ವಿಜಯ್ - ಸ್ಟಾಲಿನ್ 
ದೇಶ

'ಅಶ್ಲೀಲ, ಅಸಭ್ಯ, ವಿಕೃತಿ': TVK ಮಹಿಳಾ ಅಭ್ಯರ್ಥಿ ಕುರಿತ ಸ್ಟಾಲಿನ್ ಹೇಳಿ ಖಂಡಿಸಿದ CM ವಿಜಯ್; ಚುನಾವಣಾ ಆಯೋಗಕ್ಕೆ ದೂರು

"ತಮಿಳು ಮಹಿಳೆಯರ ಮಗನಾಗಿ, ಸಹೋದರನಾಗಿ ಮತ್ತು ತಮ್ಮನಾಗಿ" ನಾನು ಆ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.

ಚೆನ್ನೈ: ಧಾರಾಪುರಂನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಟಿವಿಕೆ(TVK) ಅಭ್ಯರ್ಥಿ ಪಿ. ಸತ್ಯಭಾಮಾ ಅವರ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಟಿವಿಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಶನಿವಾರ ತೀವ್ರವಾಗಿ ಖಂಡಿಸಿದ್ದಾರೆ.

ಧಾರಾಪುರಂನಲ್ಲಿ ಶುಕ್ರವಾರ ನಡೆದ ಸ್ಟಾಲಿನ್ ಅವರ ಪ್ರಚಾರ ಸಭೆಯು "ಅಪಪ್ರಚಾರ, ಮಹಿಳಾ ವಿರೋಧಿ ಧೋರಣೆ ಮತ್ತು ವೈಯಕ್ತಿಕ ನಿಂದನೆ"ಯಿಂದ ಕೂಡಿತ್ತು. "ತಮಿಳು ಮಹಿಳೆಯರ ಮಗನಾಗಿ, ಸಹೋದರನಾಗಿ ಮತ್ತು ತಮ್ಮನಾಗಿ" ನಾನು ಆ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.

ಸ್ಟಾಲಿನ್ ಅವರ ಹೇಳಿಕೆ 'ಅಶ್ಲೀಲ, ಅಸಭ್ಯ, ವಿಕೃತ ಮತ್ತು ದುರುದ್ದೇಶಪೂರಿತ' ಎಂದು ಟೀಕಿಸಿದ ವಿಜಯ್, ಅಕ್ಟೋಬರ್ 6 ರಂದು ಮತ ಚಲಾಯಿಸುವಾಗ ಧಾರಾಪುರಂನ ಮತದಾರರು ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಏತನ್ಮಧ್ಯೆ, ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮಾ ಅವರ ವಿರುದ್ಧ ಅವಹೇಳನಕಾರಿ ಮತ್ತು ದೈಹಿಕ ಸ್ವರೂಪದ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ 'ಸ್ಟಾರ್ ಪ್ರಚಾರಕ'(star campaigner) ಸ್ಥಾನಮಾನವನ್ನು ರದ್ದುಗೊಳಿಸಬೇಕು ಎಂದು ಟಿವಿಕೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಜೊತೆಗೆ, ಧಾರಾಪುರಂ ವಿಧಾನಸಭಾ ಕ್ಷೇತ್ರವು ವ್ಯಾಪ್ತಿಗೆ ಬರುವ ತಿರುಪ್ಪೂರ್ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಯು, ಸ್ಟಾಲಿನ್ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ನಿರ್ದೇಶನ ನೀಡಬೇಕೆಂದೂ ಕೋರಿದೆ.

ಹಿಂದೆ ಎಐಎಡಿಎಂಕೆ(AIADMK) ಪಕ್ಷದಲ್ಲಿದ್ದ ಸತ್ಯಭಾಮಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸ್ಟಾಲಿನ್, ಅವರು ಹಣಕ್ಕಾಗಿ ರಾಜಕೀಯ ನಿಷ್ಠೆಯನ್ನು ಬದಲಾಯಿಸಿದ್ದಾರೆ ಎಂಬರ್ಥ ಬರುವಂತೆ "ಪೆಟ್ಟಿ"(ಸೂಟ್‌ಕೇಸ್) ಮತ್ತು "ಬಾಲ್ಟಿ" (ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು) ಮುಂತಾದ ಪದಗಳನ್ನು ಬಳಸಿದ್ದರು.

ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಗೆ ಸಲ್ಲಿಸಲಾದ ದೂರಿನಲ್ಲಿ, ಟಿವಿಕೆ (TVK) ಪ್ರಧಾನ ಕಾರ್ಯದರ್ಶಿ(ಚುನಾವಣಾ ಪ್ರಚಾರ ನಿರ್ವಹಣೆ) ಹಾಗೂ ಸಚಿವ ಆದವ್ ಅರ್ಜುನ ಅವರು, ಅಕ್ಟೋಬರ್ 2 ರಂದು ಧಾರಾಪುರಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಸ್ಟಾಲಿನ್ ಅವರು ಸತ್ಯಭಾಮ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. "ಅಂತಹ ದೇಹ"ವನ್ನು ಹೊಂದಿರುವ ಅವರು ಹೇಗೆ 'ಸಮರ್‌ಸಾಲ್ಟ್' (ಜಿಗಿಯಲು) ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಸ್ಟಾಲಿನ್ ಅವರು ಸತ್ಯಭಾಮ ಅವರ ದೈಹಿಕ ಆಕಾರವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ದೂರಿದ್ದಾರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!