ಸಂಗ್ರಹ ಚಿತ್ರ 
ದೇಶ

Delhi Gymkhana Club ವಿವಾದ: ಏಕಾಏಕಿ ತೆರವುಗೊಳಿಸಲ್ಲ, ಕಾನೂನು ಪ್ರಕಾರವೇ ಕ್ರಮ; ಹೈಕೋರ್ಟ್‌ಗೆ ಕೇಂದ್ರದ ಭರವಸೆ..!

ಮೊದಲು ಕಾನೂನುಬದ್ಧ ನೋಟಿಸ್ ನೀಡಬೇಕಾಗುತ್ತದೆ. ಹೀಗಾಗಿ ಕಾನೂನು ಪ್ರಕ್ರಿಯೆ ಅನುಸರಿಸದೇ ಕ್ಲಬ್ ವಶಕ್ಕೆ ಪಡೆಯುವುದಿಲ್ಲ. ಜೂನ್ 5ರಂದು ತಕ್ಷಣ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನವದೆಹಲಿ: ದೆಹಲಿ ಜಿಮ್ಖಾನಾ ಕ್ಲಬ್ ಆವರಣವನ್ನು ಏಕಾಏಕಿ ವಶಕ್ಕೆ ಪಡೆಯುವುದಿಲ್ಲ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಕಾನೂನು ಪ್ರಕ್ರಿಯೆ ಅನುಸರಿಸಲಾಗುತ್ತದೆ ಎಂದು ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಂಗಳವಾರ ಭರವಸೆ ನೀಡಿದೆ.

ಲುಟಿಯನ್ಸ್‌ ದೆಹಲಿಯ 27.3 ಏಕರೆ ಪ್ರದೇಶದಲ್ಲಿರುವ ಕ್ಲಬ್ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು.

ನ್ಯಾಯಮೂರ್ತಿ ಅವನೀಶ್ ಜಿಂಗನ್ ಅವರಿದ್ದ ಪೀಠದ ಮುಂದೆ ಕೇಂದ್ರ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಮೊದಲು ಕಾನೂನುಬದ್ಧ ನೋಟಿಸ್ ನೀಡಬೇಕಾಗುತ್ತದೆ. ಹೀಗಾಗಿ ಕಾನೂನು ಪ್ರಕ್ರಿಯೆ ಅನುಸರಿಸದೇ ಕ್ಲಬ್ ವಶಕ್ಕೆ ಪಡೆಯುವುದಿಲ್ಲ. ಜೂನ್ 5ರಂದು ತಕ್ಷಣ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ನ್ಯಾಯಾಲಯ, ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಬಹುದೇ ಎಂದು ಪ್ರಶ್ನಿಸಿದಾಗ, ತುಷಾರ್ ಮೆಹ್ತಾ ಅದನ್ನು ಅಫಿಡವಿಟ್ ಮೂಲಕ ಸಲ್ಲಿಸಲಾಗುವುದು ಎಂದು ಹೇಳಿದರು.

ಪೊಲೀಸರು ಏಕಾಏಕಿ ಒಳನುಗ್ಗುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತದೆ. ಜೂನ್ 5 ರಂದು ಸ್ವಯಂಪ್ರೇರಣೆಯಿಂದ ಖಾಲಿ ಮಾಡಲು ಒಂದು ಆಯ್ಕೆಯಾಗಿ ನೀಡಲಾಗಿದೆ. ಸ್ಥಳಾಂತರಗೊಳ್ಳಲು ಸರ್ಕಾರವು ಪರ್ಯಾಯ ಭೂಮಿಯನ್ನು ನೀಡಬಹುದು ಎಂದು ತಿಳಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, “100 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕ್ಲಬ್ ಜುಲೈ ವರೆಗೆ (ನ್ಯಾಯಾಲಯವು ಈ ವಿಷಯವನ್ನು ಮತ್ತಷ್ಟು ಆಲಿಸುವವರೆಗೆ) ಖಂಡಿತವಾಗಿಯೂ ಕಾಯಬಹುದು ಎಂದು ಹೇಳಿದರು.

ಬಳಿಕ ನ್ಯಾಯಾಲಯ ಕೇಂದ್ರ ಸರ್ಕಾರದ ನಿಲುವನ್ನು ದಾಖಲಿಸಿಕೊಂಡು, ಎಂಟು ವಾರಗಳೊಳಗೆ ಲಿಖಿತ ಉತ್ತರ ಸಲ್ಲಿಸುವಂತೆ ಸೂಚನೆ ನೀಡಿತು.

“ಸಾಲಿಸಿಟರ್ ಜನರಲ್ ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕ ಆದೇಶ ಅಗತ್ಯವಿಲ್ಲ. ತೆರವು ಪ್ರಕ್ರಿಯೆ ನಡೆಯಬೇಕಾದರೆ ಪೂರ್ವ ಸೂಚನೆ ನೀಡಲಾಗುತ್ತದೆ. ಕ್ಲಬ್ ಆಡಳಿತ ಮಂಡಳಿ ಸ್ವಯಂಪ್ರೇರಿತವಾಗಿ ಕ್ಲಬ್ ವಶಕ್ಕೆ ಪಡೆಯಬಹುದು ಎಂಬ ಆತಂಕ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ವಿಚಾರಣೆ ವೇಳೆ ಅಭಿಷೇಕ್ ಮನು ಸಿಂಘ್ವಿ ಅವರು, ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯೇ ಕ್ಲಬ್ ಆಡಳಿತ ನೋಡಿಕೊಳ್ಳುತ್ತಿದ್ದು, ಅದು ಕೇಂದ್ರದ ಜೊತೆಗೂಡಿ ಕಾರ್ಯನಿರ್ವಹಿಸುವ ಆತಂಕ ಇದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಕ್ಲಬ್ ಆಡಳಿತ ಮಂಡಳಿಯೇ ಈಗಾಗಲೇ ಸರ್ಕಾರದ ಆದೇಶ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಿಚಾರಣೆ ವೇಳೆ ಅಭಿಷೇಕ್ ಮನು ಸಿಂಘ್ವಿ ಮತ್ತು ತುಷಾರ್ ಮೆಹ್ತಾ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ನ್ಯಾಯಾಲಯವು ದೆಹಲಿ ಜಿಮ್ಖಾನಾ ಕ್ಲಬ್ ಲಿಮಿಟೆಡ್‌ನ ಸದಸ್ಯರು ಮತ್ತು ಉದ್ಯೋಗಿಗಳು ಸಲ್ಲಿಸಿದ ಮೂರು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. 1928ರಲ್ಲಿ ಶಾಶ್ವತ ಲೀಸ್ ಆಧಾರದ ಮೇಲೆ ಈ ಜಾಗವನ್ನು ಕ್ಲಬ್‌ಗೆ ನೀಡಲಾಗಿತ್ತು ಎಂದು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!