ ಹಸ್ತಕ್ಷೇಪಕ್ಕೆ ಕಾರಣವಾಯಿತು. ಪದೇ ಪದೆ ಎಚ್ಚರಿಕೆ ನೀಡಿದ್ದರೂ ಡೆಲಿವರಿ ಏಜೆಂಟ್ ಅಸಭ್ಯವಾಗಿ ವರ್ತಿಸಿ, ನಿಂದನೀಯ ಭಾಷೆಯನ್ನು ಬಳಸುತ್ತಲೇ ಇದ್ದರು ಎಂದು ವರು ನೆನಪಿಸಿಕೊಂಡರು.

ಏಪ್ರಿಲ್ 26 ರಂದು, ಡೆಲಿವರಿ ಏಜೆಂಟ್ ಮಧ್ಯಾಹ್ನ 3.30ರ ಸುಮಾರಿಗೆ ಆರ್ಡರ್‌ ಜೊತೆಗೆ ರಿವಾ ಅವರ ಮನೆ ಬಾಗಿಲಿಗೆ ಬಂದರು.

'ಆರಂಭದಿಂದಲೂ ಅವರ ಮಾತು ರೂಡ್ ಮತ್ತು ಅನುಚಿತವಾಗಿತ್ತು. ನಾನು ಪ್ರತಿಕ್ರಿಯಿಸಿದಾಗ ಪರಿಸ್ಥಿತಿ ಸುಧಾರಿಸಲಿಲ್ಲ. ನನ್ನ ತಾಯಿ (ನಿಶಾ ಅರೋರಾ) ಈ ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಲು ಮತ್ತು ವಿಷಯಗಳನ್ನು ಶಾಂತಗೊಳಿಸಲು ಮುಂದಾದರು. ಆದರೆ, ಡೆಲಿವರಿ ಏಜೆಂಟ್ ಅಗೌರವದಿಂದ ವರ್ತಿಸುತ್ತಲೇ ಇದ್ದರು' ಎಂದು ನಟ ಹಿಂದೂಸ್ತಾನ್ ಟೈಮ್ಸ್‌ಗೆ ವಿವರಿಸಿದ್ದಾರೆ.

'ಅವರು ಹೊರಡುವಾಗ ನನ್ನ ಸಹೋದರಿ ಲಿಫ್ಟ್‌ನಲ್ಲಿ ಎದುರಾದಾಗಲೂ, ಅವರು ಅನುಚಿತ ಭಾಷೆಯನ್ನು ಬಳಸುತ್ತಲೇ ಇದ್ದರು. ಆ ಸಮಯದಲ್ಲಿ, ಅವರ ನಡವಳಿಕೆಯು ಗಡಿ ದಾಟಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ನಮಗೆ ಅನಿಸಿತು. ಯಾವುದೇ ಪ್ರಚೋದನೆಯಿಲ್ಲದೆ ನಮ್ಮ ಕಡೆಗೆ ಅಗೌರವ, ಅನುಚಿತ ಮತ್ತು ಅಸಭ್ಯ ಭಾಷೆಯನ್ನು ಬಳಸಲಾಯಿತು. ಅವರು ಅದೇ ದಾಟಿಯಲ್ಲಿ ಪದೇ ಪದೆ ಮಾತನಾಡುತ್ತಲೇ ಇದ್ದರು' ಎಂದು ರಿವಾ ಆರೋಪಿಸಿದ್ದಾರೆ.

'ನಮ್ಮ ಮನೆ ಬಾಗಿಲಿನಿಂದಲೇ ಸಮಸ್ಯೆ ಪ್ರಾರಂಭವಾಯಿತು ಮತ್ತು ಹೊರಡುವಾಗಲೂ ಆತ ತನ್ನ ಕೆಟ್ಟ ನಡವಳಿಕೆಯನ್ನು ಮುಂದುವರಿಸಿದ. ವಾಗ್ವಾದದ ನಂತರ ಆತ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ, ನಾವು ಅವನನ್ನು ಕೆಳಗಿನವರೆಗೂ ಹಿಂಬಾಲಿಸಿದೆವು ಮತ್ತು ಅದರಿಂದ ಆತ ತಪ್ಪಿಸಿಕೊಳ್ಳದಂತೆ ತಡೆಯಲು ಸಾಧ್ಯವಾಯಿತು. ನಾವು ತಕ್ಷಣ ಮುಂಬೈ ಪೊಲೀಸರನ್ನು ಸಂಪರ್ಕಿಸಿದೆವು, ಅವರು ಬಹಳ ಬೇಗನೆ ಪ್ರತಿಕ್ರಿಯಿಸಿದರು ಮತ್ತು ಕ್ರಮ ಕೈಗೊಳ್ಳಲು ಸ್ಥಳಕ್ಕೆ ಬಂದರು' ಎಂದು ಹೇಳಿದರು.

'ಈ ಸಂಬಂಧ ನಾವು ಬ್ಲಿಂಕಿಟ್‌ಗೆ ಔಪಚಾರಿಕ ದೂರು ನೀಡಿದ್ದೇವೆ. ಏಕೆಂದರೆ, ಆ ಮಟ್ಟದಲ್ಲಿ ಹೊಣೆಗಾರಿಕೆ ಅಷ್ಟೇ ಮುಖ್ಯವಾಗಿದೆ. ನಾವು ಸದ್ಯ ಅವರ ಕಡೆಯಿಂದ ಸ್ಪಷ್ಟ ಪ್ರತಿಕ್ರಿಯೆ ಮತ್ತು ಪರಿಹಾರಕ್ಕಾಗಿ ಕಾಯುತ್ತಿದ್ದೇವೆ' ಎಂದು ನಟಿ ಹೇಳಿದರು.

ರಿವಾ ಅರೋರಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!