ಮಮತಾ ಬ್ಯಾನರ್ಜಿ 
ದೇಶ

BJP ವಿರುದ್ಧ ಕೊನೆಯವರೆಗೂ ಹೋರಾಡುತ್ತೇವೆ, ಬಿಡುವ ಮಾತೇ ಇಲ್ಲ: ಮಮತಾ ಬ್ಯಾನರ್ಜಿ

ಫೇಸ್‌ಬುಕ್ ಲೈವ್ ಭಾಷಣದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ತಿರುಚಲಾಗಿದೆ ಎಂದು ಆರೋಪಿಸಿದರು.

ಕೋಲ್ಕತ್ತಾ: BJP ವಿರುದ್ಧ ಕೊನೆಯವರೆಗೂ ಹೋರಾಡುತ್ತೇವೆ, ಬಿಡುವ ಮಾತೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.

ಫೇಸ್‌ಬುಕ್ ಲೈವ್ ಭಾಷಣದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ತಿರುಚಲಾಗಿದೆ. ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ಜನಪ್ರಿಯ ಜನಾದೇಶವನ್ನು ತಿರುಚಲಾಗಿದೆ ಎಂದು ಆರೋಪಿಸಿದರು.

ಗೆಲುವಿನ ಸ್ಥಾನಗಳನ್ನು ಕಳೆದುಕೊಳ್ಳುವ ಸ್ಥಾನಗಳಾಗಿ ಮತ್ತು ಸೋತ ಸ್ಥಾನಗಳನ್ನು ಗೆಲ್ಲುವಿನ ಸ್ಥಾನಗಳಾಗಿ ಮಾಡಲಾಗಿದೆ. ಇಲ್ಲದಿದ್ದರೆ ಟಿಎಂಸಿ 220 ರಿಂದ 230 ಸ್ಥಾನಗಳನ್ನು ಪಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಜೂನ್ ಮೊದಲ ವಾರದಲ್ಲಿ ಇಂಡಿಯಾ ಬಣದ ಸದಸ್ಯರು ಜಂಟಿ ಕಾರ್ಯತಂತ್ರ ಕುರಿತು ಚರ್ಚಿಸಲು ಸಭೆ ಸೇರುವ ಸಾಧ್ಯತೆಯಿದೆ. ಧೀರ್ಘಕಾಲದ ರಾಜಕೀಯ ಕದನಕ್ಕೆ ವಿರೋಧಿ ಬಣ ಸಜ್ಜಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಆರೋಪಗಳನ್ನು ತಿರಸ್ಕರಿಸಿದ ಹಿರಿಯ ಬಿಜೆಪಿ ನಾಯಕಿ ಕೀಯಾ ಘೋಷ್, ಜನಾದೇಶ ಸ್ವೀಕರಿಸಲು ಬ್ಯಾನರ್ಜಿ ನಿರಾಕರಿಸಿದ್ದಾರೆ ಮತ್ತು ಪಿತೂರಿ ಸಿದ್ಧಾಂತಗಳ ಮೂಲಕ ಸೋಲನ್ನು ವಿವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2011, 2016 ಮತ್ತು 2021 ರ ಗೆಲುವನ್ನು ಕಾನೂನುಬದ್ಧವೆಂದು ಒಪ್ಪಿಕೊಂಡಿದ್ದರೂ, ಈಗ ಯಾಕೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಘೋಷ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್-US ಕದನ ವಿರಾಮದ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ| video

ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ಜಾಹ್ನವಿ!

ಗೋಹತ್ಯೆ ನಿಲ್ಲಬೇಕೆ?: ಮೊದಲು ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ: ಬಕ್ರೀದ್'ಗೂ ಮುನ್ನ ಮುಸ್ಲಿಂ ಸಂಘಟನೆಗಳ ಒತ್ತಾಯ!

IPL 2026: ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್‌ಗೆ ಎಂಟ್ರಿಕೊಟ್ಟ ರಾಜಸ್ಥಾನ ರಾಯಲ್ಸ್; ಪಂಜಾಬ್, KKR ಕನಸು ಭಗ್ನ!

IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್

SCROLL FOR NEXT