ಪ್ರತಿಭಟನೆ ಚಿತ್ರ 
ದೇಶ

ಮುಂಬೈ: ಶಿವಾಜಿ ಪಾರ್ಕ್‌ನಲ್ಲಿ CJP ಪ್ರತಿಭಟನೆ ವೇಳೆ ಹೃದಯಾಘಾತದಿಂದ ವೃದ್ಧ ಸಾವು!

ಮೃತಪಟ್ಟವರನ್ನು ನೆರೆಯ ಥಾಣೆಯ 'ದೋಸ್ತಿ ವೆಸ್ಟ್ ಕೌಂಟಿ'ಯ 'ಬಿ ವಿಂಗ್' ನಿವಾಸಿ ಗೋಪಾಲಕೃಷ್ಣ ಸುಬ್ಬಯ್ಯ ಪಿಳ್ಳೈ ಎಂದು ಗುರುತಿಸಲಾಗಿದೆ

ಮುಂಬೈ: ವಾಣಿಜ್ಯ ನಗರಿ ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ಶುಕ್ರವಾರ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ವೇಳೆ 75 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಲು ಈ ಪ್ರತಿಭಟನೆ ಆಯೋಜಿಸಲಾಗಿತ್ತು.

ಮೃತಪಟ್ಟವರನ್ನು ನೆರೆಯ ಥಾಣೆಯ 'ದೋಸ್ತಿ ವೆಸ್ಟ್ ಕೌಂಟಿ'ಯ 'ಬಿ ವಿಂಗ್' ನಿವಾಸಿ ಗೋಪಾಲಕೃಷ್ಣ ಸುಬ್ಬಯ್ಯ ಪಿಳ್ಳೈ ಎಂದು ಗುರುತಿಸಲಾಗಿದೆ ಎಂದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಳ್ಳೈ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಜೆ 4:30 ರ ಸುಮಾರಿಗೆ ಶಿವಾಜಿ ಪಾರ್ಕ್‌ಗೆ ಆಗಮಿಸಿದ್ದರು. ಸಂಜೆ 5 ಗಂಟೆ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಸ್ಥಳದಲ್ಲಿದ್ದ ಅವರ ಸ್ನೇಹಿತರು ಮತ್ತು ಪೊಲೀಸರು ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಪಡೆಯುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಸಿಜೆಪಿ ಪ್ರತಿಭಟನೆಯು ಸಂಜೆ 4 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ಪೊಲೀಸರ ಅನುಮತಿ ಇಲ್ಲದಿದ್ದರೂ, ಪ್ರಸಿದ್ಧ ಶಿವಾಜಿ ಪಾರ್ಕ್‌ನ ಸುತ್ತಮುತ್ತ ಸಾವಿರಾರು ಜನರು ಜಮಾಯಿಸಿದ್ದರು. ಮತದಾರರ ಪಟ್ಟಿಯ ಪರಿಷ್ಕರಣೆ (SIR), ಮತಗಳ ಕಳ್ಳತನದ ಆರೋಪ ಮತ್ತು ಚುನಾವಣೆಗಳಲ್ಲಿನ ಅಕ್ರಮಗಳ ವಿಷಯವಾಗಿ ಈ ಪ್ರತಿಭಟನೆ ನಡೆಯಿತು.

ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ಇತರ ಬೆಂಬಲಿಗರು ಸಿಇಸಿ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು. ಶಿವಾಜಿ ಪಾರ್ಕ್ ಸುತ್ತಲೂ ದೊಡ್ಡ ಜನಸಾಗರವೇ ಸೇರಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!