ರಾಮಲೀಲಾ ಮೈದಾನ 
ದೇಶ

INDIA bloc's rally:'ಸರಿಯಾಗಿ ನಕಲಿ ಮಾಡಲೂ ಆಗಿಲ್ಲ; ರಾಮಲೀಲಾ ಮೈದಾನದ ಜನಸಾಗರ ತೋರಿಸಲು ಕಾಂಗ್ರೆಸ್ AI ಫೋಟೋ ಬಳಕೆ- ಕಿರಣ್ ರಿಜಿಜು ಲೇವಡಿ

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, 'ಇಂಡಿಯಾ' ಒಕ್ಕೂಟವು ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ Rallyಯನ್ನು ಆಯೋಜಿಸಿತ್ತು.

ನವದೆಹಲಿ: ಇಂಡಿಯಾ ಒಕ್ಕೂಟದ Rallyಗೆ 'ದೆಹಲಿಯ ರಾಮಲೀಲಾ ಮೈದಾನಕ್ಕೆ ಜನಸಾಗರವೇ ಹರಿದುಬಂದಿತು ಎಂದು ತೋರಿಸಲು ಕಾಂಗ್ರೆಸ್ ಪಕ್ಷ ಕೃತಕ ಬುದ್ಧಿಮತ್ತೆ (AI) ಫೋಟೋ ಬಳಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೇವಡಿ ಮಾಡಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, 'ಇಂಡಿಯಾ' ಒಕ್ಕೂಟವು ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ Rallyಯನ್ನು ಆಯೋಜಿಸಿತ್ತು. ಇದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಿಜಿಜು, Rally ಯಲ್ಲಿ ಜನಸಾಗರ ತೋರಿಸಲು ಬಯಸಿದ್ದ ಕಾಂಗ್ರೆಸ್ ಪಕ್ಷ, ಕನಿಷ್ಠಪಕ್ಷ ಆ AI ರಚಿತ ಫೋಟೋವನ್ನಾದರು ಸರಿಯಾಗಿ ಸಿದ್ಧಪಡಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ರಾಮಲೀಲಾ ಮೈದಾನ ಜನರಿಂದ ತುಂಬಿತ್ತು ಎಂದು ತೋರಿಸಲು ಬಳಸಿದ ಆ ನಕಲಿ AI ಫೋಟೋವನ್ನು ಸಹ ಕಾಂಗ್ರೆಸ್ ಪಕ್ಷದ 'ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುವ ತಂಡ' (fake narrative team) ಸರಿಯಾಗಿ ಮಾಡಿಲ್ಲ!" ಎಂದು ಅವರು ಬರೆದುಕೊಂಡಿದ್ದಾರೆ.

ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳು ಮತ್ತು 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯ ವಿರುದ್ಧ ಪ್ರತಿಭಟಿಸಲು ಈ rallyಯನ್ನು ಆಯೋಜಿಸಲಾಗಿತ್ತು. ಮಿಂಟೋ ರೋಡ್-ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ಪ್ರಾರಂಭವಾದ ಈ ಮೆರವಣಿಗೆಯು ರಾಮ್‌ಲೀಲಾ ಮೈದಾನದ ಕಡೆಗೆ ಸಾಗಿತು. ಅಲ್ಲಿ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು.

Rally ಯಲ್ಲಿ ಸೇರಿದ ಜನರ ಸಂಖ್ಯೆಯ ಕುರಿತು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿರುವಾಗಲೇ ರಿಜಿಜು ಈ ಆರೋಪ ಮಾಡಿದ್ದಾರೆ.

'ಇಂಡಿಯಾ' ಒಕ್ಕೂಟವು ಈ ಸಮಾವೇಶಕ್ಕೆ 10 ಲಕ್ಷ ಜನರು ಸೇರುತ್ತಾರೆ ಎಂದು ಹೇಳಿಕೊಂಡಿದ್ದನ್ನು ಪ್ರಶ್ನಿಸಿದ್ದ ಬಿಜೆಪಿ ಸಂಸದ ಸಂಬಿತ್ ಪಾತ್ರ, ಮೈದಾನದ ಗಮನಾರ್ಹ ಭಾಗವು ಖಾಲಿಯಾಗಿತ್ತು ಎಂದು ಆರೋಪಿಸಿದ್ದಾರೆ. ಮೈದಾನದಲ್ಲಿ ಹಾಕಲಾಗಿದ್ದ 28,000 ಕುರ್ಚಿಗಳ ಪೈಕಿ 5,000 ರಿಂದ 7,000 ಕುರ್ಚಿಗಳು ಮಧ್ಯಾಹ್ನ 3:30 ರಿಂದ 4 ಗಂಟೆಯ ನಡುವೆ ಖಾಲಿಯಾಗಿದ್ದವು ಎಂದು ಪಾತ್ರಾ ಹೇಳಿದ್ದಾರೆ. ಅಲ್ಲದೆ, ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಸುಮಾರು ಶೇಕಡಾ 40 ರಷ್ಟು ಭಾಗ ಖಾಲಿಯಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

ಟಿ20 ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್‌ ಕುಮಾರ್‌ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!

cyclone Murasu: 120 ಕಿ.ಮೀ ವೇಗ, ಆಂಧ್ರದತ್ತ ಧಾವಿಸುತ್ತಿದೆ ‘ಮುರಸು’ ಚಂಡಮಾರುತ, ಭಾರೀ ಮಳೆ ಎಚ್ಚರಿಕೆ

ಯಾರ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ಗೊತ್ತಿದೆ, ಅವರೇನು ಪೊಲೀಸ್ ಆಯುಕ್ತರೋ ಅಥವಾ ಮುಖ್ಯ ಗುಮಾಸ್ತರೋ? ಸೀಮಂತ್ ಕುಮಾರ್ ಸಿಂಗ್ ವಿರುದ್ಧ HDK ವಾಗ್ದಾಳಿ

Hormuz ಜಲಸಂಧಿಯಲ್ಲಿ ಭೀಕರ ಸ್ಫೋಟ: ನೌಕಾ ಮೈನ್‌ಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ತೈಲ ಟ್ಯಾಂಕರ್‌ಗಳು, ಹೆಚ್ಚಿದ ಆತಂಕ..!