ವಿಜಯ್ 
ದೇಶ

ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು: ಕಾನೂನು ಕ್ರಮ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಸೂಚನೆ

ಮೇಕೆದಾಟು ಯೋಜನೆಗೆ ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಿದ್ದು, ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದ ಟಿವಿಕೆ ಸರ್ಕಾರ ಸಹ ಅದೇ ನಿಲುವು ತಳೆದಿದೆ.

ಚೆನ್ನೈ: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಇದೀಗ ತಮಿಳುನಾಡು ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಸಹ ಅಡ್ಡಗಾಲು ಹಾಕುತ್ತಿದ್ದು, ಸೋಮವಾರ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಯ ಕುರಿತು ಪರಿಶೀಲನಾ ಸಭೆ ನಡೆಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಿದ್ದು, ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದ ಟಿವಿಕೆ ಸರ್ಕಾರ ಸಹ ಅದೇ ನಿಲುವು ತಳೆದಿದೆ.

ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಕ್ಕೆ ಉದ್ದೇಶಿತ "ಭೂಮಿ ಪೂಜೆ" ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

"ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ವಿವರವಾದ ಪರಿಶೀಲನಾ ಸಭೆ ನಡೆಸಲಾಯಿತು" ಎಂದು ಪ್ರಕಟಣೆ ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತು ಚರ್ಚಿಸಲಾಯಿತು, ಸುಪ್ರೀಂ ಕೋರ್ಟ್ ಕೊನೆಯದಾಗಿ ಕೇಂದ್ರ ತಜ್ಞರು ಮಾತ್ರ ನಿರ್ಧರಿಸಬಹುದು ಎಂಬ ಹಿಂದಿನ ತೀರ್ಪಿನ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತ್ತು.

"ಮೇಲೆ ತಿಳಿಸಿದ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿಟ್ಟುಕೊಂಡು ವಿವರವಾದ ಸಮಾಲೋಚನೆಗಳ ನಂತರ ಕಾನೂನು ಕ್ರಮಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ವಿಜಯ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ಸಂಪುಟ ಸಚಿವರಾದ ಎನ್ ಆನಂದ್, ಅಧವ್ ಅರ್ಜುನ ಮತ್ತು ಆರ್ ನಿರ್ಮಲ್‌ಕುಮಾರ್, ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ 3ನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ '3F' ಮೇಲೆ ನಿಗಾ ವಹಿಸುವಂತೆ ಕೇಂದ್ರ ಸಚಿವೆ ಸೀತಾರಾಮನ್ ಕರೆ

'ಡಿಜಿಟಲ್ ಅರೆಸ್ಟ್': 24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ನಿವೃತ್ತ ಶಿಕ್ಷಕಿ; ವಿವಿಧ ರಾಜ್ಯಗಳ ಆರು ಜನರ ಬಂಧನ!

Love, Marriage, Disputes: ಆನ್ ಲೈನ್ ಜ್ಯೋತಿಷ್ಯ ಹಗರಣ, 60,00,000 ಕ್ಕೂ ಅಧಿಕ ಹಣ ಲೂಟಿ! ಖತರ್ನಾಕ್ ಗ್ಯಾಂಗ್ ಬಂಧನ

'ಇಂದೇ ಬರೆದಿಟ್ಕೊಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಸರ್ಕಾರ': ಪವರ್​ ಶೇರಿಂಗ್​ ನಡುವೆಯೇ DCM ಬಿಗ್ ಸಂದೇಶ

ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು; ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!

SCROLL FOR NEXT