ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಂಗಾಳದ LoP ಸ್ಥಾನ ಕಳೆದುಕೊಂಡ ಟಿಎಂಸಿ ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ; ಹೈಕೋರ್ಟ್ ಹೇಳಿದ್ದೇನು?

ಅಲ್ಲದೆ, ಟಿಎಂಸಿಯ ಮುಖ್ಯ ಸಚೇತಕರನ್ನಾಗಿ (Chief Whip) ಅಖ್ರುಜ್ಜಮಾನ್ ಅವರನ್ನು ನೇಮಕ ಮಾಡಿದ್ದ ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ.

ರಿತಬ್ರತಾ ಬ್ಯಾನರ್ಜಿ — online desk
Srinivas Rao BV
Updated On : 27 Nov 2026, 4:37 pm

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರನ್ನಾಗಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಬಂಡಾಯ ಬಣದ ರಿತಬ್ರತಾ ಬ್ಯಾನರ್ಜಿ (Ritabrata Banerjee) ಅವರನ್ನು ನೇಮಕ ಮಾಡಿದ್ದ ಕ್ರಮವನ್ನು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಈ ನೇಮಕಾತಿಯು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಟಿಎಂಸಿಯ ಮುಖ್ಯ ಸಚೇತಕರನ್ನಾಗಿ (Chief Whip) ಅಖ್ರುಜ್ಜಮಾನ್ ಅವರನ್ನು ನೇಮಕ ಮಾಡಿದ್ದ ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ.

Also Read

ಇನ್ಮುಂದೆ ಪಶ್ಚಿಮ ಬಂಗಾಳ 'ಪಶ್ಚಿಮ್ ಬಂಗಾ' ಮರುನಾಮಕರಣ: ಸಿಎಂ ಸುವೇಂದು ಅಧಿಕಾರಿ ಸರ್ಕಾರ ನಿರ್ಧಾರ!

ಪ್ರತಿಪಕ್ಷ ನಾಯಕ ಮತ್ತು ಮುಖ್ಯ ಸಚೇತಕರ ನೇಮಕಾತಿಯನ್ನು 10 ದಿನಗಳ ಒಳಗಾಗಿ ಮರುಪರಿಶೀಲಿಸುವಂತೆ ನ್ಯಾಯಮೂರ್ತಿ ಕೃಷ್ಣ ರಾವ್ ಅವರು ಸ್ಪೀಕರ್ ರಥೀಂದ್ರ ಬೋಸ್ ಅವರಿಗೆ ನಿರ್ದೇಶನ ನೀಡಿದ್ದಾರೆ.

Advertisement

Advertisement

ಈ ನೇಮಕಾತಿಗಳನ್ನು ಪ್ರಶ್ನಿಸಿ ಟಿಎಂಸಿ ನಾಯಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪಿನಲ್ಲಿ, ಬ್ಯಾನರ್ಜಿ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮತ್ತು ಅಖ್ರುಜ್ಜಮಾನ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ನಿರ್ಧಾರವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಜೂನ್ 3 ರಂದು ಸ್ಪೀಕರ್ ಬೋಸ್ ಅವರು ಬ್ಯಾನರ್ಜಿ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement