ನಟಿ ಅಮಲಾ ಪಾಲ್ ಅವರಿಗೆ ಸೀರೆ ಉಡಿಸಲು ಸಹಾಯ ಮಾಡಿದ ಬಳಿಕ ಕ್ಲೇರ್ ಮರಿಯಾ ಸೆಬಾಸ್ಟಿಯನ್ ಅವರೊಂದಿಗೆ ತೆಗೆಸಿಕೊಂಡ ಚಿತ್ರ. 
ದೇಶ

ಆರು ಗಜ ಸೀರೆಯಿಂದ ಜಾಗತಿಕ ಮಟ್ಟಕ್ಕೆ: ಸೆಲೆಬ್ರಿಟಿಗಳಿಗೆ ಸೀರೆ ಉಡಿಸಿ ಯಶಸ್ವಿಯಾಗಿರುವ ಕೇರಳದ ಯುವತಿ ಕ್ಲೇರ್ ಮರಿಯಾ

ಕೇವಲ 23 ವರ್ಷ ವಯಸ್ಸಿನಲ್ಲೇ, ಕೇರಳದ ಕುಟ್ಟನಾಡಿನ ಕೈನಕರಿ ನಿವಾಸಿಯಾದ ಕ್ಲೇರ್ ದೇಶದ ಪ್ರಭಾವಿ ಮಹಿಳೆಯರಾದ ಅಮಲಾ ಪೌಲ್, ನಿಮಿಶಾ ಸಜಯನ್ ಹಾಗೂ ಉದ್ಯಮಿ ನೀತಾ ಅಂಬಾನಿ ಅವರಿಗೆ ಸೀರೆ ಉಡಿಸುವ ಸೇವೆ ಒದಗಿಸಿ ಖ್ಯಾತಿ ಗಳಿಸಿದ್ದಾರೆ.

ಅಲಪ್ಪುಝ: ಸೀರೆ ಉಡಿಸುವ ಕಲೆ(Sari draping) ಇಂದು ಅತ್ಯಂತ ಲಾಭದಾಯಕ ವೃತ್ತಿಯಾಗಿ ರೂಪುಗೊಂಡಿದ್ದು, ಕೇರಳದ ಯುವತಿ ಕ್ಲೇರ್ ಮರಿಯಾ ಸೆಬಾಸ್ಟಿಯನ್ ಯಶಸ್ವಿ ಉದಾಹರಣೆಯಾಗಿದ್ದಾರೆ.

ಕೇವಲ 23 ವರ್ಷ ವಯಸ್ಸಿನಲ್ಲೇ, ಕೇರಳದ ಕುಟ್ಟನಾಡಿನ ಕೈನಕರಿ ನಿವಾಸಿಯಾದ ಕ್ಲೇರ್ ದೇಶದ ಪ್ರಭಾವಿ ಮಹಿಳೆಯರಾದ ಅಮಲಾ ಪೌಲ್, ನಿಮಿಶಾ ಸಜಯನ್ ಹಾಗೂ ಉದ್ಯಮಿ ನೀತಾ ಅಂಬಾನಿ ಅವರಿಗೆ ಸೀರೆ ಉಡಿಸುವ ಸೇವೆ ಒದಗಿಸಿ ಖ್ಯಾತಿ ಗಳಿಸಿದ್ದಾರೆ.

ಬಹುತೇಕ ಮಹಿಳೆಯರು ತಮ್ಮ ಸೀರೆಯನ್ನು ತಾವೇ ಉಡುತ್ತಿದ್ದರೂ, ಮದುವೆ ಮತ್ತು ವಿಶೇಷ ಸಮಾರಂಭಗಳಲ್ಲಿ ಪರಿಣಿತ ಸೀರೆ ಉಡಿಸುವವರ ಅಗತ್ಯ ಹೆಚ್ಚಾಗುತ್ತದೆ. ಅಂತಹ ಪರಿಣಿತರಲ್ಲಿ ಕ್ಲೇರ್ ಮರಿಯಾ ಸೆಬಾಸ್ಟಿಯನ್ ಕೂಡ ಒಬ್ಬರು.

ಪಯಣ ಆರಂಭವಾಗಿದ್ದು ಹೇಗೆ?

