ಸೌರಭ್ ಭಾರದ್ವಾಜ್ 
ದೇಶ

ಫುಟ್‌ಬಾಲ್‌ನಂತೆ 'ನನ್ನನ್ನು ಎಸೆದರು! SIR ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದ ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪ!

ಎಎನ್‌ಐ (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಭಾರದ್ವಾಜ್, ಪೊಲೀಸರು ತಮ್ಮೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನನ್ನನ್ನು ಫುಟ್‌ಬಾಲ್‌ನಂತೆ ಎಸೆದಿದ್ದಾರೆ ಎಂದು ಆರೋಪಿಸಿದರು.

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಗೇಟ್‌ನತ್ತ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ದೆಹಲಿ ಪೊಲೀಸರು ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರನ್ನು ವಶಕ್ಕೆ ಪಡೆದರು.

ಈ ವೇಳೆ ಎಎನ್‌ಐ (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಭಾರದ್ವಾಜ್, ಪೊಲೀಸರು ನಮ್ಮೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನನ್ನನ್ನು ಫುಟ್‌ಬಾಲ್‌ನಂತೆ ಎಸೆದಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಇಷ್ಟೊಂದು ಜನ ಪೊಲೀಸರಿದ್ದರೂ ಯಾರೂ ಕೂಡಾ ತಮ್ಮವರೇ ಆದ ಎಸಿಪಿ ವಿರುದ್ಧ ಎಫ್‌ಐಆರ್ (FIR) ದಾಖಲಿಸುತ್ತಿಲ್ಲ ಅಥವಾ ಅವರನ್ನು ಬಂಧಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ದೆಹಲಿಯಲ್ಲಿ 5,000 ಪೊಲೀಸ್ ಸಿಬ್ಬಂದಿ ನಿಯೋಜನೆ: ಇಂಡಿಯಾ ಗೇಟ್‌ನಿಂದ ಜಂತರ್ ಮಂತರ್‌ವರೆಗೆ ಉದ್ದೇಶಿಸಿದ ಎರಡು ಪ್ರತಿಭಟನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕ್ಷೀಪ್ರ ಕಾರ್ಯ ಪಡೆ (RAF) ಮತ್ತು ಇತರ ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಸುಮಾರು 5,000 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಈ ಮೆರವಣಿಗೆಗಳನ್ನು ನಡೆಸಲಾಯಿತು. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ​​(AISA) ನೇತೃತ್ವದಲ್ಲಿ 'ನಾಗರಿಕರ ಮೆರವಣಿಗೆ' (Citizens’ March) ಮಧ್ಯಾಹ್ನ 3 ಗಂಟೆಗೆ ನಡೆಯಿತು. ನಂತರ ಸಂಜೆ 5 ಗಂಟೆಗೆ ಅದೇ ಮಾರ್ಗದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ (IYC) ಮೆರವಣಿಗೆ ನಡೆಸಿತು.

ಅಲ್ಲದೇ ಇಂದು ರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಕೆಫೆಗಳು ಇರುವುದಿಲ್ಲ, ಕ್ಲಬ್ ಓಪನ್ ಆಗಲ್ಲ, ಭಿತ್ತಿಪತ್ರಗಳೇ ತುಂಬಿರುತ್ತವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ಪೋಸ್ಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನನ್ನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

ಚುನಾವಣಾ ಪ್ರಚಾರದಲ್ಲಿ ಮಗು ಬಳಕೆ ಆರೋಪ: DMK ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಸ್ ದಾಖಲು!

'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ​ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್-Video

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!