ಸಾಂದರ್ಭಿಕ ಚಿತ್ರ 
ದೇಶ

Love, Marriage, Disputes: ಆನ್ ಲೈನ್ ಜ್ಯೋತಿಷ್ಯ ಹಗರಣ, 60 ಲಕ್ಷ ರೂ ಗೂ ಅಧಿಕ ಹಣ ಲೂಟಿ! ಖತರ್ನಾಕ್ ಗ್ಯಾಂಗ್ ಬಂಧನ

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋಸದ ಪ್ರೊಫೈಲ್‌ ರಚಿಸುವ ಮೂಲಕ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮದಾಬಾದ್: ಪ್ರೀತಿ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತೇವೆ ಎಂದು ಆನ್ ಲೈನ್ ಜ್ಯೋತಿಷ್ಯದ ಹೆಸರಿನಲ್ಲಿ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು 60 ಲಕ್ಷಕ್ಕೂ ಹೆಚ್ಚು ಹಣ ಲೂಟಿ ಮಾಡಿದ್ದ ಖತರ್ನಾಕ್ ಅಂತರ್ ರಾಜ್ಯ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಸೈಬರ್ ಪೊಲೀಸರು ನಡೆಸಿದ ಕಠಿಣ ತಾಂತ್ರಿಕ ವಿಶ್ಲೇಷಣೆ ಮತ್ತು ಮಾನವ ಗುಪ್ತಚರರ ಮಾಹಿತಿ ಸಂಗ್ರಹದ ನಂತರ ವಂಚನೆ ಬೆಳಕಿಗೆ ಬಂದಿದ್ದು, ರಾಜಸ್ಥಾನದಿಂದ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಬಂಧಿಸಲಾಗಿದೆ.

ಜ್ಯೋತಿಷಿ ಪೂಜಾ ಕಿನ್ನರ್ ಮಾ' ಮತ್ತು 'ಆಚಾರ್ಯ ವಿಕಾಸಶಾಸ್ತ್ರಿ' ನಂತಹ ವಂಚನೆಯ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋಸದ ಪ್ರೊಫೈಲ್‌ ರಚಿಸುವ ಮೂಲಕ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ, ಮದುವೆ ಮತ್ತು ಕುಟುಂಬ ವಿವಾದಗಳಂತಹ ಸೂಕ್ಷ್ಮ ವೈಯಕ್ತಿಕ ವಿಷಯಗಳನ್ನು ಪರಿಹರಿಸುವ ಸಾಮರ್ಥ್ಯವಿರುವ ಜ್ಯೋತಿಷಿಯಂತೆ ನಟಿಸಿ, ಪರಿಹಾರ ಹುಡುಕುವ ಹತಾಶ ವ್ಯಕ್ತಿಗಳ ವಿಶ್ವಾಸವನ್ನು ಗಳಿಸುತ್ತಿದ್ದರು. ಅವರು ಒಂದು ಬಾರಿ ಸಂಪರ್ಕಕ್ಕೆ ಬಂದ ನಂತರ ದುಷ್ಕರ್ಮಿಗಳು, ವಶೀಕರಣ' ಮಾಡುವ ಸೋಗಿನಲ್ಲಿ ಸಂತ್ರಸ್ತರಿಂದ ವೈಯಕ್ತಿಕ ಪೋಟೋಗಳನ್ನು ಹಂಚಿಕೊಳ್ಳಲು ಮನವೊಲಿಸುತ್ತದ್ದರು. ಬಳಿಕ ಆ ಪೋಟೋಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಅಲ್ಲದೇ ಸಾರ್ವಜನಿಕರಿಗೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಹಲವು ಸಂತ್ರಸ್ತರಿಗೆ ನೇರ ವೀಡಿಯೊ ಕರೆ ಮಾಡುವ ಮೂಲಕ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅದನ್ನು ರೆಕಾರ್ಡ್ ಮಾಡಿಕೊಂಡು ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 60 ಲಕ್ಷ ರೂಪಾಯಿಗಳ ಒಟ್ಟು ವಹಿವಾಟುಗಳು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ಸುಮಾರು ಮುನ್ನೂರು ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿದ್ದರು. 65 ಕ್ಕೂ ಹೆಚ್ಚು ವ್ಯಕ್ತಿಗಳು ವಂಚನೆಗೆ ಬಲಿಯಾಗಿರುವುದು ದೃಢಟ್ಟಿದೆ. ಆರೋಪಿಗಳು ನಿರ್ದಿಷ್ಟವಾಗಿ ಜ್ಯೋತಿಷ್ಯ ಮತ್ತು ಸಮಾಲೋಚನೆಯಲ್ಲಿ ಆಸಕ್ತಿ ತೋರಿಸಿದ 18 ರಿಂದ 35 ವರ್ಷದೊಳಗಿನ ಯುವಜನರನ್ನು ಟಾರ್ಗೆಟ್ ಮಾಡುತ್ತಿದದ್ದು ಕಂಡುಬಂದಿದೆ.

ಪ್ರಮುಖ ಆರೋಪಿ ರಜನೀಶ್ ಗೋವಿಂದ್ ಲಾಲ್ ಭಾರ್ಗವ್ ಅವರನ್ನು ಬಿಕಾನೇರ್‌ನಿಂದ ಬಂಧಿಸಲಾಗಿದೆ. ತರುವಾಯ, ಮತ್ತೊಬ್ಬ ಆರೋಪಿ ವಿಕಾಸ್ ಪೋಖ್ರಾಜ್ ಭಾರ್ಗವ್ ನನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಮೂರನೇ ಆರೋಪಿ ರವಿ ಸತ್ಯನಾರಾಯಣ ಭಾರ್ಗವ್ ನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.

ಈ ಡಿಜಿಟಲ್ ಹಗರಣದ ಹಿನ್ನೆಲೆಯಲ್ಲಿ ನಾಗರಿಕರು ವೈಯಕ್ತಿಕ ಜೀವನದ ಬಿಕ್ಕಟ್ಟುಗಳಿಗೆ ಅಲೌಕಿಕ ಪರಿಹಾರಗಳನ್ನು ಭರವಸೆ ನೀಡುವ ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಸುಲಭವಾಗಿ ನಂಬದಂತೆ ಹಾಗೂ ಪರಿಚಯ ಇಲ್ಲದ ವ್ಯಕ್ತಿಗಳೊಂದಿಗೆ ವೈಯಕ್ತಿಕ ಫೋಟೋ, ವೀಡಿಯೊಗಳು ಅಥವಾ ಗೌಪ್ಯ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳದಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel