ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಚರ್ಚೆ: ನ. 30ರಿಂದ ಸಂಸತ್ ವಿಶೇಷ ಅಧಿವೇಶನ, ಸಚಿವಾಲಯ ಅಧಿಕೃತ ಪ್ರಕಟಣೆ
18ನೇ ಲೋಕಸಭೆಯ ಎಂಟನೇ ಅಧಿವೇಶನದ ಎರಡನೇ ಭಾಗವು ಸೋಮವಾರ ಆರಂಭವಾಗಲಿದೆ. ಸರ್ಕಾರದ ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಅಧಿವೇಶನ ಡಿಸೆಂಬರ್ 3 ಗುರುವಾರ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಲೋಕಸಭೆಯ 18ನೇ ಅವಧಿಯ ಎಂಟನೇ ಅಧಿವೇಶನದ ಎರಡನೇ ಭಾಗವು ಇದೇ ನವೆಂಬರ್ 30, ಸೋಮವಾರ ಆರಂಭವಾಗಲಿದೆ ಎಂದು ಲೋಕಸಭಾ ಸಚಿವಾಲಯ ನಿನ್ನೆ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಲೋಕಸಭೆ ಸಚಿವಾಲಯ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ನಾಲ್ಕು ದಿನಗಳ ಈ ಸಂಕ್ಷಿಪ್ತ ಅಧಿವೇಶನ ಡಿಸೆಂಬರ್ 3, ಗುರುವಾರ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
18ನೇ ಲೋಕಸಭೆಯ ಎಂಟನೇ ಅಧಿವೇಶನದ ಎರಡನೇ ಭಾಗವು ಸೋಮವಾರ ಆರಂಭವಾಗಲಿದೆ. ಸರ್ಕಾರದ ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಅಧಿವೇಶನ ಡಿಸೆಂಬರ್ 3 ಗುರುವಾರ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಷೇತ್ರ ಮರುವಿಂಗಡಣೆ ಚರ್ಚೆ ನಡುವೆ ಮತ್ತೆ ಸಂಸತ್ ಕಲಾಪ? ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ 'ಕೇಂದ್ರ' ಸಿದ್ಧತೆ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ನಡೆಸಲು ನವೆಂಬರ್ 30ರಂದು ಲೋಕಸಭೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆಯನ್ನು ಮತ್ತೆ ಕರೆಯುವಂತೆ ಕೇಂದ್ರ ಸರ್ಕಾರವು ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿಗೆ ಮನವಿ ಮಾಡಿದೆ ಎಂದು ಹೇಳಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಂದಿದೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಿರಣ್ ರಿಜಿಜು, ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಸಂಸತ್ತಿನ ಎರಡೂ ಸದನಗಳ ಕಲಾಪ ಡಿಸೆಂಬರ್ 3ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಯಾವ ಮಸೂದೆಗಳನ್ನು ಮಂಡಿಸಲಾಗುವುದು ಎಂಬುದನ್ನು ಪ್ರಕಟಣೆಯಲ್ಲಿ ಸ್ಪಷ್ಟಪಡಿಸದ ಹಿನ್ನೆಲೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿ ವಿಚಾರಗಳ ಕುರಿತು ಊಹಾಪೋಹಗಳು ತೀವ್ರಗೊಂಡಿವೆ. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.
ಕಳೆದ ಬಾರಿ ಮುಂಗಾರು ಅಧಿವೇಶನದ ವೇಳೆ ಕೊನೆಯ ಬಾರಿಗೆ ಸಂಸತ್ ಸಭೆ ಸೇರಿತ್ತು. ಆಗಸ್ಟ್ 13ರಂದು ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಅಧಿವೇಶನ ಮುಕ್ತಾಯಗೊಳಿಸಲಾಗಿತ್ತು.