ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕ್ಷೇತ್ರ ಮರುವಿಂಗಡಣೆ ಮಸೂದೆ: ಶೇ. 50ರಷ್ಟು ಸೀಟುಗಳ ಹೆಚ್ಚಳದಿಂದ ದಕ್ಷಿಣ ಭಾರತಕ್ಕೆ'ದೊಡ್ಡ ಗೆಲುವು'- KTR ಬೆಂಬಲ

ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಅವರು ಹೇಳಿದ್ದು, ತಮ್ಮ ಪಕ್ಷವು ಈ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಕೆ.ಟಿ. ರಾಮರಾವ್
Nagaraja AB
Updated On : 29 Nov 2026, 4:11 pm

ಹೈದರಾಬಾದ್: ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯ ಪರಿಷ್ಕೃತ ಪ್ರಸ್ತಾವನೆಯನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (KTR) ಭಾನುವಾರ ಸ್ವಾಗತಿಸಿದ್ದಾರೆ. ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಅವರು ಹೇಳಿದ್ದು, ತಮ್ಮ ಪಕ್ಷವು ಈ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

'ಎಎನ್‌ಐ' (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೆಟಿಆರ್, ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯಿಂದ ಸಂಸತ್ತಿನಲ್ಲಿ ತಮ್ಮ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ದಕ್ಷಿಣ ರಾಜ್ಯಗಳ ಕಳವಳವನ್ನು ಕೇಂದ್ರ ಸರ್ಕಾರ ಅಂತಿಮವಾಗಿ ಒಪ್ಪಿಕೊಂಡಿದೆ. ದಕ್ಷಿಣ ರಾಜ್ಯಗಳು ನಿರಂತರವಾಗಿ ವ್ಯಕ್ತಪಡಿಸಿದ ವಿರೋಧ ಮತ್ತು ಬೇಡಿಕೆಗಳು, ಈ ವಿಷಯವನ್ನು ಪರಿಗಣಿಸಲು ಹಾಗೂ ಸಂಸದೀಯ ಪ್ರಾತಿನಿಧ್ಯದಲ್ಲಿ ದಕ್ಷಿಣ ರಾಜ್ಯಗಳ ಪಾಲನ್ನು ರಕ್ಷಿಸಲು ಅಗತ್ಯ ಭರವಸೆಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಪ್ರೇರೇಪಿಸಿವೆ ಎಂದು ಅವರು ತಿಳಿಸಿದರು.

"ದಕ್ಷಿಣ ಭಾರತಕ್ಕೆ ಅನ್ಯಾಯವಾಗಬಾರದು ಎಂದು ನಾವು ಬಲವಾಗಿ ಧ್ವನಿ ಎತ್ತಿದಾಗ, ಭಾರತ ಸರ್ಕಾರವು ಅಂತಿಮವಾಗಿ ನಮ್ಮ ಸಲಹೆಯನ್ನು ಆಲಿಸಿತು. ಈಗ ಸರ್ಕಾರವು ಸಂಸದೀಯ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದಾಗಿ ಹೇಳುತ್ತಿರುವುದು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ ಎಂದು ಕೆಟಿಆರ್ ಹೇಳಿದರು.

Advertisement

Advertisement

ಈ ಪ್ರಸ್ತಾವನೆಯನ್ನು ದಕ್ಷಿಣ ಭಾರತಕ್ಕೆ ಸಿಕ್ಕ ಮಹತ್ವದ ಸಾಧನೆ ಎಂದು ಹೇಳಿದ ಬಿಆರ್‌ಎಸ್ ಕಾರ್ಯಾಧ್ಯಕ್ಷರು, ಇದು ದಕ್ಷಿಣ ಭಾರತದಾದ್ಯಂತ ಇರುವ ಜನರು ಹೆಮ್ಮೆಪಡುವಂತಹ ಬೆಳವಣಿಗೆಯಾಗಿದೆ ಎಂದರು. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯಗಳಿಗೆ ಶಿಕ್ಷೆ ನೀಡುವ ಬದಲು, ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ಬಲಪಡಿಸುವುದೇ ಕ್ಷೇತ್ರ ಮರುವಿಂಗಡಣೆಯ ಉದ್ದೇಶವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಈ ಪ್ರಸ್ತಾವಿತ ಸೂತ್ರವನ್ನು ವಿರೋಧಿಸುತ್ತಿರುವವರಿಗೆ ಸವಾಲು ಹಾಕಿದ ಕೆಟಿಆರ್, ದಕ್ಷಿಣ ರಾಜ್ಯಗಳ ಹಿತಾಸಕ್ತಿಗಳನ್ನು ಸಮರ್ಪಕವಾಗಿ ರಕ್ಷಿಸಬಲ್ಲ ಪರ್ಯಾಯ ಮಾರ್ಗವನ್ನು ಸೂಚಿಸುವಂತೆ ಕೇಳಿದರು. "ಇದು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು. ಯಾರಾದರೂ ಇದನ್ನು ಒಪ್ಪದಿದ್ದರೆ, ನಾನು ಒಂದೇ ಮಾತು ಹೇಳುತ್ತೇನೆ - ನಿಮ್ಮ ಬಳಿ ಉತ್ತಮ ಸೂತ್ರ ಅಥವಾ ಉತ್ತಮ ಪರಿಹಾರವಿದ್ದರೆ, ಮುಂದೆ ಬನ್ನಿ ಮತ್ತು ಅದನ್ನು ನಮಗೆ ವಿವರಿಸಿ ಎಂದು ಅವರು ಹೇಳಿದರು.

Also Read

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ: ಸ್ಟಾಲಿನ್ ಮನವೊಲಿಕೆಗೆ ಚೆನ್ನೈಗೆ ಬಂದಿಳಿದ ಖರ್ಗೆ, ಸೋನಿಯಾ- ರಾಹುಲ್ ಗಾಂಧಿ! Video

ಪಕ್ಷದ ನಿಲುವನ್ನು ಪುನರುಚ್ಚರಿಸಿದ ಕೆಟಿಆರ್, ಬಿಆರ್‌ಎಸ್ ಈ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟ ಪಾಲುದಾರರು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement