ಧ್ರುವ್ ರಾಠಿ 
ದೇಶ

'ನನ್ನನ್ನು ವಶಕ್ಕೆ ಪಡೆದಿರಲಿಲ್ಲ, ಗೂಂಡಾಗಳು ಮನೆಗೆ ನುಗ್ಗಿ ಅಪಹರಿಸಿದ್ದರು': ಬಿಡುಗಡೆಯಾದ ಬಳಿಕ ಯೂಟ್ಯೂಬರ್ ಧ್ರುವ್ ರಾಠಿ ಹೇಳಿಕೆ

'ಅವರು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋದರು. ಒಬ್ಬ ಅಪರಾಧಿಯನ್ನು ಹೇಗೆ ಕರೆದೊಯ್ಯುತ್ತಾರೋ ಹಾಗೆ ನನ್ನನ್ನು ನಡೆಸಿಕೊಂಡರು. ಮಲಗುವ ಕೋಣೆಯಿಂದಲೇ ನನ್ನನ್ನು ಎಳೆದುಕೊಂಡು ಬಂದರು' ಎಂದು ಹೇಳಿದರು.

ನವದೆಹಲಿ: ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಗುರುಗ್ರಾಮ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಯೂಟ್ಯೂಬರ್ ಧ್ರುವ್ ರಾಠಿ, ಶನಿವಾರ ತಡರಾತ್ರಿ ಬಿಡುಗಡೆಯಾಗಿದ್ದಾರೆ. ಭಾನುವಾರ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ತಮ್ಮನ್ನು 'ಅಪಹರಿಸಲಾಗಿತ್ತು' ಎಂದು ದೂರಿದ್ದಾರೆ.

'ಎಕ್ಸ್'ನಲ್ಲಿನ ಪೋಸ್ಟ್ ಮಾಡಿರುವ ಅವರು, ಗುರುಗ್ರಾಮ ಪೊಲೀಸರಿಗೆ ತಾವು ಯಾವುದೇ ಮುಚ್ಚಳಿಕೆ (undertaking) ನೀಡಿಲ್ಲ ಎಂದಿದ್ದು ವರದಿಗಳನ್ನು ಅಲ್ಲಗಳೆದಿದ್ದಾರೆ. 'ನನ್ನನ್ನು ಬಂಧಿಸಲಾಗಿರಲಿಲ್ಲ ಅಥವಾ ವಶಕ್ಕೆ ಪಡೆಯಲಾಗಿರಲಿಲ್ಲ, ಬದಲಿಗೆ ನನ್ನನ್ನು ಅಪಹರಿಸಲಾಗಿತ್ತು' ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ರಾಠಿ ಅವರನ್ನು ಮುಂಜಾನೆ 3 ಗಂಟೆಗೆ ಬಿಡುಗಡೆ ಮಾಡಿ ಅವರ ಕುಟುಂಬಕ್ಕೆ ಒಪ್ಪಿಸಲಾಯಿತು. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಮುನ್ನಾದಿನ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಕೇಂದ್ರೀಯ ವಿಹಾರ್ ಸೊಸೈಟಿಯಲ್ಲಿನ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆ 9.30ರ ಸುಮಾರಿಗೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ವಿಡಿಯೋ ಹೇಳಿಕೆಯಲ್ಲಿ, ರಾಠಿ ತಮ್ಮದೆಂದು ಹೇಳಲಾದ ಭಾರತೀಯ ಪಾಸ್‌ಪೋರ್ಟ್ ಅನ್ನು ತೋರಿಸಿದರು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲು ಬಯಸುತ್ತಿರುವ ವಿದೇಶಿ ಪ್ರಜೆ ಎಂದು ಬಿಂಬಿಸುವ ವರದಿಗಳನ್ನು ಟೀಕಿಸಿದರು. 'ನಾನು ಭಾರತದ ಪ್ರಜೆ ಮತ್ತು ಸಾಮಾನ್ಯ ಪ್ರಜೆಯಂತೆ ನನಗೂ ಸಮಾನ ಹಕ್ಕುಗಳಿವೆ' ಎಂದರು.

ಅಕ್ಟೋಬರ್ 10 ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ತಾವು ಮಲಗಿದ್ದಾಗ, ಹೊರಗೆ ಕೆಲವರು ಓಡಾಡುತ್ತಿದ್ದುದರಿಂದ ತಮ್ಮ ತಾಯಿ ಬಾಗಿಲು ತೆರೆದರು. ಅವರು ಪೊಲೀಸರಲ್ಲ, ಬದಲಾಗಿ ಸಾಮಾನ್ಯ ಉಡುಪಿನಲ್ಲಿದ್ದವರು. ಸುಮಾರು 20 ಮಂದಿ ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದರು ಎಂದು ಆರೋಪಿಸಿದರು.

'ನಾನು ಪ್ರತಿಕ್ರಿಯಿಸುವ ಮುನ್ನವೇ, ಅವರು ನನ್ನನ್ನು ಅಕ್ಷರಶಃ ಅಪಹರಿಸಿದರು. ನಾನು ಇಲ್ಲಿ 'ಅಪಹರಣ' ಎಂಬ ಪದವನ್ನು ಬಳಸುತ್ತಿದ್ದೇನೆ, ಏಕೆಂದರೆ ಇದು ಬಂಧನವಾಗಿರಲಿಲ್ಲ. ತಮ್ಮನ್ನು 'ಅಪಹರಿಸಲು' ಯಾವುದೇ ಗುರುತಿನ ಫಲಕಗಳಿಲ್ಲದ 'ಗೂಂಡಾಗಳನ್ನು' ಕಳುಹಿಸಲಾಗಿತ್ತು. ಒಂದು ವೇಳೆ ನಾನು ಪ್ರತಿಭಟನೆಗೆ ಹೋಗಿದ್ದಿದ್ದರೆ ತನನ್ನು ವಶಕ್ಕೆ ಪಡೆಯಲಾಗುತ್ತಿತ್ತು' ಎಂದು ಅವರು ಹೇಳಿದರು.

