ಬಿಲ್ಕಿಸ್ ಬಾನು 
ದೇಶ

ಇಬ್ಬರು ಅಪರಾಧಿಗಳಿಗೆ ಜಾಮೀನು ಮಂಜೂರು; ಕುಟುಂಬ ಸಮೇತ ಗುಜರಾತ್‌ ತೊರೆದ ಬಿಲ್ಕಿಸ್ ಬಾನು: ಸಂಬಂಧಿ ಮಾಹಿತಿ

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾದ ಬಿಪಿನ್‌ ಚಂದ್ರ ಕನ್ನಯ್ಯಲಾಲ್ ಜೋಶಿ ಮತ್ತು ಪ್ರದೀಪ್ ರಮಣಲಾಲ್ ಮೋಧಿಯಾ ಅವರ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಅಹಮದಾಬಾದ್: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ನಡೆದ ಸಾಮೂಹಿಕ ಅತ್ಯಾಚರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳ ಪೈಕಿ ಇಬ್ಬರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದ ಕೆಲವೇ ದಿನಗಳಲ್ಲಿ, ತನ್ನ ಕುಟುಂಬದೊಂದಿಗೆ ಬಿಲ್ಕಿಸ್ ಬಾನು ರಾಜ್ಯವನ್ನು ತೊರೆದಿದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ಮಂಗಳವಾರ ತಿಳಿಸಿದ್ದಾರೆ.

2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾದ ಬಿಪಿನ್‌ ಚಂದ್ರ ಕನ್ನಯ್ಯಲಾಲ್ ಜೋಶಿ ಮತ್ತು ಪ್ರದೀಪ್ ರಮಣಲಾಲ್ ಮೋಧಿಯಾ ಅವರು 17 ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವುದನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.

'ಅಪರಾಧಿಗಳಿಗೆ ಜಾಮೀನು ನೀಡುವ ಸುಪ್ರೀಂ ಕೋರ್ಟ್ ಆದೇಶದ ನಂತರ, ನವೆಂಬರ್ 2 ಅಥವಾ 3ರ ಸುಮಾರಿಗೆ ಆ ಕುಟುಂಬವು ಗುಜರಾತ್‌ನಿಂದ ಹೊರಟುಹೋಯಿತು' ಎಂದು ಆಕೆಯ ಚಿಕ್ಕಪ್ಪ ಅಬ್ದುಲ್ ರಜಾಕ್ ಮನ್ಸೂರಿ ದೂರವಾಣಿ ಮೂಲಕ 'ಎಚ್‌ಟಿ' ಪತ್ರಿಕೆಗೆ ತಿಳಿಸಿದ್ದಾರೆ.

ಈ ಹಿಂದೆ ಗುಜರಾತ್‌ನ ದೇವಗಢ ಬಾರಿಯಾದ 'ಕಪ್ಡಿ ವಿಸ್ತಾರ್' ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸುಮಾರು 18 ತಿಂಗಳ ಹಿಂದೆ, ಅವರು ಗುಜರಾತ್‌ನಲ್ಲೇ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಇದೀಗ ಅವರು ಗುಜರಾತ್‌ನಿಂದ ಸಂಪೂರ್ಣವಾಗಿ ಹೊರಟುಹೋಗಿದ್ದಾರೆ; ಆದರೆ ತಾವು ಎಲ್ಲಿಗೆ ಹೋಗುತ್ತಿದ್ದಾರೆ ಅಥವಾ ತಮ್ಮ ಮುಂದಿನ ಯೋಜನೆಗಳೇನು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

2002ರ ಗುಜರಾತ್ ಗಲಭೆ ಸಂದರ್ಭದಲ್ಲಿ, ಮಾರ್ಚ್ 3ರಂದು ಬಿಲ್ಕಿಸ್ ಬಾನು ಅವರು ತಮ್ಮ ಕುಟುಂಬದೊಂದಿಗೆ ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ, ಕೆಲವರು ಆಕೆಯ ಮೇಲೆ ಅತ್ಯಾಚಾರವೆಸಗಿದರು. ಆಗ ಆಕೆಗೆ 19 ವರ್ಷ ವಯಸ್ಸಾಗಿತ್ತು ಮತ್ತು ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ಅಪರಾಧಕ್ಕಾಗಿ ಶಿಕ್ಷೆಗೊಳಗಾದ 11 ಮಂದಿ, ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ್ದರು.

ಆದೇಶದ ವಿರುದ್ಧ ಹೋರಾಡುವೆ: ಬಿಲ್ಕಿಸ್ ಬಾನು

ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬಿಲ್ಕಿಸ್ ಬಾನು ಅವರು ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು ಮತ್ತು ಈ ತೀರ್ಪಿನ ವಿರುದ್ಧ ಹೋರಾಡುವುದಾಗಿ ಘೋಷಿಸಿದರು.

