ಪ್ರಧಾನಿ ನರೇಂದ್ರ ಮೋದಿ  
ದೇಶ

‘ನಾವು ಮಾಡಿಯೇ ತೀರುತ್ತೇವೆ’: 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿ; ಪ್ರಧಾನಿ ಮೋದಿ; Video

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಸಮಾಜವನ್ನು ಮತಗಳ ಆಧಾರದಲ್ಲಿ ವಿಭಜಿಸುವುದೂ ಒಂದಾಗಿದೆ ಎಂದರು.

ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, “ನಾವು ಇದನ್ನು ಮಾಡಿಯೇ ತೀರುತ್ತೇವೆ” (We Will Do It) ಎಂಬ ಘೋಷಣೆಯನ್ನು ಬುಧವಾರ ಮೊಳಗಿಸಿದರು. ದೂರದೃಷ್ಟಿಯ ನೀತಿಗಳು ಹಾಗೂ ನಿರಂತರ ಪರಿಶ್ರಮದ ಮೂಲಕ ಈ ಗುರಿಯನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಸಮಾಜವನ್ನು ಮತಗಳ ಆಧಾರದಲ್ಲಿ ವಿಭಜಿಸುವುದೂ ಒಂದಾಗಿದೆ ಎಂದರು.

ರೈತನ ಹೊಲದಲ್ಲಿ ನೀರಿಲ್ಲದಿದ್ದಾಗ, ಆ ಸಮಸ್ಯೆ ಕೇವಲ ಒಂದು ಜಾತಿಗೆ ಮಾತ್ರವೇ ಕಾಡುತ್ತದೆಯೇ? ವಿದ್ಯುತ್ ಇಲ್ಲದಿದ್ದಾಗ ಕತ್ತಲೆ ಕೇವಲ ಒಂದು ಸಮುದಾಯದ ಮೇಲೆ ಮಾತ್ರ ಆವರಿಸುತ್ತದೆಯೇ? ಉತ್ತರ ಇಲ್ಲ. ಸಮಸ್ಯೆ ಎಲ್ಲರದ್ದಾಗಿದ್ದರೆ, ಪರಿಹಾರವೂ ಎಲ್ಲರಿಗೂ ಇರಬೇಕು ಎಂದು ಹೇಳಿದರು.

ಇಂದು ಜನರು ಕಾಣುತ್ತಿರುವ ವಿಕಸಿತ ಭಾರತದ ಕನಸು ಖಂಡಿತವಾಗಿಯೂ ನನಸಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ನಿಲ್ಲಲು ಯಾವುದೇ ಕಾರಣವಿಲ್ಲ. ನೂರು ವರ್ಷಗಳ ಹಿಂದೆ ನಾವು 40 ಕೋಟಿಗಿಂತಲೂ ಕಡಿಮೆ ಜನರಿದ್ದೆವು. ಇಂದು ನಮ್ಮ ಜನಸಂಖ್ಯೆ 140 ಕೋಟಿಗೂ ಅಧಿಕವಾಗಿದೆ. 140 ಕೋಟಿ ಭಾರತೀಯರು ಒಗ್ಗೂಡಿ 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲಿದ್ದಾರೆ. ನಾವು ಖಂಡಿತವಾಗಿಯೂ ಮಾಡುತ್ತೇವೆ. ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

2047ರ ವೇಳೆಗೆ ವಿಕಸಿತ ಭಾರತ: ನಾವು ಇದನ್ನು ಮಾಡಿಯೇ ತೀರುತ್ತೇವೆ. ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಸ್ಥಾನ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಆತ್ಮನಿರ್ಭರ ಭಾರತ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಜಾಗತಿಕ ಉತ್ಪಾದನಾ ಕೇಂದ್ರ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಒಲಿಂಪಿಕ್ಸ್ ಆಯೋಜನೆ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಬಾಹ್ಯಾಕಾಶಕ್ಕೆ ಹೆಜ್ಜೆ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಈ ಶಕ್ತಿ, ಈ ಉತ್ಸಾಹ, ಈ ಆತ್ಮವಿಶ್ವಾಸ ಅಸಾಧಾರಣ ಎಂದು ಮೋದಿ ಹೇಳಿದರು.

ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಸಹ ಪೈಲಟ್ ಅಪಹರಿಸಿ ಪತನಗೊಳಿಸಲು ನಡೆಸಿದ ಪ್ರಯತ್ನವನ್ನು ತಡೆಯುವ ವೇಳೆ ಇರಿತಕ್ಕೊಳಗಾದ ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಉಲ್ಲೇಖಿಸಿದ ಮೋದಿ, ಇಂದು ವಿಶ್ವವೇ ಭಾರತದ ಪೈಲಟ್ ಬಗ್ಗೆ ಮಾತನಾಡುತ್ತಿದೆ. ಮುಂದೊಂದು ದಿನ ವಿಶ್ವವು ಭಾರತದಲ್ಲಿ ತಯಾರಾದ ವಿಮಾನಗಳ ಬಗ್ಗೆಯೂ ಮಾತನಾಡಲಿದೆ ಎಂದು ಹೇಳಿದರು.

ಈ ಗುರಿಗಳನ್ನು ದೂರದೃಷ್ಟಿಯ ನೀತಿಗಳು ಮತ್ತು ಅವಿರತ ಪರಿಶ್ರಮದ ಮೂಲಕ ಸಾಧಿಸಲಾಗುವುದು. ಭಾರತಕ್ಕೆ ಸವಾಲುಗಳಿರಬಹುದು. ಆದರೆ ನಮ್ಮ ಬಳಿ 140 ಕೋಟಿ ಪರಿಹಾರಗಳೂ ಇವೆ ಎಂದು ಹೇಳಿದರು.

2001ರ ಅಕ್ಟೋಬರ್ 7ರಿಂದ ಮೋದಿ ಸತತವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಮೂರು ಅವಧಿ, ಬಳಿಕ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಭಾರತದ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಸರ್ಕಾರದ ಮುಖ್ಯಸ್ಥನಾಗಿ ಮಾತನಾಡುವುದಾದರೆ, 25 ವರ್ಷಗಳ ಈ ನಿರಂತರ ಪಯಣವನ್ನು ಜನರು ಸಾಧನೆ ಎಂದು ನೋಡುತ್ತಾರೆ. ಆದರೆ ನಾನು ಇದನ್ನು ಹೇಗೆ ನೋಡುತ್ತೇನೆ? ನನಗೆ ಇದು ವೈಯಕ್ತಿಕ ವೈಭವೀಕರಣದ ವಿಚಾರವೂ ಅಲ್ಲ, ಅದಕ್ಕೆ ಇದು ಸಂದರ್ಭವೂ ಅಲ್ಲ ಎಂದು ಹೇಳಿದರು.

ಇಂದು ನಾನು ಸತತವಾಗಿ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದೇನೆ. ಇದು ಜನರ ಆಶೀರ್ವಾದ. ನನ್ನ ಮೇಲಿಟ್ಟಿರುವ ನಂಬಿಕೆಗಾಗಿ ಭಾರತದ ಜನರಿಗೆ ನಾನು ತಲೆಬಾಗುತ್ತೇನೆ. ನನಗೆ ಜನರೇ ದೇವರು; ಪರಿಶ್ರಮಿ ಬಿಜೆಪಿ ಕಾರ್ಯಕರ್ತರೇ ನನ್ನ ಶಕ್ತಿ ಎಂದು ಹೇಳಿದರು.

ಬಿಜೆಪಿ, ಎನ್‌ಡಿಎಯ ಎಲ್ಲ ಸಹೋದ್ಯೋಗಿಗಳು ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅಪಾರ ಗೌರವ ಹೊಂದಿರುವ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ತಮ್ಮ ಹಿತೈಷಿಗಳು ತಮ್ಮನ್ನು ಉತ್ತೇಜಿಸಿದರೆ, ಟೀಕಾಕಾರರು ಆತ್ಮಾವಲೋಕನ ಮಾಡಿಕೊಳ್ಳಲು ಕಲಿಸಿದರು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?