ಬಸ್, ರೈಲು ಆಯಿತು ಈಗ ವಿಮಾನದಲ್ಲೂ ಮಾರಾಮಾರಿ; ಸಹ ಪ್ರಯಾಣಿಕನಿಗೆ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ ವ್ಯಕ್ತಿ!
ಸಹ ಪ್ರಯಾಣಿಕರೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೊಚ್ಚಿ: ಬಸ್ಸು ಹಾಗೂ ರೈಲಿನಲ್ಲಿ ಪ್ರಯಾಣಿಕರ ನಡುವೆ ಜಗಳ ನಡುವೆಯುವುದು ಸಾಮಾನ್ಯ. ಆದರೆ ಅಬುಧಾಬಿಯಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲೂ ಪ್ರಯಾಣಿಕರ ನಡುವೆ ಮಂಗಳವಾರ ಮಾರಾಮಾರಿ ನಡೆದಿದೆ.
ಸಹ ಪ್ರಯಾಣಿಕರೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೊಚ್ಚಿಯ ವೈಟ್ಟಿಲ ಮೂಲದ ರೋಶನ್ ಮಾರ್ಟಿನ್ ಎಂಬಾತ, ವಿಮಾನದಲ್ಲಿ(6E1404) ಪ್ರಯಾಣಿಸುತ್ತಿದ್ದಾಗ ತ್ರಿಶೂರ್ ನಿವಾಸಿ ಯೂಸುಫ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಪಾಕ್ ವೆಬ್ ಸಿರೀಸ್ ನಿಷೇಧಿಸಿ: ಪ್ರಧಾನಿ ಮೋದಿಗೆ ಭಾರತೀಯ ಸಿನೆಮಾ ಕಾರ್ಮಿಕರ ಸಂಘಟನೆ ಪತ್ರ!
ನೆಡುಂಬಸ್ಸೆರಿ ಪೊಲೀಸರ ಪ್ರಕಾರ, ಮಾರ್ಟಿನ್ ಅವರು ಯೂಸುಫ್ ಅವರ ಮುಖಕ್ಕೆ ಗುದ್ದಿದ್ದರಿಂದ ಅವರ ಕನ್ನಡಕ ಮುರಿದುಹೋಗಿದೆ ಮತ್ತು ಬಲ ಕಣ್ಣಿಗೆ ಗಾಯವಾಗಿದೆ. ಜೊತೆಗೆ, ಜಗಳದ ವೇಳೆ ಆತ ತನ್ನ ಬೆಲ್ಟ್ ತೆಗೆದು ಯೂಸುಫ್ ಅವರ ಕುತ್ತಿಗೆಗೆ ಬಿಗಿದು ಹತ್ಯೆಗೆ ಯತ್ನಿಸಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ (FIR) ಪ್ರಕಾರ, ಘಟನೆ ನಡೆದಾಗ ಆರೋಪಿಯು 30D ಆಸನದಲ್ಲಿ ಮತ್ತು ಯೂಸುಫ್ 31B ಆಸನದಲ್ಲಿ ಕುಳಿತಿದ್ದರು.
ದೂರಿನ ಆಧಾರದ ಮೇಲೆ, ಪೊಲೀಸರು ಮಾರ್ಟಿನ್‌ನನ್ನು ಬಂಧಿಸಿ, ಭಾರತೀಯ ನ್ಯಾಯ ಸಂಹಿತೆ(BNS)ಯ ಸೆಕ್ಷನ್ 115(2) ಮತ್ತು 118(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.