ವಂಚನೆ (ಸಾಂಕೇತಿಕ ಚಿತ್ರ) online desk
ದೇಶ

75 ಲಕ್ಷ ರೂಪಾಯಿಗಳ ವಂಚನೆ; ಉತ್ತರ ಪ್ರದೇಶ ಮಾಜಿ ಶಾಸಕ, ಪುತ್ರರ ವಿರುದ್ಧ ಕೇಸ್!

ಸ್ಕ್ರ್ಯಾಪ್ ವ್ಯಾಪಾರಿ ಜಿತೇಂದ್ರ ಚೌಧರಿ ಈ ದೂರು ನೀಡಿದ್ದಾರೆ. ಶಾಸಕರ ಪುತ್ರರಾದ ಅಬ್ದುಲ್ ಅಹ್ಮದ್ ರಾಣಾ ಮತ್ತು ಅಜಮ್ ಶಾ ರಾಣಾ ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ.

ಲಖನೌ: ಉತ್ತರ ಪ್ರದೇಶದ ಮುಜಫರ್‌ನಗರದ ನೈ ಮಂಡಿ ಪೊಲೀಸ್ ಠಾಣೆಯಲ್ಲಿ, ಮಾಜಿ ಶಾಸಕ ಶಾನವಾಜ್ ರಾಣಾ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಾಗಿದೆ.

ನಕಲಿ ದಾಖಲೆಗಳನ್ನು ಬಳಸಿಕೊಂಡು, ಸ್ಕ್ರಾಪ್ ವ್ಯಾಪಾರಿಯೊಬ್ಬರಿಗೆ 75 ಲಕ್ಷ ರೂಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.

ಸ್ಕ್ರ್ಯಾಪ್ ವ್ಯಾಪಾರಿ ಜಿತೇಂದ್ರ ಚೌಧರಿ ಈ ದೂರು ನೀಡಿದ್ದಾರೆ. ಶಾಸಕರ ಪುತ್ರರಾದ ಅಬ್ದುಲ್ ಅಹ್ಮದ್ ರಾಣಾ ಮತ್ತು ಅಜಮ್ ಶಾ ರಾಣಾ ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ.

ಚೌಧರಿ ಅವರ ದೂರಿನ ಪ್ರಕಾರ, ರಾಣಾ ಅವರು ತಮ್ಮ ಘಟಕಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ತೋರಿಸಿ, ಚೌಧರಿಯವರಿಂದ 75 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಸ್ಕ್ರ್ಯಾಪ್ ಮತ್ತು ಇತರ ಕಬ್ಬಿಣದ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಅವರು ಹಣ ಪಾವತಿಸಿಲ್ಲ ಮತ್ತು ತಮಗೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾದಲ್ಲಿ ಐತಿಹಾಸಿಕ ತ್ರಿಪಕ್ಷೀಯ ಸಭೆ ಮುಕ್ತಾಯ; ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್- ಕ್ಸಿ ಜಿನ್ ಪಿಂಗ್ ಸಹಿ

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ: ಮತ್ತೆ ಎಚ್​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