ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

CRPF ಭದ್ರತೆ, ನ್ಯಾಯಾಧೀಶರ ಉಪಸ್ಥಿತಿ: ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರ ಸಂಭ್ರಮ

ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸಾಧ್ಯವಾಗದ ಕಾರಣ, ನವೆಂಬರ್ 28 ರಂದು ಸಿಆರ್ ಪಿಎಫ್ ಭದ್ರತೆಯಲ್ಲಿ ದೀಪ ಬೆಳಗಿಸಲಾಗಿದ್ದು, ಭಕ್ತರು ಸಂಭ್ರಮ ಸಡಗರದಿಂದ ಕಾರ್ತಿಕ ದೀಪ ಬೆಳಗುವುದನ್ನು ಕಣ್ತುಂಬಿಕೊಂಡಿದ್ದಾರೆ.

ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ — onlne desk
Srinivas Rao BV
Updated On : 28 Nov 2026, 5:27 pm

ಮಧುರೈ: ತಮಿಳುನಾಡಿನ ಮಧುರೈನ ತಿರುಪರಂಕುಂಡ್ರಂ ಬೆಟ್ಟದ ಮೇಲಿರುವ 'ದೀಪತ್ತೂಣ್' (ದೀಪಸ್ತಂಭ) ಕಂಬದಲ್ಲಿ ಭಕ್ತರು ಮತ್ತು ನ್ಯಾಯಾಧೀಶರ ಸಮ್ಮುಖದಲ್ಲಿ ಅರ್ಚಕರು ಕಾರ್ತಿಕ ದೀಪವನ್ನು ಬೆಳಗಿಸಿದ್ದಾರೆ.

ಮೇಘಾಲಯ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಸ್. ವೈದ್ಯನಾಥನ್ ಮತ್ತು ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ವಿ. ಪಾರ್ಥಿಬನ್ ಅವರು, ದೇವಾಲಯದ ಆಡಳಿತವನ್ನು ಮೇಲ್ವಿಚಾರಣೆ ಮಾಡಲು ನೇಮಕಗೊಂಡ 'ರಿಸೀವರ್‌'ಗಳಾಗಿ (ನಿರ್ವಾಹಕರಾಗಿ) ಈ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ನಡೆಸಿದರು.

ದೀಪದ ಕಂಬದ ಮೇಲೆ ನ.28 ರಂದು ಕಾರ್ತಿಕ ದೀಪ ಬೆಳಗಿಸುವುದಕ್ಕೆ ಸುಪ್ರೀಂ ಕೋರ್ಟ್ ನ.27 ರಂದು ತೀರ್ಪು ಪ್ರಕಟಿಸಿತ್ತು. ಈ ಆದೇಶ ಪ್ರಕಟಿಸುವ ವೇಳೆ, ಕಾರ್ತಿಕ ದೀಪ ಬೆಳಗಿಸುವ ಆದೇಶವನ್ನು ಪಾಲಿಸಲು ವಿಫಲವಾದ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾಡಳಿತವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

Advertisement

Advertisement

ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ತಿರುಪ್ಪರಂಕುಂಡ್ರಂನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಡಳಿಯನ್ನು ಅಮಾನತುಗೊಳಿಸಿದೆ. ಇದರೊಂದಿಗೆ, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲು ಇಬ್ಬರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ನೇಮಿಸಿದೆ.

ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸಾಧ್ಯವಾಗದ ಕಾರಣ, ನವೆಂಬರ್ 28 ರಂದು ಸಿಆರ್ ಪಿಎಫ್ ಭದ್ರತೆಯಲ್ಲಿ ದೀಪ ಬೆಳಗಿಸಲಾಗಿದ್ದು, ಭಕ್ತರು ಸಂಭ್ರಮ ಸಡಗರದಿಂದ ಕಾರ್ತಿಕ ದೀಪ ಬೆಳಗುವುದನ್ನು ಕಣ್ತುಂಬಿಕೊಂಡಿದ್ದಾರೆ.

Also Read

ಒಂದೇ ಬೆಟ್ಟ, ಎರಡು ನಂಬಿಕೆ: ಏನಿದು ತಿರುಪ್ಪರಂಕುಂದ್ರಂ ವಿವಾದದ ಅಸಲಿ ಕಥೆ? ಇಲ್ಲಿದೆ 100 ವರ್ಷಗಳ ಕಾನೂನು ಸಂಘರ್ಷದ ಚಿತ್ರಣ

ಏನಿದು ವಿವಾದ

ತಿರುಪ್ಪರಂಕುಂಡ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಾಲಯದ ದೀಪ ಮಂಟಪದಲ್ಲಿ ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಕಾರ್ತಿಕ ದೀಪ ಬೆಳಗಿಸಲಾಗುತ್ತದೆ. ಆದರೆ ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ 'ದೀಪತ್ತೂಣ್' ಕಲ್ಲಿನ ಕಂಬದ ಮೇಲೂ ದೀಪ ಬೆಳಗಿಸಲು ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಕೋರಿದ್ದವು. ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಒಂದು ಬಾರಿಯ ಮಧ್ಯಂತರ ವ್ಯವಸ್ಥೆಯಾಗಿ ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ದೇವಾಲಯದ ಟ್ರಸ್ಟ್ ಅನುಮತಿ ನಿರಾಕರಿಸಿದೆ ಎಂಬ ನೆಪವೊಡ್ಡಿ ಜಿಲ್ಲಾಡಳಿತ ಅಲ್ಲಿ ದೀಪ ಬೆಳಗಿಸಿರಲಿಲ್ಲ, ಇದು ಭಾರಿ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement