ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಇಂಡಿಯಾ ಬಣದ NCP-SP ಬೆಂಬಲ! ನಾಳೆಯ ಸಭೆಗೆ ಸಂಸದೆ ಸುಪ್ರಿಯಾ ಸುಳೆ ಗೈರು

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಅವರು ನಾಳೆ ಬೆಳಿಗ್ಗೆ 11:30ಕ್ಕೆ ನಿಗದಿಯಾಗಿರುವ 'ಇಂಡಿಯಾ' (INDIA) ಒಕ್ಕೂಟದ ಸಭೆಯಲ್ಲಿ ಭಾಗವಹಿಸುತ್ತಿಲ್ಲ.

ಸುಪ್ರಿಯಾ ಸುಳೆ
Nagaraja AB
Updated On : 27 Nov 2026, 7:47 pm

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಶರದ್‌ಚಂದ್ರ ಪವಾರ್ ಬಣ - NCP-SP) ಪ್ರಸ್ತಾವಿತ 'ಕ್ಷೇತ್ರ ಮರುವಿಂಗಡಣೆ ಮಸೂದೆ'ಯ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪಕ್ಷದ ಶಾಸಕ ಜಿತೇಂದ್ರ ಅವ್ಹಾದ್ ಅವರು, ಸಂಸತ್ತಿನಲ್ಲಿ ಈ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಮಾತನಾಡಿದ ಅವ್ಹಾದ್, ಅನೌಪಚಾರಿಕ ಮಾತುಕತೆ ವೇಳೆ ಹಿರಿಯ ನಾಯಕ ಶರದ್ ಪವಾರ್ ಅವರು, ಕ್ಷೇತ್ರಗಳ ಮರುವಿಂಗಡಣೆ ಅಗತ್ಯ ಎಂದು ಹೇಳಿದ್ದಾಗಿ ತಿಳಿಸಿದರು. ಪ್ರಸ್ತುತ ಲೋಕಸಭೆಯಲ್ಲಿ ಶರದ್ ಪವಾರ್ ಅವರ ಪಕ್ಷಕ್ಕೆ ಎಂಟು ಸಂಸದರಿದ್ದಾರೆ.

ಈ ಮಧ್ಯೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಅವರು ನಾಳೆ ಬೆಳಿಗ್ಗೆ 11:30ಕ್ಕೆ ನಿಗದಿಯಾಗಿರುವ 'ಇಂಡಿಯಾ' (INDIA) ಒಕ್ಕೂಟದ ಸಭೆಯಲ್ಲಿ ಭಾಗವಹಿಸುತ್ತಿಲ್ಲ.

Advertisement

Advertisement

ಪಕ್ಷದ ಮುಖ್ಯಸ್ಥರೂ ಹಾಗೂ ಅವರ ತಂದೆಯೂ ಆಗಿರುವ ಶರದ್ ಪವಾರ್ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ, ಅವರೊಂದಿಗೆ ಇರಲು ಸುಪ್ರಿಯಾ ಸುಳೆ ಮುಂಬೈನಲ್ಲೇ ಉಳಿಯಲಿದ್ದಾರೆ. ಅವರು ನವೆಂಬರ್ 30, ಸೋಮವಾರದಂದು ದೆಹಲಿಗೆ ಪ್ರಯಾಣಿಸಲಿದ್ದಾರೆ. ಸಂಸತ್ತಿನ ಅಧಿವೇಶನ ಸಮೀಪಿಸುತ್ತಿರುವ ಹೊತ್ತಲ್ಲೇ ಅವರು ಸಭೆಗೆ ಗೈರುಹಾಜರಾಗುತ್ತಿರುವುದು ವಿರೋಧ ಪಕ್ಷಗಳ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಬಹುದು.

ಸಂವಿಧಾನದ ನಿಬಂಧನೆಗಳ ಪ್ರಕಾರ, ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುತ್ತದೆ. ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ, ಈ ಮಸೂದೆಯನ್ನು ಅಂಗೀಕರಿಸಲು ಸರ್ಕಾರಕ್ಕೆ 360 ಮತಗಳ ಅಗತ್ಯವಿದೆ.

ಲೋಕಸಭಾ ಸ್ಪೀಕರ್ ಸೇರಿದಂತೆ ಎನ್‌ಡಿಎ (NDA) ಮೈತ್ರಿಕೂಟವು ಪ್ರಸ್ತುತ 320 ಮತಗಳನ್ನು ಹೊಂದಿದೆ. ಅಂದರೆ, ಅಗತ್ಯವಿರುವ ಬಹುಮತಕ್ಕೆ ಇನ್ನೂ 40 ಮತಗಳ ಕೊರತೆಯಿದೆ. 'ಇಂಡಿಯಾ' (INDIA) ಮೈತ್ರಿಕೂಟವು 183 ಮತಗಳನ್ನು ಹೊಂದಿದ್ದರೆ, ಇತರ ಪಕ್ಷಗಳು 35 ಮತಗಳನ್ನು ಹೊಂದಿವೆ. ಹೀಗಾಗಿ, ಕೆಳಮನೆಯಲ್ಲಿ (ಲೋಕಸಭೆ) ಅಗತ್ಯವಿರುವ ಸಂಖ್ಯೆಯನ್ನು ತಲುಪಲು ಸರ್ಕಾರವು ತನ್ನ ಬೆಂಬಲದ ನೆಲೆಯನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ.

ರಾಜ್ಯಸಭೆಯಲ್ಲೂ ಸರ್ಕಾರವು ಸಂಖ್ಯಾಬಲದ ಸವಾಲನ್ನು ಎದುರಿಸುತ್ತಿದೆ. ಅಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು 163 ಮತಗಳ ಅಗತ್ಯವಿದೆ. ಪ್ರಸ್ತುತ ಎನ್‌ಡಿಎ 152 ಮತಗಳನ್ನು ಹೊಂದಿದ್ದು, ಅಗತ್ಯವಿರುವ ಸಂಖ್ಯೆಗಿಂತ 11 ಮತಗಳು ಕಡಿಮೆಯಾಗಲಿವೆ.

Also Read

ಮಿಷನ್ 360: ಕ್ಷೇತ್ರ ಮರುವಿಂಗಡಣೆ ಮಸೂದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಿಗುತ್ತಾ ಸಕ್ಸಸ್? ಅಗತ್ಯವಿರುವ ಬೆಂಬಲವೆಷ್ಟು?

'ಇಂಡಿಯಾ' ಮೈತ್ರಿಕೂಟವು 64 ಮತಗಳನ್ನು ಹೊಂದಿದ್ದರೆ, ಇತರ ಪಕ್ಷಗಳು 28 ಮತಗಳನ್ನು ಹೊಂದಿವೆ. ಪರಿಣಾಮವಾಗಿ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮುಂದುವರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು, ಸಂಸತ್ತಿನ ಉಭಯ ಸದನಗಳಲ್ಲಿಯೂ ಎನ್‌ಡಿಎ ಹೊರಗಿನ ಪಕ್ಷಗಳ ಬೆಂಬಲವನ್ನು ಸರ್ಕಾರವು ಪಡೆಯಬೇಕಾದ ಅನೀವಾರ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement