ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳ online desk
ದೇಶ

ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳದ ಬಳಿ AAIB ಅಧಿಕಾರಿಗೆ ಅನಾರೋಗ್ಯ

ಘಟನಾ ಸ್ಥಳವನ್ನು ಪರಿಶೀಲಿಸುವಾಗ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡರು. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿ ರಕ್ಷಿಸಿದರು.

ಅಕ್ಟೋಬರ್ 30 ರಂದು, ಬದರಿನಾಥದಿಂದ ಹಿಂತಿರುಗುತ್ತಿದ್ದಾಗ ಉತ್ತರಾಖಂಡದ ಜೋಶಿಮಠದ ಸಮೀಪವಿರುವ ಹಳ್ಳಿಯೊಂದರ ಬಳಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡ ಸ್ಥಳವನ್ನು ಪರಿಶೀಲಿಸಬೇಕಾದರೆ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡಿದ್ದಾರೆ.

ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಕರ್ನಾಟಕದ ಐವರು ಯಾತ್ರಾರ್ಥಿಗಳು ಮತ್ತು ಪೈಲಟ್ ಮೃತಪಟ್ಟಿದ್ದರು.

ಘಟನಾ ಸ್ಥಳವನ್ನು ಪರಿಶೀಲಿಸುವಾಗ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡರು. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿ ರಕ್ಷಿಸಿದರು.

ಪೊಲೀಸ್ ಅಧಿಕಾರಿಗಳ ಪ್ರಕಾರ, ನವೆಂಬರ್ 1 ರಂದು ಘಟನಾ ಸ್ಥಳಕ್ಕೆ ತೆರಳಿದ್ದ AAIB ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಸೋಮವಾರ ಸಂಜೆ ಗೋಪೇಶ್ವರದಲ್ಲಿರುವ ಕಂಟ್ರೋಲ್ ರೂಮ್‌ಗೆ ತಲುಪಿತು. AAIB ಅಧಿಕಾರಿಯೊಬ್ಬರು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದರು ಮತ್ತು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದರು.

SDRF ಸಿಬ್ಬಂದಿ ಆ ಅಧಿಕಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಕಠಿಣ ಭೂಪ್ರದೇಶದ ಮೂಲಕ ಸಾಗಿ ಪಾಂಡುಕೇಶ್ವರವನ್ನು ತಲುಪಿದರು. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಅಧಿಕಾರಿಗಳ ಮಾಹಿತಿ ಪ್ರಕಾರ, AAIB ತಂಡವು ಮಧ್ಯಾಹ್ನದ ವೇಳೆಗೆ ಡೆಹ್ರಾಡೂನ್‌ಗೆ ಮರಳಬೇಕಿತ್ತು. ಹೆಲಿಕಾಪ್ಟರ್ ಪತನದ ಕುರಿತಾದ ತನಿಖೆ ಮುಂದುವರಿದಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!

ಹಿಂದೂ ಹಬ್ಬಗಳಲ್ಲಿ ಮಾತ್ರ ಇವರಿಗೆ ಪರಿಸರ ನೆನಪಾಗುತ್ತೆ; ಈದ್, ಬಕ್ರೀದ್ ಬಂದಾಗ...: ನಸೀರುದ್ದೀನ್ ಶಾ, ದಿಯಾ ವಿರುದ್ಧ ಬಿಜೆಪಿ ಕಿಡಿ