ನವದೆಹಲಿ: ಸೋನಿಯಾ ಗಾಂಧಿಯವರ ಬಹುನಿರೀಕ್ಷಿತ ಆತ್ಮಚರಿತ್ರೆ, ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆಯಾಗಿದ್ದು, ಇದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ರಾಜಕೀಯ ಹೋರಾಟ ಸೇರಿದಂತೆ ಹಲವು ಅಂಶಗಳ ಮೇಲೆ ರಿವೀಲ್ ಮಾಡಿದ್ದಾರೆ. ಈ ಪುಸ್ತಕದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು, ಸವಾಲುಗಳು ಮತ್ತು ಭಾರತದ ರಾಜಕೀಯದಲ್ಲಿ ಅವರ ದೃಷ್ಟಿಕೋನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಾವಿಬ್ಬರೂ ಭೇಟಿಯಾದಾಗ ಮೋದಿ ಅವರು, ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಸೀಮಿತ ಸಂಪರ್ಕ: ನರೇಂದ್ರ ಮೋದಿ ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿದ್ದಾರೆ ಮತ್ತು ಈಗ ಅವರು ಮೂರನೇ ಅವಧಿಗೆ ಅಧಿಕಾರದಲ್ಲಿದ್ದಾರೆ. ಇಂದಿಗೂ, ನನಗೆ ಅವರೊಂದಿಗೆ ಯಾವುದೇ ನಿಜವಾದ ಸಂಪರ್ಕವಿಲ್ಲ. ಔಪಚಾರಿಕ ಸಭೆಗಳು ಮತ್ತು ಸಾಂದರ್ಭಿಕ ಸಂಕ್ಷಿಪ್ತ ಸಂಭಾಷಣೆಗಳನ್ನು ಹೊರತುಪಡಿಸಿ, ಹೆಚ್ಚು ಸಂವಹನ ನಡೆಸಿಲ್ಲ ಎಂದಿರುವ ಸೋನಿಯಾ, ತಾವಿಬ್ಬರೂ ಹೆಚ್ಚಾಗಿ ಸಂಸತ್ತಿನ ಪ್ರತಿ ಅಧಿವೇಶನದ ನಂತರ ಸ್ಪೀಕರ್ ಕೊಠಡಿಯಲ್ಲಿ ನಡೆಯುವ ಸಭೆ ಸೇರಿದಂತೆ ಔಪಚಾರಿಕ ಸಂಸದೀಯ ಕಾರ್ಯಕ್ರಮಗಳಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಸಭೆಯಲ್ಲಿ ಹಾಜರಿರುತ್ತಾರೆ ಎಂದಿರುವ ಅವರು, ಇದು ಸಾಮಾನ್ಯವಾಗಿ ಅನೇಕ ಜನರು ಇರುವ ಒಂದು ಸಣ್ಣ ಕೋಣೆ. ಪ್ರಧಾನಿ ಮೋದಿ ನನ್ನ ಮುಂದೆ ಬಂದಾಗ, ನಾವು ಔಪಚಾರಿಕವಾಗಿ ನಮಸ್ತೆಯೊಂದಿಗೆ ಪರಸ್ಪರ ಸ್ವಾಗತಿಸುತ್ತೇವೆ. ಹಿಂದೆ, ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು ಸುಲಭವಾಗಿ ಭೇಟಿಯಾಗುತ್ತಿದ್ದರು. ನೇರವಾಗಿ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದರು. ಆದರೆ ಮೋದಿ ಅವರು ನನ್ನೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸಿ ಮಾತನಾಡುತ್ತಾರೆ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದಾಗ, ಮೋದಿ "ಥೀಕ್ ಹೈ ಆಪ್?" ("ನೀವು ಚೆನ್ನಾಗಿದ್ದೀರಾ?") ಎಂದು ಕೇಳಿದ್ದರು. ಅದಕ್ಕೆ "ಜೀ, ಅಬ್ ಮೈ ಥೀಕ್ ಹೂ, ಶುಕ್ರಿಯಾ" ಎಂದು ಉತ್ತರಿಸಿದ್ದೆ ("ಹೌದು, ಧನ್ಯವಾದಗಳು, ನಾನು ಈಗ ಚೆನ್ನಾಗಿದ್ದೇನೆ") ಎಂದು ಹೇಳಿದ್ದಾಗಿ ಪುಸ್ತಕದಲ್ಲಿ ಬರೆಯಲಾಗಿದೆ.
ಭಾರತದ ಭವಿಷ್ಯಕ್ಕಾಗಿ ಬೇರೆ ಬೇರೆ ದೃಷ್ಟಿಕೋನ: ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಸೋನಿಯಾ ಗಾಂಧಿ ಕೂಡ ಪ್ರಸ್ತಾಪಿಸಿದರು. ಅವರು ವಿಭಿನ್ನ ಸೈದ್ಧಾಂತಿಕ ಲೋಕಗಳಿಂದ ಬಂದವರು ಮತ್ತು ಪ್ರಧಾನಿ ಮೋದಿ ಅವರ ಭಾರತದ ದೃಷ್ಟಿಕೋನವು ಅವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ಬರೆದಿದ್ದಾರೆ.
