ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾರ್ತಿಕ ದೀಪ ಬೆಳಗಲು ಸುಪ್ರೀಂ ಆದೇಶ:'ಭಗವಾನ್ ಮುರುಗನ್‌ಗೆ ಜಯವಾಗಲಿ'; ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ ಎಕ್ಸ್ ಸಂದೇಶ!

ಆದರೆ ಪ್ರಧಾನಿ ಮೋದಿ ಅವರು ಪೋಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆಯಾಗಲೀ, ದೀಪತೂನ್ ವಿವಾದವಾಗಲಿ ನೇರವಾಗಿ ಉಲ್ಲೇಖಿಸಿಲ್ಲ. ಇಂಗ್ಲಿಷ್, ತಮಿಳು ಮತ್ತು ಹಿಂದಿ ಲಿಪಿಗಳಲ್ಲಿ ತಮಿಳು ಭಕ್ತಿಗೀತೆಯ ಘೋಷಣೆಯನ್ನು ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ
Shilpa D
Updated On : 28 Nov 2026, 10:43 am

ನವದೆಹಲಿ: ತಮಿಳುನಾಡಿನ ಮಧುರೈ ತಿರುಪ್ಪರಂಕುಂಡ್ರಮ್ ಬೆಟ್ಟದ ವಿವಾದಿತ ‘ದೀಪತೂನ್’ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ಮುರುಗನ್‌ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶುಕ್ರವಾರ ರಾತ್ರಿ ಎಕ್ಸ್‌ನಲ್ಲಿ ವೇಟ್ರಿವೇಲ್ ಮುರುಗನುಕ್ಕು ಅರೋಗರಾ! ಎಂಬ ಸಂದೇಶ ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಪೋಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆಯಾಗಲೀ, ದೀಪತೂನ್ ವಿವಾದವಾಗಲಿ ನೇರವಾಗಿ ಉಲ್ಲೇಖಿಸಿಲ್ಲ. ಇಂಗ್ಲಿಷ್, ತಮಿಳು ಮತ್ತು ಹಿಂದಿ ಲಿಪಿಗಳಲ್ಲಿ ತಮಿಳು ಭಕ್ತಿಗೀತೆಯ ಘೋಷಣೆಯನ್ನು ಹಂಚಿಕೊಂಡಿದ್ದಾರೆ.

ಶನಿವಾರ (ನವೆಂಬರ್ 28) ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ 'ದೀಪತೂಣ್' ಸ್ಥಳದಲ್ಲಿ ಕಾರ್ತಿಕ ದೀಪಂ ದೀಪವನ್ನು ಬೆಳಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭಗವಾನ್ ಮುರುಗನ್ ಅವರನ್ನು ಸ್ಮರಿಸುವ ಭಕ್ತಿ ಘೋಷಣೆಯನ್ನು ಪೋಸ್ಟ್ ಮಾಡಿದ್ದಾರೆ.

Advertisement

Advertisement

ಮೂರೂ ಭಾಷೆಯಲ್ಲಿ 'ಭಗವಾನ್‌ ಮುರುಗನ್‌ಗೆ ಗೆಲುವು' ಎನ್ನುವ ಅರ್ಥದ ಸಾಲು ಹಂಚಿಕೊಂಡಿದ್ದಾರೆ. "ವೆಟ್ರಿವೇಲ್ ಮುರುಗನುಕ್ಕು ಅರೋಗರ! (ಭಗವಾನ್ ಮುರುಗನ್ ಅವರಿಗೆ ಜಯವಾಗಲಿ)" ಎಂದು ಬರೆದಿದ್ದಾರೆ. ಇದರ ಜೊತೆಗೆ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ಈ ಘೋಷಣೆಯನ್ನು ಹಂಚಿಕೊಂಡಿದ್ದು, ಇಂಗ್ಲಿಷ್ ಆವೃತ್ತಿಯಲ್ಲಿ "Victory to Lord Muruga" ಎಂದು ಉಲ್ಲೇಖಿಸಲಾಗಿದೆ. ಮೋದಿ ಅವರ ಈ ಪೋಸ್ಟ್ ನ್ಯಾಯಾಲಯದ ಆದೇಶವನ್ನು ನೇರವಾಗಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.

Also Read

DMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!

ಈ ವಿವಾದದ ಹಿನ್ನೆಲೆ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶ. ನವೆಂಬರ್ 24ರ ಕಾರ್ತಿಕ ದೀಪೋತ್ಸವದಂದು ತಿರುಪ್ಪರಂಕುಂಡ್ರಮ್ ಬೆಟ್ಟದ ದೀಪತೂನ್‌ನಲ್ಲಿ ದೀಪ ಬೆಳಗಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಅಂದು ದೀಪತೂನ್‌ನಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಉಚ್ಚಿಪಿಳ್ಳಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement