ರಜನಿಕಾಂತ್ v/s ದಳಪತಿ ವಿಜಯ್: ಜೈಲರ್ 2 ಆಡಿಯೋ ಲಾಂಚ್ ದಿಢೀರ್ ರದ್ದಿಗೆ ವಿಜಯ್ ಸರ್ಕಾರ ಕಾರಣ?

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ 2 ಚಿತ್ರದ ಭವ್ಯ ಆಡಿಯೋ ಲಾಂಚ್ ಈವೆಂಟ್ ರದ್ದಾಗಲು ತಮಿಳುನಾಡು ಸಿಎಂ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಕಾರಣ ಇರಬಹುದು ಎಂಬ ಚರ್ಚೆ ಭಾರಿ ಸಂಚಲನ ಸೃಷ್ಟಿಸಿವೆ. ಆ ಕುರಿತ ವರದಿ ಇಲ್ಲಿದೆ:
Jailer 2 Audio Launch Cancelled: Is Thalapathy Vijay Government Behind Rajinikanth Movie Move?
ರಜನಿಕಾಂತ್ v/s ದಳಪತಿ ವಿಜಯ್Online Desk
Updated on: 

ಚೆನ್ನೈ (ತಮಿಳುನಾಡು): ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ಜೀವನ ಆರಂಭಿಸಿ, ಇಂದು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿ ಬೆಳೆದು ನಿಂತಿರುವ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ ಎಲ್ಲಿಲದ ಕ್ರೇಜ್; ಇಡೀ ವಿಶ್ವಾದ್ಯಂತ ತನ್ನದೇ ಆದ ಹವಾ ಇಟ್ಟಿರುವ ರಜನಿಕಾಂತ್ ಅವರ ಮುಂಬರುವ ಜೈಲರ್ 2 ಚಿತ್ರದ ಭವ್ಯ ಆಡಿಯೋ ಲಾಂಚ್ ಕಾರ್ಯಕ್ರಮ ರದ್ದಾಗಿದೆ. ಆದರೆ, ಇದಕ್ಕೆ ತಮಿಳುನಾಡು ಸಿಎಂ ಹಾಗೂ ಮಾಜಿ ಚಿತ್ರನಟ ದಳಪತಿ ವಿಜಯ್ ಅವರೇ ಕಾರಣ ಇರಬಹುದು ಎಂಬ ಚರ್ಚೆ ಭಾರಿ ಸಂಚಲನ ಸೃಷ್ಟಿಸಿವೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವು ಅಕ್ಟೋಬರ್ 15, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಈ ಬಾರಿ ಸಾಂಪ್ರದಾಯಿಕ ಕ್ರೀಡಾಂಗಣ ಮಟ್ಟದ ಬೃಹತ್ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕೈಬಿಡಲಾಗಿದ್ದು, ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಂದುವರೆದು, ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿರುವ ದಳಪತಿ ವಿಜಯ್ ನಾಯಕತ್ವದ ಸರ್ಕಾರದ ಅವಧಿಯಲ್ಲಿ ಇಷ್ಟು ದೊಡ್ಡ ಸಾರ್ವಜನಿಕ ಸಮಾರಂಭಕ್ಕೆ ವಿಶೇಷ ಅನುಮತಿ ಪಡೆಯಬೇಕಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ಸನ್ ಪಿಕ್ಚರ್ಸ್ ಸಂಸ್ಥೆಯೊಂದಿಗಿನ ಹಳೆಯ ಸಮೀಕರಣಗಳ ಹಿನ್ನೆಲೆಯಲ್ಲಿ ಈ ಅನುಮತಿ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಚಿತ್ರತಂಡವೇ ಹಿಂದೆ ಸರಿದಿದೆ ಎಂಬ ವದಂತಿ ಹಬ್ಬಿದೆ. ಇನ್ನೊಂದೆಡೆ, ಉದ್ಯಮದ ಆಂತರಿಕ ಮೂಲಗಳ ಪ್ರಕಾರ, ವಿಜಯ್ ರಾಜಕೀಯವಾಗಿ ಮುಂಚೂಣಿಯಲ್ಲಿರುವಾಗ ಅವರಿಂದ ಅನುಮತಿ ಬೇಡುವುದು ಬೇಡ ಎಂದು ಖುದ್ದು ರಜನಿಕಾಂತ್ ಅವರೇ ಈ ಈವೆಂಟ್ ಅನ್ನು ಬೇಡವೆಂದು ನಿರಾಕರಿಸಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಈ ಹಿಂದೆ ಚಿತ್ರದ ಆಡಿಯೋ ಲಾಂಚ್ ಅನ್ನು ಮಲೇಷ್ಯಾದಲ್ಲಿ ನಡೆಸಲು ವಿತರಕರು ಮುಂದಾಗಿದ್ದರು. ಆದರೆ ವಿಜಯ್ ಅವರ 'ಜನನಾಯಕನ್' ಆಡಿಯೋ ಲಾಂಚ್‌ಗೆ ಅದನ್ನು ಹೋಲಿಕೆ ಮಾಡಿ ವಿನಾಕಾರಣ ವಿವಾದ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ರಜನಿಕಾಂತ್ ಆ ಪ್ರಸ್ತಾಪವನ್ನೂ ತಿರಸ್ಕರಿಸಿದ್ದರು ಎನ್ನಲಾಗಿದೆ.

Jailer 2 Audio Launch Cancelled: Is Thalapathy Vijay Government Behind Rajinikanth Movie Move?
ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಒವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ! Video

ಏತನ್ಮಧ್ಯೆ, ವದಂತಿಗಳು ಏನೇ ಇದ್ದರೂ, 'ಜೈಲರ್ 2' ಚಿತ್ರತಂಡ ಯಾವುದೇ ಅನಗತ್ಯ ವಿವಾದಕ್ಕೆ ಅಥವಾ ಭದ್ರತಾ ಲೋಪದ ಅಪಾಯಕ್ಕೆ ಸಿಲುಕದಂತೆ ಅತ್ಯಂತ ಚಾಣಾಕ್ಷ ತಂತ್ರವನ್ನು ರೂಪಿಸಿದ್ದು, ಅಕ್ಟೋಬರ್ 11 ರಂದು ಸನ್ ಟಿವಿಯಲ್ಲಿ ಸಂಜೆ 6:30 ರಿಂದ 9:30 ರವರೆಗೆ ರಜನಿಕಾಂತ್ ಮತ್ತು ಇಡೀ ಚಿತ್ರತಂಡದ ಅಪರೂಪದ 3 ಗಂಟೆಗಳ ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ಇದರ ಮೂಲಕವೇ ರಜನಿಕಾಂತ್ ತಮ್ಮ ಎಂದಿನ ಸ್ಟೈಲ್‌ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com