ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್ 
ದೇಶ

ವಿಜಯ್ ಪ್ರಮಾಣ ವಚನ ಸ್ವೀಕಾರ: ಮೊದಲ ದಿನವೇ ತಗಾದೆ ತೆಗೆದ CPI, ಜನಗಣಮನ, ವಂದೇ ಮಾತರಂ ಕುರಿತು ಅಸಮಾಧಾನ!

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಟ ವಿಜಯ್ ಗೆ ಪ್ರಮಾಣವಚನ ಬೋಧಿಸಿದರು.

ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ಆಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಟಿವಿಕೆ ಮೈತ್ರಿ ಪಕ್ಷ ಸಿಪಿಐ ತಗಾದೆ ತೆಗೆದಿದೆ.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್‌ ವಿಜಯ್‌ ಅವರು ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣವಚನ ಬೋಧಿಸಿದರು.

ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ವಾಡಿಕೆಗಳನ್ನು ಮುರಿದು ವಿಜಯ್ ಅವರ ಟಿವಿಕೆ ಪಕ್ಷವು ಡಿಎಂಕೆಯ ಮೈತ್ರಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದೆ. ಅಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೇರಿದ ಮೊದಲ ದ್ರಾವಿಡಯೇತರ ಪಕ್ಷ ಎನಿಸಿದೆ.

ಮೊದಲ ದಿನವೇ ತಗಾದೆ ತೆಗೆದ CPI

ಇನ್ನು ನಟ ವಿಜಯ್ ಟಿವಿಕೆ ಪಕ್ಷ ಅಧಿಕಾರಕ್ಕೇರಿದ ಮೊದಲ ದಿನವೇ ಅದರ ಮೈತ್ರಿ ಪಕ್ಷ ಸಿಪಿಐ ಅಸಮಾಧಾನ ವ್ಯಕ್ತಪಡಿಸಿದ್ದು, ಜನಗಣಮನ, ವಂದೇ ಮಾತರಂ ಕುರಿತು ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಇಷ್ಟಕ್ಕೂ ವಿವಾದವೇನು? ಸಿಪಿಐ ಆರೋಪವೇನು?

ತಮಿಳುನಾಡಿನ ಮುಖ್ಯಮಂತ್ರಿಯಾಗಿ C Joseph Vijay ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ವಂದೇ ಮಾತರಂ, ಜನಗಣಮನ ಮತ್ತು ತಮಿಳು ರಾಜ್ಯಗೀತೆ 'ತಮಿಳ್ ತಾಯಿ ವಾಳ್ತು' ಮೂರು ಹಾಡುಗಳನ್ನು ಹಾಡಲಾಗಿತ್ತು. ಇದೇ ವಿಚಾರವಾಗಿ ಸಿಪಿಐ ತಗಾದೆ ತೆಗೆದಿದ್ದು, ತಮಿಳು ರಾಜ್ಯ ಗೀತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ಎಂ ವೀರಪಾಂಡಿಯನ್, 'ಸರ್ಕಾರದ ಕಾರ್ಯಕ್ರಮಗಳ ಪ್ರೋಟೋಕಾಲ್‌ನಲ್ಲಿ Tamil Thaai Vaazhthu ಗೆ ಅಗ್ರ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ. ಆ ಸಮಾರಂಭದಲ್ಲಿ ಮೊದಲು Vande Mataram, ನಂತರ ರಾಷ್ಟ್ರೀಯ ಗೀತೆ Jana Gana Mana ಹಾಗೂ ಮೂರನೇ ಸ್ಥಾನದಲ್ಲಿ ತಮಿಳ್ ತಾಯಿ ವಾಳ್ತು ಹಾಡಿಸಲಾಯಿತು ಎಂದು ಹೇಳಿದ್ದಾರೆ.

ಸಮಾರಂಭದಲ್ಲಿ ತಮಿಳ್ ತಾಯಿ ವಾಳ್ತುವನ್ನು ಮೂರನೇ ಸ್ಥಾನದಲ್ಲಿ ಇರಿಸಲಾಗಿತ್ತು. ವಂದೇ ಮಾತರಂ ಮತ್ತು ರಾಷ್ಟ್ರೀಯ ಗೀತೆಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ನೀಡಲಾಗಿತ್ತು. ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳು ಪರಂಪರೆಯಂತೆ ತಮಿಳ್ ತಾಯಿ ವಾಳ್ತುವಿನಿಂದ ಆರಂಭವಾಗಿ ರಾಷ್ಟ್ರೀಯ ಗೀತೆಯೊಂದಿಗೆ ಅಂತ್ಯಗೊಳ್ಳುತ್ತವೆ ಎಂದು ಅವರು ಹೇಳಿದರು.

