ಮೋದಿ ಮತ್ತು ರಾಹುಲ್ ಗಾಂಧಿ ಜೊತೆ ವಿಜಯ್  
ದೇಶ

ರಾಹುಲ್ ಗಾಂಧಿ ಜೊತೆ ಕಾಫಿ, ಮೋದಿ ಜೊತೆ ಮೆಟ್ರೋ ಪ್ರಯಾಣ: ರಾಜಕೀಯ ಚದುರಂಗಾಟದಲ್ಲಿ ವಿಜಯ್ ಚತುರ ನಡೆ!

ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಜತೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದ ನಡುವೆಯೇ, ರಾಹುಲ್ ಗಾಂಧಿ ಅವರೊಂದಿಗೆ ನಡೆದ ಭೋಜನ ಕೂಟ ಮೈತ್ರಿಯ ಬಲವನ್ನು ಪ್ರದರ್ಶಿಸಿತು.

ಚೆನ್ನೈ: ಮಿತ್ರಪಕ್ಷ ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿಯೊಂದಿಗೆ ಕೆಫೆಯಲ್ಲಿ ಸಭೆ ಮತ್ತೊಂದೆಡೆ ಮರುದಿನವೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೆಟ್ರೋ ಪ್ರಯಾಣ ಹಾಗೂ ದೇವಾಲಯ ಭೇಟಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಈ ರಾಜಕೀಯ ಸಮತೋಲನವು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಚೆನ್ನೈ ಮೆಟ್ರೋ ರೈಲು ಹಂತ-1ರ ಪೂನಮಲ್ಲಿ-ವಡಪಳನಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿಯವರೊಂದಿಗೆ ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಲ್ಲದೆ, ಐಐಟಿ ಮದ್ರಾಸ್ ಆವರಣದಲ್ಲಿರುವ ಜಲಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಒಟ್ಟಿಗೆ ಭೇಟಿ ನೀಡಿದ್ದರು.

ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಜತೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದ ನಡುವೆಯೇ, ರಾಹುಲ್ ಗಾಂಧಿ ಅವರೊಂದಿಗೆ ನಡೆದ ಭೋಜನ ಕೂಟ ಮೈತ್ರಿಯ ಬಲವನ್ನು ಪ್ರದರ್ಶಿಸಿತು.

ಟಿವಿಕೆಯ ಕೆಲ ಮುಖಂಡರು 2029ಕ್ಕೆ ವಿಜಯ್ ಪ್ರಧಾನಿ ಎಂದು ಬಿಂಬಿಸುತ್ತಿರುವುದು ಕಾಂಗ್ರೆಸ್‌ಗೆ ಅಸಮಾಧಾನ ತಂದಿತ್ತು. ಕಾಂಗ್ರೆಸ್ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವಾಗ, ಈ ಭೇಟಿಯು ಇಬ್ಬರು ನಾಯಕರ ನಡುವಿನ ಸ್ನೇಹ ಹಾಗೂ ಒಡನಾಟವನ್ನು ತೋರಿಸುವ ವೇದಿಕೆಯಾಗಿ ಬದಲಾಯಿತು.

ಅದೇ ಸಮಯದಲ್ಲಿ, ವಿಜಯ್ ಅವರು ಬಿಜೆಪಿಯನ್ನು ತಮ್ಮ ಪಕ್ಷದ ಸೈದ್ಧಾಂತಿಕ ವಿರೋಧಿ ಎಂದು ಕರೆದಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ, ಅವರು ನಿಧಿ, ಯೋಜನೆಗಳು ಮತ್ತು ಹೂಡಿಕೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅವರ ಸರ್ಕಾರವು ಕೇಂದ್ರದೊಂದಿಗಿನ ಸಂಬಂಧವನ್ನು ಮೂಲಭೂತವಾಗಿ ವೈರಿತ್ವದ ಸಂಬಂಧವೆಂದು ಬಿಂಬಿಸುವುದನ್ನು ತಪ್ಪಿಸಿದೆ.

ರಾಹುಲ್ ಜೊತೆಗಿನ ಭೇಟಿ ನಮ್ಮ ಮೈತ್ರಿ ರಾಜಕೀಯ ಸಭೆಯಾದರೆ, ಮೋದಿ ಜೊತೆಗಿನ ಭೇಟಿ ರಾಜ್ಯದ ಅಭಿವೃದ್ಧಿಗಾಗಿ ನಡೆದ ಅಧಿಕೃತ ಸರ್ಕಾರಿ ಕಾರ್ಯಕ್ರಮ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