ಕಾಲೇಜು ಸ್ನೇಹಿತೆಯೊಬ್ಬಳಿಗೆ ಸಹಾಯ ಮಾಡುವ ಮೂಲಕ ಆರಂಭವಾದ ಈ ಪಯಣ, ಇಂದು ಕ್ಲೇರ್ ಅವರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಸೆಲೆಬ್ರಿಟಿಗಳ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ತಮ್ಮ ಜೀವನವನ್ನೇ ಬದಲಿಸಿಕೊಂಡಿದ್ದಾರೆ.

8ನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆಯನ್ನು ಕಳೆದುಕೊಂಡ ಕ್ಲೇರ್ ಅವರಿಗೆ ತಾಯಿ ಫ್ಯಾನ್ಸಿ ಹಾಗೂ ಅತ್ತೆ ಲಲಮ್ಮ ಅವರ ಬೆಂಬಲ ದೊಡ್ಡ ಶಕ್ತಿಯಾಯಿತು.

ಚಂಬಕುಳಂನ ಸೈಂಟ್ ಮೇರೀಸ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಓದುತ್ತಿದ್ದ ದಿನಗಳಿಂದಲೇ ಕ್ಲೇರ್ ತಮ್ಮ ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಸೀರೆ ಉಡಿಸಿ ಕೊಡುತ್ತಿದ್ದರು. ಅವರ ಅಂದದ ಅಭಿರುಚಿ ಮತ್ತು ಸೂಕ್ಷ್ಮತೆಯು ಎಲ್ಲರಿಂದಲೂ ಪ್ರಶಂಸೆ ಪಡೆಯುತ್ತಿತ್ತು.

2022ರಲ್ಲಿ ಕಲಮಶೇರಿಯ ಸೈಂಟ್ ಪೌಲ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಕಾಲೇಜಿನ ಓಣಂ ಆಚರಣೆಯ ಸಂದರ್ಭದಲ್ಲಿ ಸ್ನೇಹಿತೆ ರಿನ್ಸಾ ಪರ್ವೀನ್, ತನ್ನ ಸೀರೆಯನ್ನು ಉಡಿಸಲು ಕ್ಲೇರ್ ಅವರನ್ನು ಕೇಳಿಕೊಂಡರು. ಅದರಂತೆ ಕ್ಲೇರ್ ಖುಷಿಯಿಂದ ಸೀರೆ ಉಡಿಸಿದ್ದನ್ನು ಮೆಚ್ಚಿದ ರಿನ್ಸಾ ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ಅದಕ್ಕೆ ಭಾರೀ ಪ್ರತಿಕ್ರಿಯೆ ದೊರೆಯಿತು.

ನಂತರ ರಿನ್ಸಾ “Drapes by Clare” ಎಂಬ ಇನ್‌ಸ್ಟಾಗ್ರಾಂ ಪುಟವನ್ನು ಆರಂಭಿಸಿ ಕ್ಲೇರ್ ಅವರ ಕೆಲಸದ ಇನ್ನಷ್ಟು ವಿಡಿಯೊಗಳನ್ನು ಪೋಸ್ಟ್ ಮಾಡಿದರು. ಅವುಗಳಲ್ಲಿ ಒಂದು ವಿಡಿಯೊ ವೈರಲ್ ಆಯಿತು.

ಆ ಬಳಿಕ ಕರೆಗಳು ನಿರಂತರವಾಗಿ ಬರತೊಡಗಿದವು. ಮದುವೆಗಳು ಮತ್ತು ವಿಶೇಷ ಕಾರ್ಯಕ್ರಮಗಳಿಗಾಗಿ ಸೀರೆ ಉಡಿಸಲು ಜನರು ನನ್ನನ್ನು ಸಂಪರ್ಕಿಸಿದರು. ಅಲ್ಲಿಂದಲೇ ನನ್ನ ವೃತ್ತಿಜೀವನ ಆರಂಭವಾಯಿತು ಎಂದು ಕ್ಲೇರ್ ನೆನಪಿಸಿಕೊಳ್ಳುತ್ತಾರೆ.

ಹಲವು ಡ್ರೇಪಿಂಗ್ ಶೈಲಿಗಳ ಪರಿಣಿತಿ

ಆ ನಂತರ ಅವರ ಬೆಳವಣಿಗೆ ವೇಗವಾಗಿ ಸಾಗಿತು. ಕ್ಲೇರ್ ನಟಿಯರಾದ ಅನ್ಸಿಬಾ ಹಾಸನ್, ಅಮಲಾ ಪೌಲ್, ನಿಮಿಷಾ ಸಜಯನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಗೂ ಸೋಷಿಯಲ್ ಮೀಡಿಯಾ ಇನ್ಫುಯೆನ್ಸರ್ ಗಳೊಂದಿಗೆ ಕೆಲಸ ಮಾಡಿದರು.

