ನವದೆಹಲಿ: ಪಂಜಾಬ್ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಹಿನ್ನಡೆಯಾಗಿದ್ದು ಎರಡು ದಿನಗಳಲ್ಲಿ ಪಕ್ಷದ ವಿರುದ್ಧ ಬಂಡೆದ್ದು ರಾಜಿನಾಮೆ ನೀಡಿದ್ದ ಮೂವರು ಎಎಪಿ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ. ಮೂವರು ಬಂಡಾಯ ಶಾಸಕರು ಇಂದು ದೆಹಲಿಯಲ್ಲಿ ಬಿಜೆಪಿಗೆ ಸೇಪರ್ಡೆಗೊಂಡರು.
2026ರ ನವೆಂಬರ್ 1ರಂದು ಪಂಜಾಬ್ನ ಇಬ್ಬರು ಎಎಪಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈ ಇಬ್ಬರು ಶಾಸಕರನ್ನು ಪಟಿಯಾಲಾದ ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾಣ್ ಮಜ್ರಾ ಮತ್ತು ಸಮಾನಾದ ಶಾಸಕ ಮತ್ತು ಮಾಜಿ ಸಚಿವ ಚೇತನ್ ಸಿಂಗ್ ಜೋರಾ ಮಜ್ರಾ. ಇಂದು ಬೆಳಗ್ಗೆ ಪಕ್ಷದಿಂದ ಅಮಾನತುಗೊಂಡ ಶಾಸಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಚುನಾವಣೆಗೂ ಮುನ್ನ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ.
ಬಿಜೆಪಿ ಸೇರಿದ ನಂತರ ಕುನ್ವರ್ ವಿಜಯ್ ಪ್ರತಾಪ್, ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಕತೆ ಮುಗಿದಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಸ್ವತಃ ಅದನ್ನು ಕೊನೆಗೊಳಿಸಿದ್ದಾರೆ. ಪಂಜಾಬ್ನಲ್ಲಿಯೂ 'ಡಬಲ್ ಎಂಜಿನ್' ಸರ್ಕಾರ ರಚನೆಯಾಗಲಿದೆ. ಅಪರಾಧ ದರಕ್ಕೆ ಸಂಬಂಧಿಸಿದಂತೆ, ನಾನು ಅಮೃತಸರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದೆ. 2007, 2008 ಮತ್ತು 2009ರಲ್ಲಿ ನಾವು ಮಾದಕ ದ್ರವ್ಯ ಸಮಸ್ಯೆ ಮತ್ತು ಅಪರಾಧ ಎರಡನ್ನೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದೇವು. ಆದಾಗ್ಯೂ, ನನ್ನ ನಿರ್ಗಮನದ ನಂತರ, ಪರಿಸ್ಥಿತಿ ಎಂದಿಗೂ ನಿಯಂತ್ರಣಕ್ಕೆ ಬರಲಿಲ್ಲ ಎಂದರು.
ದೆಹಲಿಯಲ್ಲಿ ಬಿಜೆಪಿ ಸೇರಿದ ನಂತರ, ಹರ್ಮೀತ್ ಸಿಂಗ್ ಪಠಣಮಜ್ರಾ, ಆಮ್ ಆದ್ಮಿ ಪಕ್ಷವು ಮೊದಲು ಪಂಜಾಬ್ಗೆ ಬಂದಾಗ, ಅವರು ಬಹಳ ಪ್ರಭಾವಶಾಲಿ ದೃಷ್ಟಿಕೋನವನ್ನು ಮಂಡಿಸಿದರು. ಈ ವಿಚಾರಗಳೇ ಆಮ್ ಆದ್ಮಿ ಪಕ್ಷವು ಅಂತಹ ವಿಶಾಲವಾದ ರಾಜಕೀಯ ವ್ಯವಸ್ಥೆಯ ನಡುವೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟವು. ಆದರೆ ಕಾಲಾನಂತರದಲ್ಲಿ, ಪಂಜಾಬ್ನ ಸಮಸ್ಯೆಗಳಿಗಾಗಿ ಹೋರಾಡಿದವರು ಧ್ವನಿ ಎತ್ತಲಿಲ್ಲ. ಇಂದು, ಪಂಜಾಬ್ ಅನ್ನು ಹೆಚ್ಚಾಗಿ 'ಉಡ್ತಾ ಪಂಜಾಬ್' ಎಂದು ಕರೆಯಲಾಗುತ್ತದೆ, ಆದರೆ ನಾವೆಲ್ಲರೂ ಅದನ್ನು 'ಉದಯಿಸುವ ಪಂಜಾಬ್' ಮಾಡಲು ಬಯಸುತ್ತೇವೆ. ಎಎಪಿ ಪಂಜಾಬ್ ಅನ್ನು ಕೆಸರಿಗೆ ತಳ್ಳಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಸರ್ಕಾರಕ್ಕಿಂತ ಹೆಚ್ಚಿನ ಸಾಲವನ್ನು ತೆಗೆದುಕೊಂಡಿದೆ, ಪಂಜಾಬ್ ಅನ್ನು ಭೀಕರ ಸ್ಥಿತಿಯಲ್ಲಿ ಬಿಟ್ಟಿದೆ ಎಂದರು.