ಮಧ್ಯಪ್ರದೇಶದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 12 ಮಂದಿ ದುರ್ಮರಣ Online Desk
ದೇಶ

ದೀಪಾವಳಿ ರಾತ್ರಿಯೇ ಕಣ್ಣೀರಿನ ಕಡಲು: ಮಧ್ಯಪ್ರದೇಶದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 12 ಮಂದಿ ದುರ್ಮರಣ

ದೀಪಾವಳಿ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಗ್ನಿ ಅವಘಡಗಳು ಸಂಭವಿಸಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಟ್ನಿ/ಸೀನಿ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ದೀಪಾವಳಿ ಹಬ್ಬದ ರಾತ್ರಿ ನಡೆದ ಎರಡು ಪ್ರತ್ಯೇಕ ಭೀಕರ ಅಗ್ನಿ ದುರಂತಗಳಲ್ಲಿ ಹಸುಗೂಸು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಕನಿಷ್ಠ 12 ಮಂದಿ ಜೀವಂತವಾಗಿ ದಹನವಾಗಿದ್ದಾರೆ. ಈ ಘಟನೆಗಳು ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿದ್ದು, ಹಬ್ಬದ ಸಡಗರದ ನಡುವೆಯೇ ಸೂತಕದ ಛಾಯೆ ಆವರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕಟ್ನಿ ಜಿಲ್ಲೆಯ ದುರಂತ:

ಕಟ್ನಿ ಜಿಲ್ಲೆಯ ಬಾರ್ಹಿ ಪಟ್ಟಣದಲ್ಲಿರುವ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಮಧ್ಯರಾತ್ರಿ ಸುಮಾರು 12:30 ರ ಸುಮಾರಿಗೆ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಕೆಳಮಹಡಿಯಲ್ಲಿ ಪ್ಲಾಸ್ಟಿಕ್ ಹಾಗೂ ಕ್ರೋಕರಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಹೋಲ್‌ಸೇಲ್ ಅಂಗಡಿಯಿದ್ದ ಕಾರಣ ಬೆಂಕಿ ತೀವ್ರವಾಗಿ ವ್ಯಾಪಿಸಿತು. ಅದರಂತೆ, ಮೇಲಿನ ಮಹಡಿಯಲ್ಲಿ ವಾಸವಿದ್ದ ಒಂದೇ ಕುಟುಂಬದ ಆರು ಮಂದಿ ಉಸಿರುಗಟ್ಟಿ ಹಾಗೂ ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದ್ದಾರೆ. ಇನ್ನು ಮೃತರನ್ನು ಪೂರನ್ ಅಗರ್ವಾಲ್ (77), ಅವರ ಪತ್ನಿ ಚಂದ್ರಕಲಾ (74), ಸೊಸೆ ಪೂನಂ, ಮೊಮ್ಮಕ್ಕಳಾದ ಆರ್ಯ (14), ಅನ್ವಿ (6) ಮತ್ತು ಕೇವಲ ಎರಡು ತಿಂಗಳ ಹಸುಗೂಸು ಎಂದು ಗುರುತಿಸಲಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆ.

ಸಿವನಿ ಜಿಲ್ಲೆಯ ದುರಂತ:

ಸಿವನಿ ಜಿಲ್ಲೆಯ ಛಪಾರಾ ಪಟ್ಟಣದಲ್ಲಿ ಮುಂಜಾನೆ 4 ರಿಂದ 4:30 ರ ಸುಮಾರಿಗೆ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಜೈನ್ ದೇವಾಲಯದ ಸಮೀಪವಿರುವ ಕುಂದನ್ ಲಾಲ್ ಸೋನಿ ಎಂಬ ಪ್ರಸಿದ್ಧ ಅಕ್ಕಸಾಲಿಗರ (ಚಿನ್ನದ ವ್ಯಾಪಾರಿ) ಮೂರು ಅಂತಸ್ತಿನ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ 10 ಜನರ ಪೈಕಿ 6 ಮಂದಿ ಜೀವಂತವಾಗಿ ದಹನಗೊಂಡಿದ್ದಾರೆ ಮತ್ತು ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು, ಮೃತರನ್ನು ಕುಂದನ್ ಲಾಲ್ ಸೋನಿ (75), ಪತ್ನಿ ರಾಜಕುಮಾರಿ (65), ರಿತು ಸೋನಿ (42), ಸ್ಮೃತಿ ಸೋನಿ (40), ಸೂರ್ಯ ಸೋನಿ (45) ಮತ್ತು ಆದಿತ್ಯ ಸೋನಿ (16) ಎಂದು ಗುರುತಿಸಲಾಗಿದೆ.

ಏತನ್ಮಧ್ಯೆ, ಪ್ರಾಥಮಿಕ ತನಿಖೆಯ ಪ್ರಕಾರ, ದೀಪಾವಳಿ ಹಬ್ಬದ ಅಂಗವಾಗಿ ಹಚ್ಚಲಾಗಿದ್ದ ಸಾಂಪ್ರದಾಯಿಕ ದೀಪ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಭೀಕರ ಬೆಂಕಿ ಅನಾಹುತಗಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಎರಡೂ ಜಿಲ್ಲೆಗಳ ಆಡಳಿತ ಮಂಡಳಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ 'Spy' ಜೊತೆಗಿನ ಪ್ರೇಮ ಪ್ರಕರಣ ಒಪ್ಪಿಕೊಂಡ Nvidia ಸಿಇಒ! ಕುಟುಂಬ ಹಾಗೂ ಉದ್ಯೋಗಿಗಳ ಕ್ಷಮೆ ಕೋರಿದ AI ದಿಗ್ಗಜ ಜೆಂಸೆನ್ ಹುವಾಂಗ್; ಅಮೆರಿಕದಲ್ಲಿ ತೀವ್ರ ಸಂಚಲನ

ದೆಹಲಿಯಲ್ಲಿ ವಿಷಗಾಳಿಯ ಪ್ರಕೋಪ: ಅಪಾಯಕಾರಿ ಮಟ್ಟಕ್ಕೆ ತಲುಪಿದ ವಾಯುಮಾಲಿನ್ಯ; 1,331ಕ್ಕೆ ಏರಿದ AQI, ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ-ಕೊಲೆ; ಆರೋಪಿ ಪೊಲೀಸ್ ಎನ್ಕೌಂಟರ್ ನಲ್ಲಿ ಹತ!

West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇರಾನ್ ಖಡಕ್ ಎಚ್ಚರಿಕೆ..!

DC ಹುದ್ದೆಯಲ್ಲಿ ಮುಂದುವರಿಯಲು 75 ಲಕ್ಷ ರೂ. ಲಂಚ?: ಹಾಸನ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಸಿದ ವಾಟ್ಸ್‌ಆ್ಯಪ್ ಚಾಟ್, ತನಿಖೆಗೆ HDK ಒತ್ತಾಯ..!