ಮೃತ ಬಾಲಕಿ ಪೀಹು 
ದೇಶ

ಜೈಪುರ: ಮನೆಯಲ್ಲಿ ತಯಾರಿಸಿದ ನೂಡಲ್ಸ್ ತಿಂದು ಬಾಲಕಿ ಸಾವು; ಸಹೋದರಿ ಅಸ್ವಸ್ಥ!

ತಂಗಿ ಪೀಹು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮಲಗಿದ್ದಾಳೆ. ತಕ್ಷಣವೇ ತಾಯಿ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಪೀಹು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ

ಜೈಪುರ: ಮನೆಯಲ್ಲಿ ತಯಾರಿಸಿದ ನೂಡಲ್ಸ್‌ ಸೇವನೆ ಮಾಡಿದ ನಂತರ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಆಕೆಯ ಅಕ್ಕ ಅಸ್ವಸ್ಥಳಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಫುಡ್‌ ಪಾಯಿಸನಿಂಗ್‌ ಇರಬಹುದು ಎನ್ನಲಾಗಿದೆ. ನ.19ರಂದು ಈ ಘಟನೆ ನಡೆದಿದೆ. ಪೀಹು ಕುಮಾವತ್‌ ಹಾಗೂ ದಿವ್ಯಾಂಶಿ ಎಂಬ ಸಹೋದರಿಯರು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾವೇ ನೂಡಲ್ಸ್‌ ತಯಾರಿಸಿಕೊಂಡು ತಿಂದಿದ್ದಾರೆ. ನಂತರ ಇಬ್ಬರೂ ನಿದ್ದೆ ಮಾಡಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ತಾಯಿ ಮನೆಗೆ ಬಂದಿದ್ದಾರೆ. ಈ ವೇಳೆ ದಿವ್ಯಾಂಶಿ ಅಸ್ವಸ್ಥಳಾಗಿದ್ದನ್ನು ತಾಯಿ ಗಮನಿಸಿದ್ದಾರೆ. ತಂಗಿ ಪೀಹು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮಲಗಿದ್ದಾಳೆ. ತಕ್ಷಣವೇ ತಾಯಿ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಪೀಹು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ದಿವ್ಯಾಂಶಿ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಡಿಸ್ಚಾರ್ಜ್‌ ಮಾಡಲಾಗಿದೆ.

ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಲಕಿ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕರಧನಿ ಪೊಲೀಸರು ನೂಡಲ್ಸ್‌ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಿಂದೆ ದೆಹಲಿಯ ಕೆಂಪುಕೋಟೆಯಿಂದ ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದವರು ಕಡತ ಸಿದ್ದಪಡಿಸೋದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..!

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್, ಯಾರೀ ಸ್ನಿಗ್ಧ ಸುಂದರಿ?