ಡೆಸ್ಟಿನೇಶನ್ ವೆಡ್ಡಿಂಗ್‌ಗಳ ಮೂಲಕ ಅವರು ಥಾಲ್ಯಾಂಡ್, ಬಹ್ರೇನ್ ಮತ್ತು ಬ್ಯಾಂಕಾಕ್ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಸಿದರು.

ಇಂತಹ ಒಂದು ವಿದೇಶಿ ಮದುವೆಯ ಕಾರ್ಯದ ವೇಳೆ ಅವರಿಗೆ ಅಂಬಾನಿ ಕುಟುಂಬದೊಂದಿಗೆ ಸಂಪರ್ಕ ಸಿಕ್ಕಿತು. ಬಹ್ರೇನ್‌ನಲ್ಲಿ ಇದ್ದಾಗ, ನೀತಾ ಅಂಬಾನಿ ಅವರ ಕಚೇರಿಯಿಂದ ಸೀರೆ ಡ್ರೇಪಿಂಗ್ ಸೇವೆಗಾಗಿ ಕರೆ ಬಂದಿತ್ತು. ಆಗ ಬೇರೆ ಕೆಲಸದ ಕಾರಣ ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದರೆ ಬಳಿಕ ಮತ್ತೊಮ್ಮೆ ಅವಕಾಶ ದೊರೆತು, ಮುಂಬೈನ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರಿಗೆ ಸೀರೆ ಉಡಿಸುವ ಜವಾಬ್ದಾರಿ ಸಿಕ್ಕಿತು.

ಕ್ಲೇರ್ ಅವರ ದೃಷ್ಟಿಯಲ್ಲಿ ಸೀರೆ ಕೇವಲ ಬಟ್ಟೆಯಲ್ಲ; ಅದು ಮಹಿಳೆಯ ಆತ್ಮವಿಶ್ವಾಸದ ಅಭಿವ್ಯಕ್ತಿ. ಅವರು ಬಾಡಿ-ಹಗ್ಗಿಂಗ್ ಡ್ರೇಪ್, ಮರ್ಮೇಡ್ ಡ್ರೇಪ್, ಓಪನ್ ಪ್ಲೀಟ್ಸ್, ಮಡಿಸಾರ್ ಮತ್ತು ನೌವಾರಿ ಸೇರಿದಂತೆ ಹಲವು ಶೈಲಿಗಳಲ್ಲಿ ಪರಿಣತಿ ಪಡೆದಿದ್ದಾರೆ.

ಇಂದು ಅವರ ಇನ್ಸ್ಟಾಗ್ರಾಂ ಪುಟಕ್ಕೆ ಸುಮಾರು 33,000 ಅನುಯಾಯಿಗಳಿದ್ದು, ವಿಶ್ವದ ವಿವಿಧ ಭಾಗಗಳಿಂದ ಗ್ರಾಹಕರನ್ನು ತಲುಪಲು ನೆರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

ಪರಮಾಣು ದಾಳಿಯಿಂದ ರಕ್ಷಣೆ, ಪ್ರತಿದಾಳಿಗೆ ಚೀನಾ ಮಾಸ್ಟರ್ ಪ್ಲಾನ್: ಸೈಲೋಗಳ ಸಮೀಪ ಲಾಂಚ್ ಪ್ಯಾಡ್ ಗಳ ನಿರ್ಮಾಣ! ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

ಜೂನ್‌ನಲ್ಲಿ ಸಂಪುಟ ಪುನಾರಚನೆ: ಡಜನ್‌ಗೂ ಹೆಚ್ಚು ಸಚಿವರಿಗೆ ಕೊಕ್; ಕೇಂದ್ರ ಸಚಿವರೊಬ್ಬರಿಗೆ ಕರ್ನಾಟಕ BJP ಅಧ್ಯಕ್ಷ ಹುದ್ದೆ!

IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..': ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಹೇಳಿಕೆ!

Body-Line Bowling: GT ಹೆಣೆದ ಚಕ್ರವ್ಯೂಹ, ಹೋರಾಡಿದ Vaibhav Sooryavanshi, ಗುಜರಾತ್ ಬೌಲರ್ ಗಳ ವಿರುದ್ಧ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ!

SCROLL FOR NEXT