ಸಿಎಂ ವಿಜಯ್ ಜೊತೆ ಫೋಟೋ  
ದೇಶ

ತಮಿಳುನಾಡು ಸಿಎಂ ವಿಜಯ್ ಜೊತೆ ಫೋಟೋ: ಮನೆಕೆಲಸದಾಕೆಯ 22 ವರ್ಷಗಳ ಆಸೆ ಈಡೇರಿಸಿದ ಪ್ರಿಯಾಂಕಾ ಗಾಂಧಿ

ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ನಿವಾಸದಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆಯನ್ನು ವಿಜಯ್ ಅವರಿಗೆ ಪರಿಚಯಿಸಿದರು. ಆ ಮಹಿಳೆಗೆ ವಿಜಯ್ ಅವರೊಂದಿಗೆ ಬಹಳ ದಿನಗಳಿಂದ ಫೋಟೋ ತೆಗೆಸಿಕೊಳ್ಳುವ ಆಸೆಯಿದೆ ಎಂದು ತಿಳಿಸಿದರು.

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ , ಬಹುಕಾಲದಿಂದ ತಮ್ಮನ್ನು ಭೇಟಿಯಾಗುವ ಆಸೆ ಹೊಂದಿದ್ದ ಮಹಿಳೆಯೊಬ್ಬರಿಗೆ ಫೋಟೋ ನೀಡುವ ಮೂಲಕ ಅವರ ಬಹಳ ವರ್ಷದ ಆಸೆಯನ್ನು ಈಡೇರಿಸಿದ್ದಾರೆ.

ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ನಿವಾಸದಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆಯನ್ನು ವಿಜಯ್ ಅವರಿಗೆ ಪರಿಚಯಿಸಿದರು. ಆ ಮಹಿಳೆಗೆ ವಿಜಯ್ ಅವರೊಂದಿಗೆ ಬಹಳ ದಿನಗಳಿಂದ ಫೋಟೋ ತೆಗೆಸಿಕೊಳ್ಳುವ ಆಸೆಯಿದೆ ಎಂದು ತಿಳಿಸಿದರು.

ವಿಜಯ್ ಕೂಡಲೇ ಆಕೆಯ ಮನವಿಗೆ ಒಪ್ಪಿ, ಆಕೆಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಅಲ್ಲದೆ, ಆಕೆಯ ಯೋಗಕ್ಷೇಮವನ್ನೂ ವಿಚಾರಿಸಿದರು.

ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಆತ್ಮಕಥನದ ಅಧಿಕೃತ ಬಿಡುಗಡೆ ಸಮಾರಂಭಕ್ಕೆ ತಮಿಳು ನಾಡು ಸಿಎಂ ವಿಜಯ್ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ ಕಾಂಗ್ರೆಸ್ ಹೊರತಾದ ಏಕೈಕ ಮುಖ್ಯಮಂತ್ರಿ ಅವರಾಗಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯ್ ಅವರನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಾಗತಿಸಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮೊದಲ ಸಾಲಿನಲ್ಲಿ ವಿಜಯ್ ಅವರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮೇಕೆದಾಟು ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳ ನಡುವೆಯೇ ಕಾರ್ಯಕ್ರಮದಲ್ಲಿ ವಿಜಯ್ ಅವರ ಉಪಸ್ಥಿತಿ ಗಮನ ಸೆಳೆಯಿತು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ವಿಜಯ್ ಕುಳಿತಿರುವುದು ಹಾಗೂ ಸೋನಿಯಾ ಗಾಂಧಿ ಅವರ ಪಕ್ಕದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕುಳಿತಿರುವುದು ಸೇರಿದಂತೆ ಆಸನ ವ್ಯವಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

'ಅಪರಿಚಿತರ ಜೊತೆ ಪ್ರಯಾಣಿಸಬೇಡಿ': ಎಚ್ಚರಿಕೆ ನಿರ್ಲಕ್ಷಿಸಿ ಸ್ಥಳೀಯರೊಂದಿಗೆ ಬ್ರೆಜಿಲ್ ಮಹಿಳೆ ಮರುಭೂಮಿಯಲ್ಲಿ ಕ್ಯಾಂಪಿಂಗ್, ಮುಂದೇನಾಯ್ತು?

ಉತ್ತರ ಪ್ರದೇಶದಲ್ಲಿ ಮತ್ತೆ ಎನ್ಕೌಂಟರ್; ಪೊಲೀಸರ ಗುಂಡಿಗೆ Gangster ವಹೀದ್ ಅನ್ಸಾರಿ ಹತ

Kulgam Encounter: LeT ಸಂಘಟನೆಯ ಪ್ರಮುಖ ಉಗ್ರ ಲತೀಫ್ ಭಟ್ ಹೊಡೆದುರುಳಿಸಿದ ಭಾರತೀಯ ಸೇನೆ! ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕ!