ಕೆ ಸಿ ವೇಣುಗೋಪಾಲ್  
ದೇಶ

ಕೇರಳ ಸಿಎಂ ರೇಸ್‌ನಲ್ಲಿ ಕೆ.ಸಿ ವೇಣುಗೋಪಾಲ್ ಮೇಲುಗೈ; ಇಂದು ಹೈಕಮಾಂಡ್ ಅಂತಿಮ ನಿರ್ಧಾರ ಸಾಧ್ಯತೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಹೊಸದಾಗಿ ಆಯ್ಕೆಯಾದ ಬಹುಪಾಲು ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿರುವಂತೆ ಕಾಣುತ್ತಿದೆ.

ನವದೆಹಲಿ/ತಿರುವನಂತಪುರಂ: ಕೇರಳದ ಮುಂದಿನ ಮುಖ್ಯಮಂತ್ರಿಯ ಆಯ್ಕೆ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರ ಕುರಿತು ಕುತೂಹಲ ಹೆಚ್ಚುತ್ತಿರುವ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಜಿ ಕೆಪಿಸಿಸಿ ಅಧ್ಯಕ್ಷರು ಮತ್ತು ಹಿರಿಯ ನಾಯಕರೊಂದಿಗೆ ನಡೆಸಿದ ಸಮಾಲೋಚನೆಗಳು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರಿಗೆ ದೊಡ್ಡ ಹಿನ್ನಡೆಯಾಗಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಹೊಸದಾಗಿ ಆಯ್ಕೆಯಾದ ಬಹುಪಾಲು ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿರುವಂತೆ ಕಾಣುತ್ತಿದ್ದು, ಪಕ್ಷ ಇಂದು ತನ್ನ ಅಂತಿಮ ಆಯ್ಕೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಲ ನಾಯಕರ ಒತ್ತಡ ತಂತ್ರವಾಗಿ ರೂಪಿಸಿದ್ದವು. ಈ ಬೆಳವಣಿಗೆಗಳು ಪಕ್ಷದ ನಾಯಕತ್ವವನ್ನು ಅಸಮಾಧಾನಗೊಳಿಸಿದ್ದು, ಇದರಿಂದ ವೇಣುಗೋಪಾಲ್ ಅವರಿಗೆ ಅವಕಾಶಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ರಾಹುಲ್ ಗಾಂಧಿ ಮುಂದಿನ ಮುಖ್ಯಮಂತ್ರಿ ಕುರಿತು ನಾಯಕರ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆ ಇದ್ದರೂ, “ಆ ವಿಷಯವೇ ಚರ್ಚೆಗೆ ಬಂದಿಲ್ಲ ಎಂದು ಹಿರಿಯ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಬಹುತೇಕ ನಾಯಕರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ಪಕ್ಷದ ವೀಕ್ಷಕರಿಗೆ ತಿಳಿಸಿದ್ದರು ಎಂದು ಅವರು ಹೇಳಿದರು.

ಒಂದು ಹಂತದಲ್ಲಿ, ಪಕ್ಷದ ಅಧಿಕೃತ ಪ್ರಚಾರಕ್ಕಾಗಿ ರಚಿಸಲಾದ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಹೇಗೆ ದುರುಪಯೋಗ ಮಾಡಲಾಗುತ್ತಿದೆ ಎಂಬುದರ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಹೊರಗಿನ ಕೆಲವು ವಲಯಗಳು ಲಾಬಿ ಮತ್ತು ಹಿಂದಿನಿಂದ ಒತ್ತಡ ತಂತ್ರಗಳ ಮೂಲಕ ಪಕ್ಷದ ನಿರ್ಧಾರ ಪ್ರಕ್ರಿಯೆಗೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಕೂಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮತ್ತೊಬ್ಬ ನಾಯಕ ಹೇಳಿದರು.

ರಾಹುಲ್ ಗಾಂಧಿ ಅವರು ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಕೆ ಮುರಳೀಧರನ್, ವಿ ಎಂ ಸುಧೀರನ್ ಮತ್ತು ಎಂ ಎಂ ಹಾಸನ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ತಿರುವಂಕೂರು ರಾಧಾಕೃಷ್ಣನ್ ಹಾಗೂ ಕಾರ್ಯಾಧ್ಯಕ್ಷರಾದ ಎ ಪಿ ಅನಿಲ್ ಕುಮಾರ್, ಪಿ ಸಿ ವಿಷ್ಣುನಾಥ್ ಮತ್ತು ಶಾಫಿ ಪರಂಬಿಲ್ ಅವರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದರು.

ಇದಲ್ಲದೆ, ಮುನ್ನಪಲ್ಲಿ ರಾಮಚಂದ್ರನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಹ ಸಭೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೆಶೆಲ್ಸ್‌ನಿಂದ ಪ್ರಧಾನಿ ಮೋದಿಗೆ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಗೌರವ: ಹಿಂದೂ ಮಹಾಸಾಗರ ಅವಕಾಶಗಳ ಆಗರ

ರಾಮ ಮಂದಿರ ದೇಣಿಗೆ ದುರುಪಯೋಗ ಕೇಸ್: ಆರೋಪಿಗಳ ಪರ ವಾದಿಸಲು ವಕೀಲರ ಹಿಂದೇಟು; ಬುಲ್ಡೋಜರ್ ಕ್ರಮಕ್ಕೆ ಆಗ್ರಹ!

India vs Ireland 2nd t20: ಭಾರತಕ್ಕೆ ಸೋಲು; 1 ರನ್ ನಿಂದ ಗೆದ್ದ ಐರ್ಲೆಂಡ್ ಗೆ ಸರಣಿ!

ಲೋಹದ ಹಕ್ಕಿಗಳ ಪ್ರತ್ಯೇಕ ಅಪಘಾತ: ಸೌದಿ 14 ಹಾಗೂ ಫ್ರಾನ್ಸ್‌ನಲ್ಲಿ 11 ಸೇರಿ 25 ಮಂದಿ ದುರ್ಮರಣ

ಟೆಸ್ಟ್ ಪಂದ್ಯದ ಮಧ್ಯೆ ಬೆನ್ ಸ್ಟೋಕ್ಸ್ ಹಠಾತ್ ನಿವೃತ್ತಿ ಘೋಷಿಸಿ, ಕ್ರಿಕೆಟ್‌ಗೆ ವಿದಾಯ!