ಶಿಖರ್ ಅಗರ್ವಾಲ್ ಮತ್ತು ಪ್ರಶಾಖಾ ಮಾಥುರ್ 
ದೇಶ

36 ವಿಲ್ಲಾಗಳು, ಅಪಾರ ಪ್ರಮಾಣದ ಆಸ್ತಿ: ರಾಜಸ್ಥಾನದ IAS- IPS ಕುಬೇರ ದಂಪತಿಯ ಸಂಪತ್ತು ನೋಡಿ ACB ಶಾಕ್!

ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿ ಹೋಟೆಲ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ, ತಾವು ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಯಲಿದೆ.

ಜೈಪುರ: ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಅವರು ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು, ಖಾಸಗಿ ಆತಿಥ್ಯ ಕಂಪನಿಯೊಂದಕ್ಕೆ ಅನಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಹಾಗೂ ಮಾರುಕಟ್ಟೆ ಮೌಲ್ಯಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ತಮಗಾಗಿ ಮತ್ತು ತಮ್ಮ ಕುಟುಂಬ ಸದಸ್ಯರಿಗಾಗಿ ಹಲವಾರು ರೆಸಾರ್ಟ್ ವಿಲ್ಲಾಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ರಾಜಸ್ಥಾನ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳದ (ACB) ಮೂಲಕ ಸಮಗ್ರ ತನಿಖೆಗೆ ಆದೇಶಿಸಿದೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿ ಹೋಟೆಲ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ, ತಾವು ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಯಲಿದೆ.

ಅಕ್ಟೋಬರ್ 27 ರಂದು 'ದೈನಿಕ್ ಭಾಸ್ಕರ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೈಗಾರಿಕಾ ಇಲಾಖೆಯಿಂದ ಸ್ವೀಕರಿಸಿದ ಮಾಹಿತಿ ಮತ್ತು ಗೌಪ್ಯ ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಆಧರಿಸಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು (ACB) ನಡೆಸಿದ ಪ್ರಾಥಮಿಕ ತನಿಖೆಯ ನಂತರ, ರಾಜ್ಯ ಸರ್ಕಾರವು ಈ ತನಿಖೆಗೆ ಅನುಮೋದನೆ ನೀಡಿದೆ.

ಭ್ರಷ್ಟಾಚಾರ ನಿಗ್ರಹ ದಳದ (ACB) ಮಹಾನಿರ್ದೇಶಕ ಗೋವಿಂದ್ ಗುಪ್ತಾ ಅವರು ಮಾತನಾಡಿ, 'ಭ್ರಷ್ಟಾಚಾರ ತಡೆ ಕಾಯಿದೆ, 1988'ರ ಸೆಕ್ಷನ್ 17A ಅಡಿಯಲ್ಲಿ, ಅಗರ್ವಾಲ್, ಕಂಪನಿಯ ನಿರ್ದೇಶಕರು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸಲು ಸರ್ಕಾರವು ಪೂರ್ವಾನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಎಸಿಬಿಯ ಪ್ರಾಥಮಿಕ ವಿಚಾರಣೆಯಲ್ಲಿ ಉದಯಪುರದ ಬುಜ್ಡಾ ಮತ್ತು ಅಲ್ವಾರ್‌ನ ಅಜಬ್‌ಗಢದಲ್ಲಿರುವ ಅನಂತ ರೆಸಾರ್ಟ್‌ಗಳ ವಿಲ್ಲಾಗಳ ಖರೀದಿ ವಿವರಗಳು ಬೆಳಕಿಗೆ ಬಂದಿವೆ. ಮಾರ್ಚ್ 2026ರಲ್ಲಿ ಒಟ್ಟು 20 ವಿಲ್ಲಾಗಳನ್ನು ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪೈಕಿ 10 ವಿಲ್ಲಾಗಳು ಶಿಖರ್ ಅಗರವಾಲ್ ಅವರ ಹೆಸರಿನಲ್ಲಿ ಹಾಗೂ ಉಳಿದ 10 ವಿಲ್ಲಾಗಳು ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರ ಹೆಸರಿನಲ್ಲಿ ನೋಂದಣಿಯಾಗಿವೆ ಎನ್ನಲಾಗಿದೆ.

ಪ್ರತಿ ವಿಲ್ಲಾವನ್ನು ಸುಮಾರು 15 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಈ 20 ವಿಲ್ಲಾಗಳ ಒಟ್ಟು ಮೌಲ್ಯ ಸುಮಾರು 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಜಬ್‌ಗಢದಲ್ಲಿರುವ ಅನಂತ ರೆಸಾರ್ಟ್‌ನಲ್ಲಿ ಒಟ್ಟು 16 ವಿಲ್ಲಾಗಳನ್ನು ಅಗರವಾಲ್ ಕುಟುಂಬದವರು ಖರೀದಿಸಿದ್ದಾರೆ ಎಂಬ ಆರೋಪವಿದೆ. ಅಗರವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ತಲಾ ನಾಲ್ಕು ವಿಲ್ಲಾಗಳಿವೆ. ಇಬ್ಬರು ಪುತ್ರರ ಹೆಸರಿನಲ್ಲಿ ತಲಾ ಎರಡು ವಿಲ್ಲಾಗಳಂತೆ ಒಟ್ಟು ನಾಲ್ಕು ವಿಲ್ಲಾಗಳು.

ಅಗರವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಎಂಟು ವಿಲ್ಲಾಗಳ ಬೆಲೆ ತಲಾ 16.5 ಲಕ್ಷ ರೂ. ಎಂದು ವರದಿಯಾಗಿದೆ. ಪುತ್ರರ ಹೆಸರಿನಲ್ಲಿರುವ ನಾಲ್ಕು ವಿಲ್ಲಾಗಳ ಬೆಲೆ ತಲಾ 15 ಲಕ್ಷ ರೂ. ಎನ್ನಲಾಗಿದೆ. ಮಾವಂದಿರ ಹೆಸರಿನಲ್ಲಿರುವ ವಿಲ್ಲಾಗಳ ಬೆಲೆಯೂ ತಲಾ 16.5 ಲಕ್ಷ ರೂ. ಎಂದು ಹೇಳಲಾಗಿದೆ.

ಎಸಿಬಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ಅಂಶವೆಂದರೆ, 2026ರ ಮಾರ್ಚ್ 27ರಂದು ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹಣಕಾಸು ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ಯಾಕೇಜ್ ನೀಡಲಾಗಿದೆ ಎನ್ನುವುದು. ಇದೇ ದಿನ ಅಗರವಾಲ್ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ 20 ವಿಲ್ಲಾಗಳು ನೋಂದಣಿಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಕೂಟದ ಬೃಹತ್ ರ‍್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರ, ಬೆಂಬಲಿಗರ ಆಗಮನ

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಕೊಡಿಸಿದ್ದ ತನಿಖಾಧಿಕಾರಿಗಳು ಸೇರಿ ರಾಜ್ಯ 6 ಅಧಿಕಾರಿಗಳಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ!

ಸರ್ಕಾರದ ರಾಜೀನಾಮೆಗೆ ಆಗ್ರಹ: ಮಣಿಪುರದಲ್ಲಿ ಸಾವಿರಾರು ಜನರ ಪ್ರತಿಭಟನೆ, ಕೇಂದ್ರಕ್ಕೆ 'ಅಂತಿಮ ಕರೆ'

ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್ ದ್ವಿಪಕ್ಷೀಯ ಸಭೆ: ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚೆ