ಧೀರೇಂದ್ರ ಶಾಸ್ತ್ರಿ 
ದೇಶ

'ಅವನ ಹಿಂಬಾಲಕರಿಗೆ ಬೇಸರ ಉಂಟಾಗಬಹುದು ಆದರೆ ಶ್ರೀಕೃಷ್ಣ ವಕ್ರವಾಗಿದ್ದಾನೆ': ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲು

ತಾನು ಶ್ರೀಕೃಷ್ಣನ ತಾಯಿಯ ಕಡೆಯ ವಂಶಸ್ಥನೆಂದು ಹೇಳಿಕೊಂಡ ಸಿಂಗ್, ಆ ಹೇಳಿಕೆಗಳು ಶ್ರೀಕೃಷ್ಣನ ವಂಶಸ್ಥರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿವೆ ಮತ್ತು ಅವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದರು.

ಆಗ್ರಾ: ಶ್ರೀಕೃಷ್ಣನ ಕುರಿತು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಧಾರ್ಮಿಕ ಪ್ರವಚನಕಾರ ಧೀರೇಂದ್ರ ಶಾಸ್ತ್ರಿ ವಿರುದ್ಧ ಆಗ್ರಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಲಾಗಿದೆ ಎಂದು ವಕೀಲರೊಬ್ಬರು ಗುರುವಾರ ತಿಳಿಸಿದ್ದಾರೆ.

ಧಾರ್ಮಿಕ ಪ್ರವಚನವೊಂದರ ವೇಳೆ ಶಾಸ್ತ್ರಿ ಅವರು ಶ್ರೀಕೃಷ್ಣನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಇದರಿಂದ ಶ್ರೀಕೃಷ್ಣನ ವಂಶಸ್ಥರ ಭಾವನೆಗಳಿಗೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ, ವಕೀಲ ಅಜಯ್ ಪ್ರತಾಪ್ ಸಿಂಗ್ ಅವರು ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ಈ ದೂರು ದಾಖಲಿಸಿದ್ದಾರೆ.

ಮಧ್ಯಪ್ರದೇಶದ ಶಿವಪುರಿಯ ಕರೇರಾದಲ್ಲಿ ನಡೆದ ರಾಮಕಥೆಯಲ್ಲಿ ಶಾಸ್ತ್ರಿ ಅವರು, ಶ್ರೀರಾಮ ಮತ್ತು ಶ್ರೀಕೃಷ್ಣನ ದೈಹಿಕ ಭಂಗಿಗಳನ್ನು ಹೋಲಿಸಿ ಮಾತನಾಡಿದರು.

'ಕೃಷ್ಣನನ್ನು ಅನುಸರಿಸುವವರಿಗೆ ಇದು ಬೇಸರ ತರಿಸಬಹುದು, ಆದರೆ ಕೃಷ್ಣ ಬಹಳ ವಕ್ರವಾದವನು. ಅವನು ನಿಂತುಕೊಂಡಾಗಲೂ ಮೂರು ಕಡೆಗಳಲ್ಲಿ ಬಾಗಿರುತ್ತಾನೆ' ಎಂದು ಶಾಸ್ತ್ರಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರರು, ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಮಾನವ ರೂಪದಲ್ಲಿ ಜನಿಸಿದನೆಂದೂ, ಅವನ ವಂಶಸ್ಥರು ಇಂದಿಗೂ ಭಾರತದಲ್ಲಿ ವಾಸಿಸುತ್ತಿದ್ದಾರೆಂದೂ ವಾದಿಸಿದರು. ತಮ್ಮ ಈ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ಅವರು ಜಾಡೂನ್‌ಗಳು, ಜಡೇಜಾಗಳು ಮತ್ತು ಭಾಟಿಯಾದಂತಹ ಸಮುದಾಯಗಳಿಗೆ ಸಂಬಂಧಿಸಿದ ಐತಿಹಾಸಿಕ ಉಲ್ಲೇಖಗಳನ್ನು ನೀಡಿದರು.

ತಾನು ಶ್ರೀಕೃಷ್ಣನ ತಾಯಿಯ ಕಡೆಯ ವಂಶಸ್ಥನೆಂದು ಹೇಳಿಕೊಂಡ ಸಿಂಗ್, ಆ ಹೇಳಿಕೆಗಳು ಶ್ರೀಕೃಷ್ಣನ ವಂಶಸ್ಥರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿವೆ ಮತ್ತು ಅವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದರು.

ಸಿವಿಲ್ ನ್ಯಾಯಾಧೀಶ ಕಾಂಚನ್ ಕುಮಾರ್ ಅವರ ಮುಂದೆ ದೂರಿನ ಪ್ರಾಥಮಿಕ ವಿಚಾರಣೆ ನಡೆಯಿತು. ನ್ಯಾಯಾಲಯವು ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ನಿಗದಿಪಡಿಸಿತು.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಧಾರ್ಮಿಕ ಕಾರ್ಯಕ್ರಮಗಳ ಆಯೋಜಕರು ಮತ್ತು ಪ್ರಾಯೋಜಕರು ವಿವಾದಾತ್ಮಕ ಧರ್ಮಗುರುಗಳಿಂದ ದೂರವಿರಬೇಕೆಂದು ಆಗ್ರಹಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ, 'ರಾಮಚರಿತಮಾನಸ'ದ ಪದ್ಯವೊಂದನ್ನು ಉಲ್ಲೇಖಿಸುತ್ತಾ, ಯಾರ ನಡವಳಿಕೆಯೇ ಪ್ರಶ್ನಾರ್ಹವಾಗಿದೆಯೋ, ಅವರು ಇತರರಿಗೆ ಬೋಧನೆ ಮಾಡಬಾರದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈವಾಹಿಕ ಕಲಹ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಭೀಕರ ಹತ್ಯೆ ಮಾಡಿದ ಕ್ಯಾಬ್ ಚಾಲಕ !

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