ರಾಜ್ಯಪಾಲರನ್ನು ನಟ ವಿಜಯ್ ಭೇಟಿಯಾದ ವೇಳೆ ಜೊತೆಗಿರುವ ಕೆವಿಎನ್ ಪ್ರೊಡಕ್ಷನ್ಸ್ ಮಾಲೀಕ ವೆಂಕಟ್ ಕೆ. ನಾರಾಯಣ 
ದೇಶ

ರಾಜ್ಯಪಾಲರ ಭೇಟಿ ವೇಳೆ ವಿಜಯ್ ಜೊತೆ ಕಾಣಿಸಿಕೊಂಡ KVN ಪ್ರೊಡಕ್ಷನ್ಸ್ ಮಾಲೀಕ: ಫೋಟೋ ವೈರಲ್, ಭಾರೀ ಸಂಚಲನ..!

ವಿಶೇಷವಾಗಿ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನ ಮಾಲೀಕ ವೆಂಕಟ್ ಕೆ. ನಾರಾಯಣ ಹಾಗೂ ಆಂಧ್ರಪ್ರದೇಶ ಮೂಲದ ಉದ್ಯಮಿ ವಿಷ್ಣು ರೆಡ್ಡಿ ವಿಜಯ್ ಜೊತೆ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಚೆನ್ನೈ: ತಮಿಳು ನಟ ಹಾಗೂ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ನಾಯಕ ವಿಜಯ್ ಇತ್ತೀಚೆಗೆ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ ವೇಳೆ ಅವರ ಜೊತೆ ಕಾಣಿಸಿಕೊಂಡ ಕೆಲ ವ್ಯಕ್ತಿಗಳ ಹಿನ್ನೆಲೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷವಾಗಿ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನ ಮಾಲೀಕ ವೆಂಕಟ್ ಕೆ. ನಾರಾಯಣ ಹಾಗೂ ಆಂಧ್ರಪ್ರದೇಶ ಮೂಲದ ಉದ್ಯಮಿ ವಿಷ್ಣು ರೆಡ್ಡಿ ವಿಜಯ್ ಜೊತೆ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ವಿಜಯ್ ಅವರು ತಮಿಳುನಾಡಿನಲ್ಲಿ ತನ್ನದೇ ರಾಜಕೀಯ ಶಕ್ತಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆ ರಾಜಕೀಯಕ್ಕೆ ಪರ್ಯಾಯವಾಗಿ ಟಿವಿಕೆ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ರಾಜ್ಯಪಾಲರ ಭೇಟಿಯ ಫೋಟೋಗಳು ವೈರಲ್ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿಜಯ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. “ತಮಿಳುನಾಡು ಸರ್ಕಾರ ರಚನೆ ಬಗ್ಗೆ ಮಾತನಾಡಲು ವಿಜಯ್ ಜೊತೆ ಕರ್ನಾಟಕದ ಸಿನಿಮಾ ನಿರ್ಮಾಪಕ ಮತ್ತು ಆಂಧ್ರದ ಉದ್ಯಮಿ ಏಕೆ ಹೋಗಿದ್ದರು? ಅವರಿಗೆ ತಮಿಳುನಾಡಿನ ರಾಜಕೀಯದಲ್ಲಿ ಏನು ಪಾತ್ರ?” ಎಂದು ಪ್ರಶ್ನಿಸಿ ಹಲವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪೋಸ್ಟ್ ಮಾಡಿ, ಯ್ ಸರ್ಕಾರ ರಚನೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲು ಕರ್ನಾಟಕದ ನಿರ್ಮಾಪಕ ಕೆವಿಎನ್ ವೆಂಕಟ್ ಹಾಗೂ ಆಂಧ್ರ ಮೂಲದ ಗ್ರಾನೈಟ್ ಮತ್ತು ಗಣಿಗಾರಿಕೆ ಉದ್ಯಮಿ ವಿಷ್ಣು ರೆಡ್ಡಿಯನ್ನು ಕರೆದುಕೊಂಡು ಹೋಗಿದ್ದಾರೆ.

ತಮಿಳುನಾಡಿನಲ್ಲಿ ಇವರ ಪಾತ್ರವೇನು? ರಾಜ್ಯ ಆಡಳಿತವನ್ನು ಇವರು ನಡೆಸಲಿದೆಯೇ?” ಎಂದು ಪ್ರಶ್ನಿಸಿದ್ದಾರೆ, ಈ ಪೋಸ್ಟ್ ಭಾರೀ ವೈರಲ್ ಆಗಿದೆ.

ಈ ಬೆಳವಣಿಗೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದ್ದು, ಕೆಲವರು ಇದನ್ನು ಪ್ರಾದೇಶಿಕ ಅಸಮಾಧಾನಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಟೀಕೆಗಳ ನಡುವೆ ವಿಜಯ್ ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ಪರಿಸ್ಥಿತಿ ಎದುರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಡಪಕ್ಷಗಳ ಬೆಂಬಲ ಸಿಕ್ಕರೂ ಟಿವಿಕೆಗೆ ಸಿಕ್ಕಿಲ್ಲ ಸರ್ಕಾರ ರಚನೆ ಭಾಗ್ಯ, ಮ್ಯಾಜಿಕ್ ಸಂಖ್ಯೆಗೆ 2 ಸ್ಥಾನ ಕೊರತೆ; ಇಂದು ಇಲ್ಲ ವಿಜಯ್ ಪ್ರಮಾಣ ವಚನ-Video

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ: ಇಂದು ಪ್ರಮಾಣ ವಚನ

ಮೇ 11ರಿಂದ ‘ಆಲ್ಕೋಹಾಲ್ ಇನ್ ಬೇವರೇಜ್’ ತೆರಿಗೆ ಜಾರಿ: ಮದ್ಯದ ದರಗಳಲ್ಲಿ ಭಾರೀ ಬದಲಾವಣೆ..!

BYSರನ್ನು ಸಿಎಂ ಕುರ್ಚಿಯಿಂದ ಇಳಿಸಿದವರೇ ಗೌರವ ಸಮಾರಂಭ ನಡೆಸುತ್ತಿದ್ದಾರೆ, ಇದು ಅಭಿಮಾನೋತ್ಸವವಲ್ಲ-ರಾಜಕೀಯ ಗಿಮಿಕ್; ಜಾರಕಿಹೊಳಿ

ಟಿವಿಕೆ ಉದಯಕ್ಕೆ ಕಾರಣ ದ್ರಾವಿಡ ಪಕ್ಷಗಳ ವೈಫಲ್ಯ ಕಾರಣ: ಬಿಜೆಪಿ ಸಂಸದ ಯದುವೀರ್

SCROLL FOR NEXT