'ನಾನು ಕಷ್ಟಪಟ್ಟು ಹೋರಾಡಿ ಪಡೆದುಕೊಂಡ ನ್ಯಾಯವನ್ನೇ ಈಗ ಕಳೆದುಕೊಳ್ಳುತ್ತಿದ್ದೇನೆ ಎಂದು ನನಗೆ ಅನ್ನಿಸುತ್ತಿದೆ. ಹಳೆಯ ಭಯಗಳು ಮತ್ತೆ ಕಾಡತೊಡಗಿವೆ. ನನಗಾಗಿ, ನನ್ನ ಕುಟುಂಬ ಮತ್ತು ನನ್ನ ಮಕ್ಕಳ ವಿಚಾರದಲ್ಲಿ ನನಗೆ ಮತ್ತೆ ಭಯವಾಗುತ್ತಿದೆ. ನ್ಯಾಯದ ಮೇಲಿನ ನಂಬಿಕೆಯನ್ನೇ ಮತ್ತೊಮ್ಮೆ ಕಳೆದುಕೊಳ್ಳುವ ಭಯವೂ ನನಗಿದೆ. ನನ್ನೊಂದಿಗೆ ಹೀಗೆ ಅನ್ಯಾಯವೆಸಗಿದ ವ್ಯಕ್ತಿಗಳ ಶಿಕ್ಷೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಹೇಗೆ ತಾನೇ ಅಮಾನತುಗೊಳಿಸಿತು? ಕನಿಷ್ಠ ಪಕ್ಷ ನನಗೆ ಈ ಬಗ್ಗೆ ಮಾಹಿತಿ ನೀಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲವೇ? ನ್ಯಾಯಾಲಯದಲ್ಲಿ ನನ್ನ ದನಿ ಕೇಳಿಸುವಂತೆ ನೋಡಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗಲಿಲ್ಲವೇ?' ಎಂದು ಅವರು ಹಿರಿಯ ವಕೀಲೆ ಶೋಭಾ ಗುಪ್ತಾ ಅವರ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ನೀಡಿದ ಹೇಳಿಕೆಯಲ್ಲಿ, ಬಿಲ್ಕಿಸ್ ಬಾನು ಅವರು 2002ರ ದಾಳಿಯ ನಂತರ ನ್ಯಾಯಕ್ಕಾಗಿ ತಾವು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು.

'ನೋವು, ಆಘಾತ ಮತ್ತು ನಂಬಲಾಗದ ಸ್ಥಿತಿಯಿಂದಾಗಿ ಕಣ್ಣೀರು ಸುರಿಸುತ್ತಾ, ಪದಗಳನ್ನು ಹುಡುಕಿಕೊಳ್ಳುವುದು ಕಷ್ಟವಾಗಿದ್ದರೂ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಸುಪ್ರೀಂ ಕೋರ್ಟ್ ಮತ್ತೊಮ್ಮೆ, ಅಂದರೆ ಎರಡನೇ ಬಾರಿಗೆ, ನನ್ನನ್ನು ಕರೆಯದೆ ಅಥವಾ ನನ್ನ ವಾದವನ್ನು ಆಲಿಸದೆ ಆದೇಶ ಹೊರಡಿಸಿದೆ ಎಂಬುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಈ ವಿಷಯ ನನಗೆ ಪತ್ರಿಕಾ ವರದಿಗಳ ಮೂಲಕ ತಿಳಿಯಿತು' ಎಂದು ಅವರು ಹೇಳಿದರು.

ನಾನು ಕೇವಲ 19 ವರ್ಷದ ಯುವತಿಯಾಗಿದ್ದಾಗ, ನನ್ನ ಜಗತ್ತು, ನನ್ನ ಪುಟ್ಟ ಮಗಳು, ನನ್ನ ಕುಟುಂಬ, ನನ್ನ ಮನೆ ಹಾಗೂ ಮಾನವೀಯತೆಯ ಮೇಲಿದ್ದ ನನ್ನ ನಂಬಿಕೆ—ಇವೆಲ್ಲವನ್ನೂ ನನ್ನಿಂದ ಕ್ರೂರವಾಗಿ ಕಿತ್ತುಕೊಳ್ಳಲಾಯಿತು. ಅಂದಿನಿಂದ ಕಳೆದ ಸುದೀರ್ಘ 24 ವರ್ಷಗಳ ಕಾಲ, ನನಗಾಗಿ ಹಾಗೂ ಎಲ್ಲೆಡೆ ಮಹಿಳೆಯರಿಗಾಗಿ ನ್ಯಾಯಕ್ಕಾಗಿ ಹೋರಾಡಲು ನಾನು ಪದೇ ಪದೆ ಎದ್ದು ನಿಂತಿದ್ದೇನೆ. ಕಳೆದ 24 ವರ್ಷಗಳಲ್ಲಿ, ನನ್ನಲ್ಲಿ ಅಡಗಿದೆ ಎಂದು ನನಗೇ ತಿಳಿದಿರದಿದ್ದ ಅಪಾರ ಧೈರ್ಯವನ್ನು ನಾನು ಕಂಡುಕೊಂಡೆ; ಇದಕ್ಕೆ ಕಾರಣ, ಲಕ್ಷಾಂತರ ಜನರ ಬೆಂಬಲ ಮತ್ತು ಒಗ್ಗಟ್ಟಿನ ಧ್ವನಿಗಳು ನನಗೆ ಸಿಕ್ಕಿದ್ದು' ಎಂದರು.

'ನಾನು ಒಂದರ ನಂತರ ಮತ್ತೊಂದು ನ್ಯಾಯಾಲಯಕ್ಕೆ ಅಲೆದಾಡಿದ್ದೇನೆ; ಪ್ರತಿ ಬಾರಿಯೂ ನನ್ನ ನಿರ್ದೋಷಿತೆ ಸಾಬೀತಾದಾಗ ಕೃತಜ್ಞನಾಗಿದ್ದೇನೆ. ಪ್ರತಿ ಬಾರಿಯೂ ನ್ಯಾಯದ ಪರಿಕಲ್ಪನೆಯ ಮೇಲಿನ ನನ್ನ ನಂಬಿಕೆ ಮರುಸ್ಥಾಪನೆಗೊಂಡಿದೆ. ಕುಟುಂಬ ಮತ್ತು ಸ್ನೇಹಿತರ ಪ್ರೀತಿಯ ನೆರವಿನೊಂದಿಗೆ, ನನ್ನ ಜೀವನದ ಅವಶೇಷಗಳಿಂದ ನಾನು ಮತ್ತೆ ಬದುಕನ್ನು ಕಟ್ಟಿಕೊಂಡಿದ್ದೇನೆ. ನಾನು ಶಾಂತಿಗಾಗಿ ಹಂಬಲಿಸಿದ್ದೇನೆ. ನಗಲು ಕಲಿತಿದ್ದೇನೆ' ಎಂದು ತಿಳಿಸಿದ್ದಾರೆ.

'ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ. ನಾನು ಹೋರಾಡಲೇಬೇಕು. ನನ್ನ ಮಕ್ಕಳಿಗಾಗಿ ನಾನು ಇದನ್ನು ಮಾಡುತ್ತಿದ್ದೇನೆ; ಏಕೆಂದರೆ, ತಮ್ಮ ಉಳಿದ ಜೀವನದುದ್ದಕ್ಕೂ ಇಂತಹ ಭಯಗಳು ಮತ್ತು ಗಾಯಗಳ ನೆರಳಿನಲ್ಲಿ ಬದುಕುವ ಸ್ಥಿತಿ ಅವರಿಗೆ ಬರಬಾರದು. ನನ್ನ ಮೂರು ವರ್ಷದ ಮಗಳು ಸಲೇಹಾಳಿಗಾಗಿ ನಾನು ಇದನ್ನು ಮಾಡುತ್ತಿದ್ದೇನೆ; ಅವಳಿಗೆ ಬದುಕುವ ಹಕ್ಕಿತ್ತು, ಅವಳ ನೆನಪು ನ್ಯಾಯಕ್ಕಾಗಿ ಆಗ್ರಹಿಸುತ್ತಿದೆ. ಎಲ್ಲೆಲ್ಲಿಯೂ ಇರುವ ಮಹಿಳೆಯರಿಗಾಗಿ ನಾನು ಇದನ್ನು ಮಾಡುತ್ತಿದ್ದೇನೆ. ಏಕೆಂದರೆ, ಯಾವುದೇ ಮಹಿಳೆ, ಯಾವುದೇ ಸಂತ್ರಸ್ತೆ ಅಥವಾ ಯಾವುದೇ ನಾಗರಿಕರು ತಮ್ಮ ಅಸ್ತಿತ್ವ ಮತ್ತು ಸಮಾನತೆಗಾಗಿ ಇಂತಹ ನಿರಂತರ ಪರೀಕ್ಷೆಯನ್ನು ಎದುರಿಸುತ್ತಾ, ತಮ್ಮ ಜೀವಮಾನವಿಡೀ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿಯಲ್ಲಿ ಇರಬಾರದು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

'ಅಪ್ಪನ ತೊಡೆಯ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡಿವೆ - ರಾಹುಲ್ ಗಾಂಧಿ ಕಿಡಿ!

Tanishq ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಸುಳಿವು ಕೊಟ್ಟ tattoo, ಯೂಟ್ಯೂಬರ್ ಕೊನೆಗೂ ಅಂದರ್, ಪ್ರೇಯಸಿಯೂ ವಶಕ್ಕೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್!

ಮಂಗಳೂರು: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ; ನಳೀನ್ ಕುಮಾರ್ ಕಟೀಲು ಸೇರಿ 236 ಮಂದಿ ಸುರಕ್ಷಿತ!