ಭಾರತದ ಬಗ್ಗೆ ನಾನು ಕಲಿತದ್ದು ನನ್ನ ಕುಟುಂಬ ಸದಸ್ಯರು, ಅವರ ಸೇವಾ ಜೀವನ ಮತ್ತು ಅನೇಕ ಜನಾಂಗಗಳು, ಸಂಸ್ಕೃತಿಗಳು, ಭಾಷೆಗಳು ಮತ್ತು ನಂಬಿಕೆಗಳ ಜನರನ್ನು ಒಳಗೊಂಡ ರಾಷ್ಟ್ರದ ಮೇಲಿನ ಅವರ ನಂಬಿಕೆಯಿಂದ ಬಂದಿದೆ. ಇದು ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಆಧರಿಸಿದೆ ಎಂದು ಅವರು ಬರೆದಿದ್ದಾರೆ. ಭಾರತದ ಬಗ್ಗೆ ನರೇಂದ್ರ ಮೋದಿಯವರ ದೃಷ್ಟಿಕೋನವು ಆರ್‌ಎಸ್‌ಎಸ್ ಸಿದ್ಧಾಂತಗಳು ಮತ್ತು ಅವರ ಸ್ವಂತ ಬಾಲ್ಯದ ಅನುಭವಗಳಿಂದ ರೂಪುಗೊಂಡಿದೆ ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.
ಮೋದಿ ರಾಜಕೀಯದ ಬಗ್ಗೆ ಟೀಕೆ: ಮೋದಿ ಅವರು ತಮ್ಮ ಭಾರತದ ದೃಷ್ಟಿಕೋನಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ನಾನು ನನ್ನದಕ್ಕಾಗಿ ಹೋರಾಡುತ್ತಿದ್ದೇನೆ. ಎಲ್ಲರನ್ನೂ ಒಳಗೊಳ್ಳುವಿಕೆ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಂತಿರುವ ಭಾರತ. ಅದು ವೈಯಕ್ತಿಕವಾಗಿರುವುದಿಲ್ಲ. ಮೋದಿ ರಾಜಕೀಯ ಮಾರ್ಗ ನನ್ನನ್ನು ಸಂಪೂರ್ಣವಾಗಿ ವಿಭಿನ್ನವಾದ ಹಾದಿಯಲ್ಲಿ ರೂಪಿಸಿತು ಎಂದು ಗಾಂಧಿ ಹೇಳಿದ್ದಾರೆ. ಮೋದಿಯ ಮೂಲವು ಅವರ ಇಮೇಜ್ ಅನ್ನು ಪಿಆರ್ ತಂಡ ಮಾರಾಟ ಮಾಡುವಲ್ಲಿ ತೋರಿದಷ್ಟು ವಿನಮ್ರವಾಗಿಲ್ಲದಿರಬಹುದು, ಆದರೆ ಅವರು ಖಂಡಿತವಾಗಿಯೂ ಆರ್‌ಎಸ್‌ಎಸ್ ಅಧಿಕಾರಕ್ಕೆ ಬರುವ ದಾರಿಯಲ್ಲಿ ಕೆಲಸ ಮಾಡಿದ್ದರು ಎಂದು ಗಾಂಧಿ ಹೇಳಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು 'ಕಾಂಗ್ರೆಸ್ ಮುಕ್ತ ಭಾರತ': ಮೋದಿ ಅವರು ಸಂಸತ್ತಿನಲ್ಲಿ ಮಾತನಾಡುವಾಗ, ಕೆಲವೊಮ್ಮೆ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಅದೇ ಒರಟು ಭಾಷೆಯನ್ನು ಬಳಸುತ್ತಾರೆ. ಹೆಚ್ಚಿನದ್ದಾಗಿ ವಿರೋಧ ಪಕ್ಷಗಳನ್ನು ಅಣಕಿಸುತ್ತಾರೆ. ಅದನ್ನು ಕೇವಲ ಒಂದು ಟೀಕೆ ಎಂದು ಮಾತ್ರ ಕರೆಯಬಹುದು. ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ನಮ್ಮ ದೇಶವನ್ನು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಹಾದಿಯಲ್ಲಿ ಇರಿಸಿದ್ದಕ್ಕಾಗಿ ಬಿಜೆಪಿಯ ಹಗೆತನಕ್ಕೆ ಗುರಿಯಾಗಿದ್ದಾರೆ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಸಂಘ ಪರಿವಾರದ ಅಂತರ್ಜಾಲ ತಾಣಗಳು ನೆಹರು ವಿರುದ್ಧ ದುರುದ್ದೇಶಪೂರಿತ ನಿಂದನೆ ಮತ್ತು ಸುಳ್ಳುಗಳಿಂದ ತುಂಬಿವೆ. ಕಾಂಗ್ರೆಸ್ ಮುಕ್ತ ಭಾರತ', ಪಕ್ಷ, ಅದರ ನೀತಿಗಳು ಮತ್ತು ಅದರ ಸಿದ್ಧಾಂತದಿಂದ ಮುಕ್ತವಾಗಬೇಕು. ಇದೇ ಬಿಜೆಪಿಯ ಉದ್ದೇಶಿತ ಗುರಿಯಾಗಿದೆ. ಈ ದ್ವೇಷವು ಆರ್‌ಎಸ್‌ಎಸ್‌ನಿಂದ ಪ್ರಭಾವಿತ ಪ್ರಧಾನಿಯ ಸ್ಥಿತಿಗತಿಯಿಂದ ಹುಟ್ಟಿಕೊಂಡಿದೆ. ಅದು ತನ್ನ ಕಾರ್ಯಕರ್ತರಲ್ಲಿ ರಾಜಕೀಯ ಕಾರ್ಯಸೂಚಿಯಲ್ಲಿ ರೂಪಿಸಲಾದ ಹಿಂದೂ ಧರ್ಮದ ಹೊರಗಿಡುವ, ಗಟ್ಟಿಯಾದ ಬದ್ಧತೆಯನ್ನು ತುಂಬಿದೆ.
ಇಂದಿರಾಗಾಂಧಿಯಿಂದ ಕಲಿತ ಪಾಠ: ನನ್ನ ಅತ್ತೆಯಿಂದ ಕಲಿತದ್ದು, ಶತಮಾನಗಳಿಂದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಧೀಮಂತರಿಂದ ಹಿಡಿದು ನಮ್ಮ ಹಳ್ಳಿಗಳ ಬಡವರವರೆಗೆ ನಮ್ಮ ಅಪಾರ ಸಂಖ್ಯೆಯ ಜನರು ಪಾಲಿಸಿಕೊಂಡು ಬಂದಿರುವ ನಂಬಿಕೆಯಾಗಿದೆ. ಇದು ವೈವಿಧ್ಯಮಯ ನಂಬಿಕೆಗಳು ಮತ್ತು ವಿಭಿನ್ನ ಮಾರ್ಗಗಳು ಆಗಿದೆ. ಯಾವುದೇ ಒಂದೇ ದೇವರು, ಸಿದ್ಧಾಂತ, ಪ್ರವಾದಿ ಅಥವಾ ಧರ್ಮಗ್ರಂಥವನ್ನು ಅನುಸರಿಸುವುದಿಲ್ಲ ಮತ್ತು ಬೇರೆ ಬೇರೆ ಸಂಪ್ರದಾಯಗಳನ್ನು ಒಳಗೊಂಡಿದೆ ಎಂದು ಅವರು ಹೇಳುತ್ತಾರೆ.
ಮಹಾತ್ಮ ಗಾಂಧಿಯವರು ವ್ಯಾಖ್ಯಾನಿಸಿದಂತೆ ಅಹಿಂಸಾ ಮತ್ತು ಧರ್ಮದ ರೀತಿಯಲ್ಲಿ ಶಿಕ್ಷಣ ಪಡೆದಿದ್ದು, ಇದರಿಂದ ಸ್ವಂತ ಸ್ವೀಕಾರ ಮತ್ತು ತಿಳುವಳಿಕೆಯ ಅನುಭವಗಳು ಬಂದಿವೆ. ಸಹಜವಾಗಿ, ಭಾರತೀಯ ಸಮಾಜವನ್ನು ಆಳಿದ ಶತಮಾನಗಳಷ್ಟು ಹಳೆಯ ಜಾತಿ ವ್ಯವಸ್ಥೆಯು ದಬ್ಬಾಳಿಕೆ ಮತ್ತು ಅಸಮಾನತೆಯ ತನ್ನದೇ ಆದ ದೀರ್ಘಕಾಲೀನ ಸಮಸ್ಯೆಗಳನ್ನು ಹೊಂದಿದೆ. ಆದರೆ ಸುಧಾರಣೆ ಬಯಸುವ ಕೆಲವು ಪ್ರಮುಖ ವ್ಯಕ್ತಿಗಳು ಜಾತಿಯ ವ್ಯವಸ್ಥೆ ಪ್ರಶ್ನಿಸಲು ಮತ್ತು ಸವಾಲು ಮಾಡಲು ನಿಖರವಾಗಿ ಹಿಂದೂ ಧರ್ಮದೊಳಗಿನ ವಿಚಾರಗಳನ್ನು ಬಳಸಿದ್ದಾರೆ ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.