ರಾಹುಲ್ ಗಾಂಧಿ 
ದೇಶ

'ಅಪ್ಪನ ತೊಡೆಯ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡಿವೆ - ರಾಹುಲ್ ಗಾಂಧಿ ಕಿಡಿ!

"ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಮತ್ತು ದ್ವೇಷ ತುಂಬಿಕೊಂಡಿದೆ. ಇದು ಅವರು ಪ್ರೀತಿಯನ್ನು ಅನುಭವಿಸದಂತೆ ಮತ್ತು ವ್ಯಕ್ತಪಡಿಸದಂತೆ ತಡೆಯುತ್ತದೆ" ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಬರೆದಿದ್ದಾರೆ.

ನವದೆಹಲಿ: ಪ್ರತಿದಿನ "ಊಟದ ಸಮಯದಲ್ಲಿ ಅಮ್ಮ, ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು" ಎಂಬ ತಮ್ಮ ಹೇಳಿಕೆ ಟೀಕೆಗೆ ಗುರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಮತ್ತು ದ್ವೇಷ ತುಂಬಿಕೊಂಡಿವೆ. ಇದು ಅವರು ಪ್ರೀತಿಯನ್ನು ವ್ಯಕ್ತಪಡಿಸದಂತೆ ತಡೆಯುತ್ತಿದೆ ಎಂದು ಮಂಗಳವಾರ ತಿರುಗೇಟು ನೀಡಿದ್ದಾರೆ.

ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ 12ನೇ ಶತಮಾನದ ದೇವಾಲಯದ ಶಿಲ್ಪವೊಂದರ ಫೋಟೋವನ್ನು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಮತ್ತು ದ್ವೇಷ ತುಂಬಿಕೊಂಡಿದೆ. ಇದು ಅವರು ಪ್ರೀತಿಯನ್ನು ಅನುಭವಿಸದಂತೆ ಮತ್ತು ವ್ಯಕ್ತಪಡಿಸದಂತೆ ತಡೆಯುತ್ತದೆ" ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಬರೆದಿದ್ದಾರೆ.

"ಒಬ್ಬ ನಿಜವಾದ ಹಿಂದೂವಾಗಿ, ಅವರನ್ನು ಈ ಜಾಲದಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರು ಕೂಡ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಆಪ್ತತೆಯ ಅದ್ಭುತ ಸೌಂದರ್ಯ ಹಾಗೂ ಸಂತೋಷವನ್ನು ಅನುಭವಿಸಲು ಪ್ರಾರಂಭಿಸಬಹುದು. ಸತ್ಯಂ ಶಿವಂ ಸುಂದರಂ" ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಸೋಮವಾರ, ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ, ತಮ್ಮ ಪೋಷಕರ ನಡುವಿನ ಆಪ್ತ ಬಾಂಧವ್ಯದ ಬಗ್ಗೆ ವಿವರಿಸಿದ್ದರು. ಪ್ರತಿದಿನ ಊಟದ ಸಮಯದಲ್ಲಿ, "ಅಪ್ಪನ ತೊಡೆಯ ಮೇಲೆ ಅಮ್ಮ ಕುಳಿತಿರುತ್ತಿದ್ದರು" ಎಂದು ಹೇಳಿದ್ದರು.

"ನನಗೆ ಇದೊಂದು ಸಾಮಾನ್ಯ ವಿಷಯ ಎಂದು ಅನ್ನಿಸಿತ್ತು. ಒಮ್ಮೆ ನಾನು ನನ್ನ ಸ್ನೇಹಿತನ ಮನೆಗೆ ಹೋದಾಗ, ಅಲ್ಲಿ ಅವರ ಪೋಷಕರು ಒಬ್ಬರ ತೊಡೆಯ ಮೇಲೆ ಇನ್ನೊಬ್ಬರು ಕುಳಿತಿರಲಿಲ್ಲ. ಆಗ ನಾನು ನನ್ನ ಸ್ನೇಹಿತನಿಗೆ, 'ಏನಿದು? ನಿಮ್ಮ ಅಮ್ಮ ಯಾಕೆ ನಿಮ್ಮ ಅಪ್ಪನ ತೊಡೆಯ ಮೇಲೆ ಕುಳಿತಿಲ್ಲ?' ಎಂದು ಕೇಳಿದೆ," ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಟೀಕಿಸಿದವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಒಬ್ಬರು.

ರಾಹುಲ್ ಗಾಂಧಿಯವರ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ, "ಕ್ಷಮಿಸಿ ಮೇಡಂ, ನಿಮ್ಮ ಜೀವನದ ಇಂತಹ ವಿಶೇಷ ದಿನದಂದು ಕೂಡ ಅವರು ನಿಮಗೆ ಮುಜುಗರವಾಗದಂತೆ ನೋಡಿಕೊಳ್ಳಲಿಲ್ಲ. ದೇಶಕ್ಕೆ ಇದರ ಸತ್ಯಾಂಶ ಬಹಳ ಹಿಂದೆಯೇ ತಿಳಿದಿದೆ. ನಿಮಗೂ ಈಗಲಾದರೂ ಇದು ಅರಿವಾಗಬಹುದು ಎಂದು ಭಾವಿಸುತ್ತೇನೆ; ಈ 'ಉತ್ಪನ್ನ'ವನ್ನು (ರಾಹುಲ್ ಗಾಂಧಿ) ಪದೇ ಪದೇ ಮಾರುಕಟ್ಟೆಗೆ ಬಿಡುಗಡೆ ಮಾಡಿದರೂ (launching and relaunching) ಯಾವುದೇ ಪ್ರಯೋಜನವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಟೀಕಿಸಿದರೆ, ಇನ್ನು ಅನೇಕರು ಅವರು ಮುಕ್ತವಾಗಿ ಮಾತನಾಡಿದ್ದಕ್ಕಾಗಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

Tanishq ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಸುಳಿವು ಕೊಟ್ಟ tattoo, ಯೂಟ್ಯೂಬರ್ ಕೊನೆಗೂ ಅಂದರ್, ಪ್ರೇಯಸಿಯೂ ವಶಕ್ಕೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್!

ಮಂಗಳೂರು: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ; ನಳೀನ್ ಕುಮಾರ್ ಕಟೀಲು ಸೇರಿ 236 ಮಂದಿ ಸುರಕ್ಷಿತ!

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