ಸುರೇಶ್ ಗೋಪಿ 
ದೇಶ

'ವಿಜ್ಞಾನ ಗೊತ್ತಿಲ್ಲದ ಮುಟ್ಟಾಳರು': ಎಥೆನಾಲ್ ಮಿಶ್ರಣ ವಿರೋಧಿಗಳಿಗೆ ಕೇಂದ್ರ ಸಚಿವ ಸುರೇಶ್ ಗೋಪಿ ತಿರುಗೇಟು!

E20 ಪೆಟ್ರೋಲ್ ಕುರಿತು ಅಪಪ್ರಚಾರ ಮಾಡುತ್ತಿರುವವರ ರಾಜಕೀಯ ಚಿಂತನೆಗಳು ವಿಕೃತಗೊಂಡಿವೆ. ಎಥೆನಾಲ್ ಮಿಶ್ರಣದ ಹಿಂದಿನ ವಿಜ್ಞಾನ ತಿಳಿಯದವರು ಈಡಿಯಟ್​ಗಳು..ಅವರು ಕೊನೆಯವರೆಗೂ ಮೂರ್ಖರಾಗಿಯೇ ಉಳಿಯುತ್ತಾರೆ

ತ್ರಿಶೂರ್: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಟೀಕೆ ಮಾಡುವವರು ಈಡಿಯಟ್ಸ್​. ಅವರಿಗೆ ವಿಜ್ಞಾನ ಗೊತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.

ತ್ರಿಶೂರ್‌ನಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಎಥೆನಾಲ್​ ಬಳಕೆ ಬಗ್ಗೆ ಉಲ್ಲೇಖಿಸಿದರು.

E20 ಪೆಟ್ರೋಲ್ ಕುರಿತು ಅಪಪ್ರಚಾರ ಮಾಡುತ್ತಿರುವವರ ರಾಜಕೀಯ ಚಿಂತನೆಗಳು ವಿಕೃತಗೊಂಡಿವೆ. ಎಥೆನಾಲ್ ಮಿಶ್ರಣದ ಹಿಂದಿನ ವಿಜ್ಞಾನ ತಿಳಿಯದವರು ಈಡಿಯಟ್​ಗಳು..ಅವರು ಕೊನೆಯವರೆಗೂ ಮೂರ್ಖರಾಗಿಯೇ ಉಳಿಯುತ್ತಾರೆ ಎಂದು ಕಿಡಿಕಾರಿದರು.

"ಅಂತಹ ವ್ಯಕ್ತಿಗಳಿಗೆ ನಾನು ಯಾವುದೇ ಕೆಟ್ಟ ಹೆಸರುಗಳನ್ನು ಇಡುವುದಿಲ್ಲ. ಆದರೆ, ಈ ಮೂರ್ಖರಿಗೆ ವಿಜ್ಞಾನದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಮಾತ್ರ ಹೇಳಬಲ್ಲೆ, ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣವನ್ನು ಯಾರು ಬೇಕಾದರೂ ಪರೀಕ್ಷಿಸಬಹುದು ಮತ್ತು ಅಂತಹ ಪರಿಶೀಲನೆಗಳನ್ನು ತಾನು ತಡೆಯುವುದಿಲ್ಲ ಎಂದು ಗೋಪಿ ತಿಳಿಸಿದರು.

ವೈಜ್ಞಾನಿಕವಾಗಿ ಅನುಮೋದಿಸಲಾದ ಮಿಶ್ರಣದ ಮಿತಿ ಶೇಕಡಾ 20 ಆಗಿದ್ದು, ಗ್ರಾಹಕರು ಯಾವುದೇ ಇಂಧನ ಮಾರಾಟ ಕೇಂದ್ರದಿಂದ ಪಡೆಯುವ ಪೆಟ್ರೋಲ್‌ನಲ್ಲಿ ಇದಕ್ಕಿಂತ ಹೆಚ್ಚು ಎಥೆನಾಲ್ ಇರಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಇಂಧನದಲ್ಲಿ ಎಥೆನಾಲ್ ಅಂಶವನ್ನು ಪರೀಕ್ಷಿಸುತ್ತೇವೆ ಎಂದು ಹೇಳುವವರು, ಕ್ಯಾನಿಷ್ಟರ್‌ಗಳಲ್ಲಿ ಪೆಟ್ರೋಲ್ ಖರೀದಿಸಿ ಅದಕ್ಕೆ ಬೇರೆ ಯಾವುದೋ ವಸ್ತುವನ್ನು ಬೆರೆಸಿ ಮಾದರಿಗಳನ್ನು ಸಂಗ್ರಹಿಸುತ್ತಿರಬಹುದು ಎಂದು ಆರೋಪಸಿದರು. ಅಂತಹವರ ಸುಳ್ಳು ಹೇಳಿಕೆ ತನಿಖೆ ಮಾಡಲು ನಾವು ಸಿಬಿಐ ತನಿಖೆ ಒಪ್ಪಿಸುತ್ತೇವೆ. ಆಗ ಸತ್ಯಾಂಶ ಹೊರ ಬರುತ್ತದೆ. ಇದರಿಂದ ಆಗ ಈ ಜನರೇ ಸಿಬಿಐ ವಿರುದ್ಧವೂ ತಿರುಗಿಬೀಳುತ್ತಾರೆ ಎಂದು ಕಿಡಿಕಾರಿದರು

ಪೆಟ್ರೋಲ್‌ನಲ್ಲಿ E10 ನಿಂದ E20 ವರೆಗಿನ ಎಥೆನಾಲ್ ಮಿಶ್ರಣವನ್ನು 'ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ'ದ ಆಳವಾದ ವೈಜ್ಞಾನಿಕ ಸಂಶೋಧನೆ ಮತ್ತು ಮರು-ಸಂಶೋಧನೆಯ ನಂತರವೇ ಜಾರಿಗೆ ತರಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗದ ಎಂಜಿನ್‌ಗಳಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸಲು ಎಥೆನಾಲ್ ಮಿಶ್ರಣವೊಂದೇ ಏಕೈಕ ತಿದ್ದುಪಡಿ ಮಾರ್ಗವಾಗಿದೆ ಎಂದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kulgam Encounter: LeT ಸಂಘಟನೆಯ ಪ್ರಮುಖ ಉಗ್ರ ಲತೀಫ್ ಭಟ್ ಹೊಡೆದುರುಳಿಸಿದ ಭಾರತೀಯ ಸೇನೆ! ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕ!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಿವಾಸ ಸೇರಿ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ; Video

IPLಗೆ ಧೋನಿ ವಿದಾಯ: 'ಮೆಂಟರ್ ಆಗಿ ಮಾಹಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ': ಪಾಕ್ ಮಾಜಿ ಕ್ರಿಕೆಟಿಗನ ಮೆಚ್ಚುಗೆ!

ಐಪಿಎಲ್ 2027: ಎಲ್ಲಾ 10 ತಂಡಗಳ ಆಟಗಾರರ ರಿಲೀಸ್ ಪಟ್ಟಿ ಪ್ರಕಟ; 18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ ಕೆಕೆಆರ್, RCB ಕಥೆ ಏನು?

Kulgam ದಾಳಿ ಎಫೆಕ್ಟ್: CRPF ಯೋಧರಿಗೆ Bulletproof jackets ಕಡ್ಡಾಯ; ಭದ್ರತಾ ಕ್ರಮ ಮತ್ತಷ್ಟು ಬಿಗಿ..!