ಚೀತಾ ಮರಿಗಳು 
ದೇಶ

ಕುನೋದಲ್ಲಿ ಮತ್ತೊಂದು ಗುಡ್‌ನ್ಯೂಸ್; ಭಾರತ ಮೂಲದ ಚೀತಾ KJP21ಗೆ 5 ಮರಿಗಳ ಜನನ-video

ಈ ಹಿಂದೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಭೋಪಾಲ್: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ದೊರೆತಿದ್ದು, ಭಾರತದಲ್ಲೇ ಹುಟ್ಟಿದ ಮತ್ತೊಂದು ಹೆಣ್ಣು ಚೀತಾ KJP21 ಐದು ಮರಿಗಳಿಗೆ ಜನ್ಮ ನೀಡಿದೆ.

ಈ ಹಿಂದೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಇದೀಗ ಭಾರತದಲ್ಲೇ ಹುಟ್ಟಿದ ಮತ್ತೊಂದು ಹೆಣ್ಣು ಚೀತಾ KJP21 ಕೂಡ ಬರೊಬ್ಬರಿ ಐದು ಮರಿಗಳಿಗೆ ಜನ್ಮ ನೀಡಿದೆ.

ಇಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಐದು ಚಿರತೆ ಮರಿಗಳು ಜನಿಸಿದ್ದು, ತಾಯಿ ಚಿರತೆ ಮತ್ತು ಮರಿಗಳ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ತಜ್ಞರು ನಿಗಾ ಇರಿಸಿದ್ದಾರೆ.

60ಕ್ಕೇರಿದ ಚೀತಾಗಳ ಸಂಖ್ಯೆ

ಇನ್ನು ಭಾರತದಲ್ಲಿ ಚಿರತೆಗಳ ಸಂತತಿ ವೃದ್ಧಿಗೆ ಕೈಗೊಂಡಿರುವ ಪ್ರಯತ್ನಗಳ ದೃಷ್ಟಿಯಿಂದ ಈ ಬೆಳವಣಿಗೆ ಮಹತ್ವದ್ದಾಗಿದೆ. ಭಾರತದಲ್ಲೇ ಜನಿಸಿದ KJP21 ಇದೀಗ ಐದು ಮರಿಗಳಿಗೆ ಜನ್ಮ ನೀಡಿರುವುದು ದೇಶದಲ್ಲಿ ಚಿರತೆಗಳ ಸಂತತಿ ಸ್ವಾಭಾವಿಕವಾಗಿ ವೃದ್ಧಿಯಾಗುತ್ತಿರುವುದಕ್ಕೆ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.

ಭಾರತದಲ್ಲೇ ಜನಿಸಿದ 32 ತಿಂಗಳ ಹೆಣ್ಣು ಚಿರತೆ KJP21, ಇಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ. ಈ ಐದು ಮರಿಗಳ ಜನನದೊಂದಿಗೆ ಭಾರತದಲ್ಲಿನ ಒಟ್ಟು ಚಿರತೆಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಈ ಪೈಕಿ 41 ಚಿರತೆಗಳು ಭಾರತದಲ್ಲೇ ಜನಿಸಿರುವುದು ವಿಶೇಷವಾಗಿದೆ.

ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 53 ಚೀತಾಗಳಿದ್ದು, ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ 3 ಚೀತಾಗಳಿವೆ. ಚೀತಾಗಳಿಗೆ ಮೂರನೇ ತಾಣವಾಗಿ ರಾಣಿ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಚೀತಾಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಭಾರತದಲ್ಲಿ ಚಿರತೆಗಳ ಸಂತತಿ ಪುನರ್‌ಸ್ಥಾಪನೆ ಹಾಗೂ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಂಡಿರುವ ಪ್ರಾಜೆಕ್ಟ್ ಚೀತಾ ಯೋಜನೆಗೆ KJP21 ಮರಿಗಳ ಜನನ ಮತ್ತಷ್ಟು ಬಲ ನೀಡಿದೆ.

ಚೀತಾ ಯೋಜನೆಗೆ ಮಹತ್ವದ ಪುಷ್ಠಿ

1952ರಲ್ಲಿ ಭಾರತದಲ್ಲಿ ಚಿರತೆಗಳು ಸಂಪೂರ್ಣವಾಗಿ ನಶಿಸಿವೆ ಎಂದು ಘೋಷಿಸಲಾಗಿತ್ತು. ಬಳಿಕ ದೇಶದಲ್ಲಿ ಚಿರತೆಗಳ ಪುನರ್‌ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಕೈಗೊಂಡಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನ ಇದರ ಪ್ರಮುಖ ಕೇಂದ್ರವಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಗಳ ಸಂಖ್ಯೆಯನ್ನು ಹೆಚ್ಚಿಸಿ, ದೇಶದಲ್ಲಿ ಸ್ವಾವಲಂಬಿ ಹಾಗೂ ಸ್ಥಿರ ಚಿರತೆಗಳ ಸಂತತಿಯನ್ನು ರೂಪಿಸುವುದು ಸಂರಕ್ಷಣಾ ಯೋಜನೆಯ ಪ್ರಮುಖ ಗುರಿಯಾಗಿದೆ. ದೇಶದಲ್ಲಿ ಚಿರತೆಗಳ ಸ್ವಾವಲಂಬಿ ಮತ್ತು ಸ್ಥಿರ ಸಂತತಿಯನ್ನು ರೂಪಿಸುವ ಪ್ರಯತ್ನದ ನಡುವೆ ಈ ಬೆಳವಣಿಗೆಯನ್ನು ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಪುರಿಗೆ ಕೊಕ್!

ಜೈಲು DIG ಸೋಮಶೇಖರ್ ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು!

'ನೈಸ್‌'ಗೆ ಸುಪ್ರೀಂ ಕೋರ್ಟ್ ಶಾಕ್; ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಕಾರ!

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ಮೀಸಲು ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದೆ ರೋಚಕ - ಕನ್ನಡತಿ ಸ್ನೇಹಾ ಗೌಡ!

'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video