ವಂದೇ ಮಾತರಂ ಬೇಡವಾಗಿತ್ತು

ಇದೇ ವೇಳೆ ವಂದೇ ಮಾತಂರಗೂ ತಗಾದೆ ತೆಗೆದಿರುವ ಪಾಂಡಿಯನ್, 'ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ Vande Mataram ರಾಷ್ಟ್ರೀಯ ಗೀತೆಯಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟಗೊಂಡಿತ್ತು. ಈ ಹಾಡು ಒಂದು ನಿರ್ದಿಷ್ಟ ದೇವತೆಯನ್ನು ಸಮರ್ಪಿತವಾಗಿದ್ದು, ಧಾರ್ಮಿಕ ಪಂಗಡೀಯ ಸ್ವಭಾವ ಹೊಂದಿದೆ. ಈ ಹಿನ್ನೆಲೆಯಲ್ಲಿ, ಲೋಕಭವನದ ನಿರ್ದೇಶನದಡಿ ತೆಗೆದುಕೊಳ್ಳಲಾಗಿದೆ ಎನ್ನಲಾದ ನಿರ್ಧಾರದಂತೆ ವಂದೇ ಮಾತರಂಗೆ ಮೊದಲ ಸ್ಥಾನ ನೀಡಿ, ತಮಿಳ್ ಆಹ್ವಾನ ಗೀತೆಯನ್ನು ಮೂರನೇ ಸ್ಥಾನಕ್ಕೆ ಇಳಿಸಿರುವುದು ಸ್ಥಾಪಿತ ಸಂಪ್ರದಾಯದ ಉಲ್ಲಂಘನೆ' ಎಂದು ಅವರು ಆರೋಪಿಸಿದರು.

ಅಲ್ಲದೆ ಈ ತಪ್ಪಿಗೆ ಯಾರು ಹೊಣೆ ಎಂಬುದನ್ನು ಸ್ಪಷ್ಟಪಡಿಸಿ ತಮಿಳುನಾಡು ಸರ್ಕಾರ ಸಾರ್ವಜನಿಕವಾಗಿ ವಿವರಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಸಮಾರಂಭದಲ್ಲಿ ಭಾಗಿಯಾಗಿದ್ದ Tamilaga Vettri Kazhagam ಪಕ್ಷವು ತಮಿಳ್ ತಾಯಿ ವಾಳ್ತುವಿಗೆ ಅದರ ಯೋಗ್ಯ ಸ್ಥಾನವನ್ನು ಮರುಸ್ಥಾಪಿಸುವಂತೆ ನೋಡಿಕೊಳ್ಳಬೇಕು. ಇಂತಹ ತಪ್ಪು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೂಡ ಪಾಂಡಿಯನ್ ಆಗ್ರಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸಿಎಂ ಆಯ್ಕೆ: ಕೆಸಿ ವೇಣುಗೋಪಾಲ್ ರಾಹುಲ್ ಗಾಂಧಿಯ ಆದ್ಯತೆ; ಕುತೂಹಲ ಮೂಡಿಸಿದ ಖಾಸಗಿ ಭೇಟಿ!

ಸಿಎಂ ಪದಗ್ರಹಣ ಕಾರ್ಯಕ್ರಮ: 74 ವರ್ಷಗಳ ತಮಿಳು ಪರಂಪರೆ, ಸಂಪ್ರದಾಯ ಮುರಿದ ವಿಜಯ್!

ತಮಿಳುನಾಡು ಸಿಎಂ ಆಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕಾರ; 74 ವರ್ಷಗಳ ದಾಖಲೆ ಪತನ!

IFS ಪರೀಕ್ಷೆಯಲ್ಲಿ ರೈತನ ಪುತ್ರ ದೇಶಕ್ಕೆ ಪ್ರಥಮ Rank: ಬೆಳಗಾವಿಗೆ ಸಂತಸದ ಕ್ಷಣ!

ತಿರುಚಿರಾಪಳ್ಳಿ ವಿಧಾನಸಭೆ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ TVK ಮುಖ್ಯಸ್ಥ ವಿಜಯ್!

SCROLL FOR NEXT