'ಅವರು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋದರು. ಒಬ್ಬ ಅಪರಾಧಿಯನ್ನು ಹೇಗೆ ಕರೆದೊಯ್ಯುತ್ತಾರೋ ಹಾಗೆ ನನ್ನನ್ನು ನಡೆಸಿಕೊಂಡರು. ಮಲಗುವ ಕೋಣೆಯಿಂದ ನನ್ನನ್ನು ಎಳೆದುಕೊಂಡು ಬಂದು, ಮೆಟ್ಟಿಲುಗಳ ಮೂಲಕ ಕೆಳಗೆ ಕರೆದೊಯ್ದರು. ಈ ವೇಳೆ ನನಗೆ ತೀವ್ರ ಗಾಯಗಳಾದವು; ನನ್ನ ದೇಹದಾದ್ಯಂತ ಇಂತಹ ಗಾಯಗಳಿವೆ' ಎಂದು ಅವರು ಹೇಳಿದರು.

ತಮ್ಮ ವಕೀಲರನ್ನು ಭೇಟಿಯಾಗುವ ಅವಕಾಶವನ್ನೂ ನಿರಾಕರಿಸಲಾಯಿತು ಎಂದು ಆರೋಪಿಸಿದ ರಾಠಿ, 'ಯಾವುದಾದರೂ ಪ್ರಜಾಪ್ರಭುತ್ವ ರಾಷ್ಟ್ರದ ಬಗ್ಗೆ ನೀವು ಕೇಳಿದ್ದೀರಾ, ಅಲ್ಲಿ ಯಾವುದೇ ಕಾನೂನು ಉಲ್ಲಂಘಿಸದ, ಕೇವಲ ಸತ್ಯಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಧ್ವನಿ ಎತ್ತಿದ ಮತ್ತು ಉತ್ತಮ ಚುನಾವಣಾ ಆಯೋಗಕ್ಕಾಗಿ ಆಗ್ರಹಿಸಿದ ಸಾಮಾನ್ಯ ನಾಗರಿಕರೊಬ್ಬರನ್ನು ಅವರ ಮನೆಯ ಮಲಗುವ ಕೋಣೆಯಿಂದ ಎತ್ತಿಕೊಂಡು ಹೋಗಿ, ಅಪಹರಿಸಿ, ಅವರ ಪೋಷಕರ ಮೇಲೆ ಹಲ್ಲೆ ನಡೆಸಿ, ಈ ರೀತಿ ಕರೆದೊಯ್ಯಲಾಗುತ್ತದೆಯೇ?' ಎಂದು ಪ್ರಶ್ನಿಸಿದರು.

ಈ ಪರಿಸ್ಥಿತಿಯು 'ಅನಧಿಕೃತ ತುರ್ತುಪರಿಸ್ಥಿತಿ' ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 'ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದ್ದಾರೆ'. ಇಂದು ನನ್ನ ವಿಷಯದಲ್ಲಿ ಸಂಭವಿಸಬಹುದಾದರೆ, ನಿಮಗೂ ಇದೇ ರೀತಿ ಆಗಬಹುದು. ಈ ಬಗ್ಗೆ ಸ್ವಲ್ಪ ಯೋಚಿಸಿ. ಸದ್ಯಕ್ಕೆ ನಾನು ಸುರಕ್ಷಿತವಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.

ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರಿಗೂ ರಾಠಿ ಧನ್ಯವಾದ ಅರ್ಪಿಸಿದರು.

'ಹಾಗೆಯೇ, ನಾನು ದೇಶಕ್ಕಾಗಿ ಇದೇ ರೀತಿ ಧ್ವನಿ ಎತ್ತುತ್ತಲೇ ಇರುತ್ತೇನೆ. ನೀವು ಎಷ್ಟೇ ಪ್ರಯತ್ನಿಸಿ ನನ್ನನ್ನು ಹತ್ತಿಕ್ಕಲು ನೋಡಿದರೂ ಸರಿ. ಜೈ ಹಿಂದ್' ಎಂದು ರಾಠಿ ಹೇಳಿದರು.

ಅಭಿಜಿತ್ ದೀಪ್ಕೆ ಮತ್ತು ಇತರ ಸಿಜೆಪಿ ನಾಯಕರ ಬಿಡುಗಡೆ

ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಭಾನುವಾರ ಬಿಡುಗಡೆ ಮಾಡಲಾಯಿತು. ಜಂತರ್ ಮಂತರ್‌ನಲ್ಲಿ ನಡೆಯಲಿದ್ದ ಪ್ರತಿಭಟನೆಗೂ ಮುನ್ನ, ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಆ ಮೂವರು ನಾಯಕರನ್ನು ಒಂದು ವರ್ಷದವರೆಗೆ 'ಶಾಂತಿಭಂಗ' ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಜೆಪಿಯ ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ತಿಳಿಸಿದ್ದಾರೆ.

ಶನಿವಾರ ದೆಹಲಿಯಾದ್ಯಂತ ನಡೆದ ಬೃಹತ್ ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು; ಈ ಕಾರ್ಯಾಚರಣೆಯಲ್ಲಿ 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಿವಿಧ ಸ್ಥಳಗಳಲ್ಲಿ ತಡೆಹಿಡಿದು, ಅವರು ಜಂತರ್ ಮಂತರ್ ತಲುಪದಂತೆ ತಡೆಯಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!