ರಾಹುಲ್ ಗಾಂಧಿ online desk
ದೇಶ

ಟ್ರಂಪ್-ಪುಟಿನ್-ಕ್ಸಿ ಭೇಟಿ: 'ಕಾಂಗ್ರೆಸ್ ಇದ್ದಿದ್ದರೆ ಭಾರತವೂ ಆ ಮೇಜಿನಲ್ಲಿರುತ್ತಿತ್ತು' ಹೇಳಿಕೆ; ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ- ರಾಹುಲ್ ಹೇಳಿಕೆಗೆ BJP ತಿರುಗೇಟು

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಶುಕ್ರವಾರ ತಿರುಗೇಟು ನೀಡಿದ್ದು, “ದೇಶಕ್ಕೆ ಕಾಂಗ್ರೆಸ್‌ನಿಂದ ಉಪದೇಶದ ಅಗತ್ಯವಿಲ್ಲ”ಎಂದು ಹೇಳಿದ್ದಾರೆ.

ನವದೆಹಲಿ: ಅಮೆರಿಕ, ಚೀನಾ ಮತ್ತು ರಷ್ಯಾ ನಾಯಕರ ನಡುವಿನ ಐತಿಹಾಸಿಕ ತ್ರಿಪಕ್ಷೀಯ ಶೃಂಗಸಭೆಯ ಬೆನ್ನಲ್ಲೇ ಭಾರತದಲ್ಲಿ ರಾಜಕೀಯ ವಾಕ್ಸಮರ ಜೋರಾಗಿದೆ. ಭಾರತದ ವಿದೇಶಾಂಗ ನೀತಿಯ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟೀಕೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ತಿರುಗೇಟು ನೀಡಿದ್ದು, "ಕಾಂಗ್ರೆಸ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ" ಎಂದು ಕಿಡಿಕಾರಿದೆ.

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಶುಕ್ರವಾರ ತಿರುಗೇಟು ನೀಡಿದ್ದು, “ದೇಶಕ್ಕೆ ಕಾಂಗ್ರೆಸ್‌ನಿಂದ ಉಪದೇಶದ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಇಂದು ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತ ಬ್ರಿಕ್ಸ್ ಸದಸ್ಯತ್ವವನ್ನೇ ಕಳೆದುಕೊಳ್ಳುತ್ತಿತ್ತು ಮತ್ತು ಜಾಗತಿಕ ವೇದಿಕೆಯಲ್ಲಿ ಮೂಲೆಗುಂಪಾಗುತ್ತಿತ್ತು ಎಂದು ಭಂಡಾರಿ ಆರೋಪಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನದ ಮೇಲಿನ ಪ್ರೀತಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್, ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ 2013ರಂತೆಯೇ ಭಾರತ ಬ್ರಿಕ್ಸ್ ಸದಸ್ಯತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿತ್ತು. ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಭಾರತವನ್ನು ಕಡೆಗಣಿಸಲಾಗುತ್ತಿತ್ತು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನವನ್ನು ಚೀನಾಕ್ಕೆ ಬಿಟ್ಟುಕೊಡಲಾಗಿತ್ತು.

ಪಾಕಿಸ್ತಾನದ ಮೇಲಿನ ಪ್ರೀತಿಗಾಗಿ ಶರ್ಮ್ ಎಲ್ ಶೇಖ್‌ನಲ್ಲಿ ಭಾರತದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿತ್ತು. ನೆಹರೂ ಅವರ ಚೀನಾ ನೀತಿಯ ಪರಿಣಾಮ 1962ರ ಯುದ್ಧದಲ್ಲಿ ಭಾರತ ಅವಮಾನ ಎದುರಿಸಬೇಕಾಯಿತು ಎಂದು ಟೀಕಿಸಿದ್ದಾರೆ.

ಪಾಕಿಸ್ತಾನದ ಮೇಲಿನ ಪ್ರೀತಿಯನ್ನೇ ಕೇಂದ್ರವಾಗಿಟ್ಟುಕೊಂಡು ಭಾರತದ ವಿದೇಶಾಂಗ ನೀತಿಯನ್ನು ರೂಪಿಸಿದ ಕಾಂಗ್ರೆಸ್‌ನಿಂದ ದೇಶಕ್ಕೆ ಉಪದೇಶದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ತ್ರಿಪಕ್ಷೀಯ ಸಭೆಯ ಬಳಿಕ ರಾಹುಲ್ ಗಾಂಧಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತಿರುತ್ತಿದ್ದರು. ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಚೀನಾದ ಶೆನ್‌ಜೆನ್‌ನಲ್ಲಿ ಭೇಟಿಯಾದ ಈ ಮೂವರು ನಾಯಕರು, ‘ಶಾಂತಿಯತ್ತ ಸಾಗುವ ಘೋಷಣೆ’ ಎಂಬ ಜಂಟಿ ಘೋಷಣೆಯನ್ನು ಅಂಗೀಕರಿಸಿದ್ದಾರೆ. ಪರಮಾಣು ಅಪಾಯಗಳನ್ನು ಕಡಿಮೆ ಮಾಡುವುದು, ಇಂಧನ ಪೂರೈಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ಐಸಿಸಿ) ಅಧಿಕಾರ ವ್ಯಾಪ್ತಿಯ ದುರ್ಬಳಕೆಯನ್ನು ತಡೆಯುವ ಕುರಿತು ಮಾತುಕತೆ ನಡೆಸಲು ಅವರು ಬದ್ಧತೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಭಾರತದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ಜಾಗತಿಕ ಚರ್ಚೆಗಳಲ್ಲಿ ಭಾರತ ಇನ್ನಷ್ಟು ಸಕ್ರಿಯ ಪಾತ್ರ ವಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತವು ಈಗ ಕೇವಲ ಅಂಚಿನ ಪಾತ್ರ ವಹಿಸುತ್ತಿದೆ ಎಂಬ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ಪಾತ್ರವನ್ನೂ ಅವರು ಉಲ್ಲೇಖಿಸಿದ್ದರು. ಬುಧವಾರ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್, “ಭಾರತದ ಗಾತ್ರ ಮತ್ತು ಪ್ರಭಾವದ ಆಧಾರದಲ್ಲಿ ಜಾಗತಿಕ ಮಟ್ಟದಲ್ಲಿ ಸಹಜವಾಗಿಯೇ ತನ್ನದೇ ಆದ ಧ್ವನಿಯನ್ನು ಹೊಂದಿದೆ. ಜಾಗತಿಕ ಚರ್ಚೆಗಳಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಬೇಕು. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತ ಈಗ ಅಂಚಿನ ಪಾತ್ರಕ್ಕೆ ಸೀಮಿತವಾಗಿದೆ. ಪಾಕಿಸ್ತಾನ ಮಾತ್ರ ಇರಾನ್ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ” ಎಂದಿದ್ದರು.

ಚಿಕಾಗೊ ವಿಶ್ವವಿದ್ಯಾಲಯದಲ್ಲಿ ರಾಹುಲ್ ನೀಡಿದ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಭಂಡಾರಿ, ಅವರನ್ನು ‘ಪಾಕಿಸ್ತಾನದ ಅಭಿಮಾನಿ’ ಎಂದು ಟೀಕಿಸಿದ್ದರು.

ರಾಹುಲ್ ಗಾಂಧಿಗೆ ಪಾಕಿಸ್ತಾನದ ಬಗ್ಗೆ ಇಷ್ಟೊಂದು ಆಸಕ್ತಿ ಏಕೆ? ಪ್ರತಿಯೊಂದು ಜಾಗತಿಕ ವೇದಿಕೆಯಲ್ಲೂ ಅವರು ಪಾಕಿಸ್ತಾನದ ಅಭಿಮಾನಿಯಂತೆ ವರ್ತಿಸುತ್ತಾರೆ. ವಿದೇಶಾಂಗ ನೀತಿಯ ವಿಚಾರದಲ್ಲಿ ಪಾಕಿಸ್ತಾನವನ್ನೇ ಮಾದರಿಯಾಗಿ ಬಿಂಬಿಸುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದಿದ್ದರು.

ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಭಾರತದ ಶಾಂತಿ ಪ್ರಯತ್ನಗಳನ್ನು ಒಪ್ಪಿಕೊಂಡಿವೆ ಎಂಬುದನ್ನು ರಾಹುಲ್ ಮರೆತಿದ್ದಾರೆ. ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ನಿರ್ಬಂಧಗಳಿಂದ ಇರಾನ್ ಭಾರತಕ್ಕೆ ವಿನಾಯಿತಿ ನೀಡಿದೆ. ಭಯೋತ್ಪಾದಕ ರಾಷ್ಟ್ರವಾದ ಪಾಕಿಸ್ತಾನದ ಮೇಲಿನ ರಾಹುಲ್ ಅವರ ಪ್ರೀತಿಯಿಂದಾಗಿ ಯುಪಿಎ ಸರ್ಕಾರ ಶರ್ಮ್ ಎಲ್ ಶೇಖ್‌ನಲ್ಲಿ ಭಾರತದ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಿಕೊಂಡಿತ್ತು. 26/11ರ ಭಯೋತ್ಪಾದಕ ದಾಳಿಯ ಬಳಿಕವೂ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ” ಎಂದು ಭಂಡಾರಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

'ಅಕ್ವಾನ್' ಚಂಡಮಾರುತ: ಒಡಿಶಾದಲ್ಲಿ 1.2 ಲಕ್ಷ ಜನರನ್ನು ಸ್ಥಳಾಂತರ, 69 ರೈಲು ಸೇವೆ ರದ್ದು

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!

ಉಗ್ರರಿಗೆ ಕುಮ್ಮಕ್ಕು ನಿಲ್ಲಿಸದೆ ಹೊರತು ನಿಮ್ಮ ಜೊತೆ ಸಂಧಾನ ಅಸಾಧ್ಯ: ಪಾಕ್‌ ಜೊತೆಗಿನ ಮಾತುಕತೆಗೆ ಲಕ್ಷ್ಮಣರೇಖೆ ಎಳೆದ ರಾಹುಲ್ ಗಾಂಧಿ

EPFO ನಿಯಮಗಳಲ್ಲಿ 3 ಮಹತ್ವದ ಬದಲಾವಣೆಗಳಿಗೆ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು...