ರಕ್ಷಣಾ ಕಾರ್ಯಾಚರಣೆ 
ದೇಶ

ಅಂಬೇನಾಲಿ ಘಾಟ್​ನಲ್ಲಿ ಭಯಾನಕ ಅಪಘಾತ: ಸಾವಿರ ಅಡಿ ಆಳದ ಪ್ರಪಾತಕ್ಕೆ ಬಿದ್ದ SUV ಕಾರು; 8 ಯುವಕರು ಸಾವು!

ಪಶ್ಚಿಮ ಘಟ್ಟದ ​​ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಅಂಬೆನಾಲಿ ಘಾಟ್ ಬಳಿಯ ಮಹಾಬಲೇಶ್ವರ-ಪೋಲಾದ್‌ಪುರ ರಸ್ತೆಯಲ್ಲಿ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ಭಯಾನಕ ಅಪಘಾತ ಸಂಭವಿಸಿದ್ದು, ಎಸ್‌ಯುವಿ ಕಾರೊಂದು ಒಂದು ಸಾವಿರ ಅಡಿ ಆಳವಾದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಎಂಟು ಪ್ರವಾಸಿಗರು ಮೃತಪಟ್ಟಿದ್ದಾರೆ.

ಪಶ್ಚಿಮ ಘಟ್ಟದ ​​ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಅಂಬೆನಾಲಿ ಘಾಟ್ ಬಳಿಯ ಮಹಾಬಲೇಶ್ವರ-ಪೋಲಾದ್‌ಪುರ ರಸ್ತೆಯಲ್ಲಿ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ಮೃತ ಯುವಕರು ಸತಾರಾ ಜಿಲ್ಲೆಯ ನಿವಾಸಿಗಳಾಗಿದ್ದು, ದುರಂತ ಸಂಭವಿಸಿದಾಗ ದಪೋಲಿಯಿಂದ ಸತಾರಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸತಾರಾ ನಿವಾಸಿಗಳಾದ ರಿತೇಶ್ ಲೋಖಂಡೆ(22), ಸುಹಾಸ್ ಲೋಖಂಡೆ(20)ಸ ಉತ್ಕರ್ಷ್ ಶಿಂಗ್ಟೆ(21), ನಿಖಿಲ್ ಶಿಂಗ್ಟೆ(25), ಮಹೇಶ್ ಪವಾರ್(25), ಆದಿತ್ಯ ಸಾಳುಂಖೆ(21), ರಾಜೇಶ್ ಕಾಟ್ಕರ್(35) ಹಾಗೂ ರತ್ನಿಗಿರಿಯ ಅಂಶ್ ಚವಾಣ್(19) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ 8 ಯುವಕರು ಸ್ಕಾರ್ಪಿಯೋ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಕಡಿದಾದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಳವಾದ ಪ್ರಪಾತಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು: ಕಾನೂನು ಕ್ರಮ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಸೂಚನೆ

ತಮಿಳುನಾಡು: AIADMK ಮೂವರು ಶಾಸಕರು ರಾಜೀನಾಮೆ, ಟಿವಿಕೆಗೆ ಸೇರ್ಪೆಡೆ, ಪಳನಿಸ್ವಾಮಿಗೆ ಮತ್ತೊಂದು ಹೊಡೆತ!

ಯುದ್ಧ 3ನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ '3F' ಮೇಲೆ ನಿಗಾ ವಹಿಸುವಂತೆ ಕೇಂದ್ರ ಸಚಿವೆ ಸೀತಾರಾಮನ್ ಕರೆ; Video

'ಡಿಜಿಟಲ್ ಅರೆಸ್ಟ್': 24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ನಿವೃತ್ತ ಶಿಕ್ಷಕಿ; ವಿವಿಧ ರಾಜ್ಯಗಳ ಆರು ಜನರ ಬಂಧನ!

Love, Marriage, Disputes: ಆನ್ ಲೈನ್ ಜ್ಯೋತಿಷ್ಯ ಹಗರಣ, 60,00,000 ಕ್ಕೂ ಅಧಿಕ ಹಣ ಲೂಟಿ! ಖತರ್ನಾಕ್ ಗ್ಯಾಂಗ್ ಬಂಧನ

SCROLL FOR NEXT