ಸಾಂಕೇತಿಕ ಚಿತ್ರ  
ದೇಶ

CBSE Class 12 results: 2.6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫೇಲ್

ಮಂಡಳಿಯ ಪ್ರಕಾರ, ದೇಶದಾದ್ಯಂತ ಒಟ್ಟು 17,80,365 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 17,68,968 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 15,07,109 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಈ ವರ್ಷದ 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು ಉತ್ತೀರ್ಣ ಪ್ರಮಾಣ 85.2% ದಾಖಲಾಗಿದೆ. ಇದು ಕಳೆದ ವರ್ಷದ 88.39% ಜೊತೆ ಹೋಲಿಸಿದರೆ 3.19 ಶೇಕಡಾ ಅಂಕಗಳ ಕುಸಿತವಾಗಿದೆ.

ಮಂಡಳಿಯ ಪ್ರಕಾರ, ದೇಶದಾದ್ಯಂತ ಒಟ್ಟು 17,80,365 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 17,68,968 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 15,07,109 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಒಟ್ಟು ಫಲಿತಾಂಶದಲ್ಲಿ ಈ ಬಾರಿ ಕೂಡ ಬಾಲಕಿಯರು ಬಾಲಕರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಲಿಂಗ ಅಂತರ 6.73 ಶೇಕಡಾ ಅಂಕಗಳಷ್ಟಿದ್ದು, ಹಿಂದಿನ ವರ್ಷಗಳಂತೆ ಈ ಬಾರಿಯೂ ಅದೇ ಪ್ರವೃತ್ತಿ ಮುಂದುವರಿದಿದೆ. ಶೈಕ್ಷಣಿಕ ಸ್ಪರ್ಧೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಂಡಳಿ ಟಾಪರ್ ಪಟ್ಟಿ ಪ್ರಕಟಿಸಿಲ್ಲ.

ತಿರುವನಂತಪುರ ಪ್ರದೇಶವು 95.62% ಉತ್ತೀರ್ಣ ಪ್ರಮಾಣದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ ಪ್ರದೇಶವಾಗಿ ಹೊರಹೊಮ್ಮಿದರೆ, ಪ್ರಯಾಗ್‌ರಾಜ್ 72.43% ಉತ್ತೀರ್ಣ ಪ್ರಮಾಣದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ವಿದ್ಯಾರ್ಥಿಗಳು ಅಧಿಕೃತ ಸಿಬಿಎಸ್ಇ ವೆಬ್‌ಸೈಟ್, ಮಂಡಳಿಯ ಫಲಿತಾಂಶ ಪೋರ್ಟಲ್, ಡಿಜಿಲಾಕರ್ ಹಾಗೂ ಉಮಂಗ್ ಆಪ್ ಸೇರಿದಂತೆ ಹಲವು ಅಧಿಕೃತ ವೇದಿಕೆಗಳ ಮೂಲಕ ಡಿಜಿಟಲ್ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಬಹುದು. ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಎಸ್‌ಎಂಎಸ್ ಸೇವೆಯ ಮೂಲಕವೂ ಫಲಿತಾಂಶ ಪಡೆಯುವ ವ್ಯವಸ್ಥೆಯನ್ನು ಮಂಡಳಿ ಕಲ್ಪಿಸಿದೆ.

ಈ ವರ್ಷದ ಪರೀಕ್ಷೆಗಳು ಫೆಬ್ರವರಿ 17ರಿಂದ ಏಪ್ರಿಲ್ 10ರವರೆಗೆ ಭಾರತ ಮತ್ತು ವಿದೇಶಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಒಂದೇ ಅವಧಿಯಲ್ಲಿ ಪರೀಕ್ಷೆ ನಡೆದಿದ್ದವು.

ವಿದೇಶಗಳಲ್ಲಿರುವ ಸಿಬಿಎಸ್ಇ ಅಂಗಸಂಸ್ಥೆ ಶಾಲೆಗಳ ವಿದ್ಯಾರ್ಥಿಗಳ ಸಾಧನೆಯೂ ಈ ಬಾರಿ ಕುಸಿತ ಕಂಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 185 ವಿದೇಶಿ ಶಾಲೆಗಳು ಮತ್ತು 115 ಪರೀಕ್ಷಾ ಕೇಂದ್ರಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದವು. ಒಟ್ಟು 24,047 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 24,009 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 21,728 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಿದೇಶಿ ಶಾಲೆಗಳ ಒಟ್ಟು ಉತ್ತೀರ್ಣ ಪ್ರಮಾಣ 90.5% ಆಗಿದೆ.

ವಿದೇಶಿ ಶಾಲೆಗಳಲ್ಲಿಯೂ ಬಾಲಕಿಯರು ಬಾಲಕರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ಉತ್ತೀರ್ಣ ಪ್ರಮಾಣ 92.23% ಆಗಿದ್ದರೆ, ಬಾಲಕರದು 88.69% ಆಗಿದೆ. ಕಳೆದ ವರ್ಷ ವಿದೇಶಿ ಶಾಲೆಗಳ ಒಟ್ಟು ಉತ್ತೀರ್ಣ ಪ್ರಮಾಣ 95.01% ಇದ್ದು, ಈ ಬಾರಿ 4.51 ಶೇಕಡಾ ಅಂಕಗಳ ಕುಸಿತ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