ಖ್ವಾಜಾ ಮೊಯಿಜುದ್ದೀನ್ 
ದೇಶ

ವಕ್ಫ್ ಬೋರ್ಡ್ ಪರ ವಾದಿಸುತ್ತಿದ್ದ ಹಿರಿಯ ವಕೀಲ ಖ್ವಾಜಾಗೆ ಸ್ಕಾರ್ಪಿಯೋ ಡಿಕ್ಕಿ; ಸ್ಥಳದಲ್ಲೇ ಸಾವು, Video!

ಮೇ 23ರಂದು ಹೈದರಾಬಾದ್‌ನಲ್ಲಿ ಹಿರಿಯ ವಕೀಲ ಖ್ವಾಜಾ ಮೊಯಿಜುದ್ದೀನ್ ಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇದು ಪೂರ್ವಯೋಜಿತ ಕೊಲೆಯ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹೈದರಾಬಾದ್: ಮೇ 23ರಂದು ಹೈದರಾಬಾದ್‌ನಲ್ಲಿ ಹಿರಿಯ ವಕೀಲ ಖ್ವಾಜಾ ಮೊಯಿಜುದ್ದೀನ್ ಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇದು ಪೂರ್ವಯೋಜಿತ ಕೊಲೆಯ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಖ್ವಾಜಾ ಮೊಯಿಜುದ್ದೀನ್ ಮನೆಯಿಂದ ಹೊರಬಂದು ತಮ್ಮ ಕಾರನ್ನು ಹತ್ತಲು ಹೊರಟಿದ್ದಾಗ, ಹಸಿರು ಬಣ್ಣದ ಸ್ಕಾರ್ಪಿಯೋ ಕಾರು ಅವರಿಗೆ ಡಿಕ್ಕಿ ಹೊಡೆದಿತ್ತು.

ಹೈದರಾಬಾದ್‌ನಲ್ಲಿ ನಡೆದ ಘಟನೆಯ ವೀಡಿಯೊ ಕೂಡ ಹೊರಬಿದ್ದಿದೆ. ವೀಡಿಯೊದಲ್ಲಿ 63 ವರ್ಷದ ವಕೀಲ ಮೊಯಿಜುದ್ದೀನ್ ತಮ್ಮ ಕಾರಿನಲ್ಲಿ ಚೀಲವನ್ನು ಇಡುವುದನ್ನು ಕಾಣಬಹುದು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಕಾರಿನಿಂದ ಸುಮಾರು 15-20 ಅಡಿಗಳಷ್ಟು ದೂರಕ್ಕೆ ಬಿದ್ದರು. ಕೂಡಲೇ ಸ್ಥಳೀಯರು ವಕೀಲ ಮೊಯಿಜುದ್ದೀನ್ ಅವರನ್ನು ಮಹಾವೀರ್ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಹಿಟ್-ಅಂಡ್-ರನ್ ಪ್ರಕರಣವನ್ನು ದಾಖಲಿಸಲಾಗಿದೆ. ವಾಹನವನ್ನು ಪತ್ತೆಹಚ್ಚಲು ಮತ್ತು ಆರೋಪಿಗಳನ್ನು ಗುರುತಿಸಲು ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಟುಂಬಸ್ಥರಿಂದ ಪಿತೂರಿ ಶಂಕೆ

ವಕ್ಫ್ ಭೂಮಿಯ ಅತಿಕ್ರಮಕ್ಕೆ ಸಂಬಂಧಿಸಿದ ದೀರ್ಘಕಾಲದ ಕಾನೂನು ವಿವಾದಗಳಿಗೆ ಸಂಬಂಧಿಸಿದ ಉದ್ದೇಶಪೂರ್ವಕ ಪಿತೂರಿ ಈ ಘಟನೆ ಎಂದು ವಕೀಲ ಮೊಯಿಜುದ್ದೀನ್ ಅವರ ಕುಟುಂಬ ಆರೋಪಿಸಿದೆ. ಮೊಯಿಜುದ್ದೀನ್ ಅವರು ವಕ್ಫ್ ಆಸ್ತಿಗಳ ಅಕ್ರಮ ಆಕ್ರಮಣ ಮತ್ತು ಖಾಸಗೀಕರಣಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳಲ್ಲಿ ಹೋರಾಡುತ್ತಿದ್ದಾರೆ ಎಂದು ಅವರ ಮಗ ಮತ್ತು ವಕೀಲ ಮೊಹಮ್ಮದ್ ಫರ್ಹಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್