ಗಂಡಸರಿಗೂ ಗುಡ್ ನ್ಯೂಸ್: ಸರ್ಕಾರಿ ನೌಕರರಿಗೆ 15 ದಿನ ಪಿತೃತ್ವ ರಜೆ ಘೋಷಿಸಿದ ಸಿಎಂ ವಿಜಯ್!
ತಮಿಳುನಾಡು ಸರ್ಕಾರ, ಪುರುಷ ನೌಕರರಿಗೆ ಇಂತಹ ಸವಲತ್ತು ನೀಡುತ್ತಿರುವುದು ಇದೇ ಮೊದಲು.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಗುರುವಾರ ಪುರುಷ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 15 ದಿನಗಳ ಪಿತೃತ್ವ ರಜೆ ಘೋಷಿಸಿದ್ದಾರೆ.
ತಮಿಳುನಾಡು ಸರ್ಕಾರ, ಪುರುಷ ನೌಕರರಿಗೆ ಇಂತಹ ಸವಲತ್ತು ನೀಡುತ್ತಿರುವುದು ಇದೇ ಮೊದಲು.
ಪುರುಷ ಸರ್ಕಾರಿ ನೌಕರ 15 ದಿನಗಳ ಪಿತೃತ್ವ ರಜೆ ಪಡೆಯಬಹುದು ಮತ್ತು ಅವರು ಮಗುವಿನ ಜನನದ 15 ದಿನಗಳ ಮೊದಲು ಅಥವಾ ಮಗುವಿನ ಜನನದ 6 ತಿಂಗಳ ಒಳಗೆ ಈ ರಜೆ ಪಡೆಯಬಹುದು ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ತಮಿಳುನಾಡು ಸರ್ಕಾರದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಪ್ರಸ್ತುತ 365 ದಿನಗಳ ಹೆರಿಗೆ ರಜೆ ನೀಡಲಾಗುತ್ತಿದ್ದರೂ, ಪುರುಷರಿಗೆ ರಜೆ ಇರಲಿಲ್ಲ. ಹೀಗಾಗಿ ಸರ್ಕಾರಿ ನೌಕರರ ಕೋರಿಕೆಯ ಮೇರೆಗೆ ವಿಜಯ್ ಸರ್ಕಾರ ಪುರುಷ ಉದ್ಯೋಗಿಗಳಿಗೆ ಪಿತೃತ್ವ ರಜೆಯನ್ನು ಪರಿಚಯಿಸಿದೆ.