ಯೋಗಿ ಆದಿತ್ಯನಾಥ್, ಅತಿಕ್ ಅಹ್ಮದ್ 
ದೇಶ

ಅತಿಕ್ ಅಹ್ಮದ್ ಭದ್ರಕೋಟೆ ಕಸರಿ-ಮಸಾರಿಯ ಹೆಸರು ಬದಲಾವಣೆ; ಮಾಫಿಯಾ ಕುರುಹುಗಳನ್ನು ಅಳಿಸಿಹಾಕುತ್ತೇವೆ: ಯೋಗಿ ಸರ್ಕಾರ!

ಮಾಫಿಯಾ ಡಾನ್ ಅತಿಕ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಪಾಪ ಕೃತ್ಯಗಳಿಗೆ ಹೆಸರುವಾಸಿಯಾಗಿದ್ದ ಕಸರಿ-ಮಸಾರಿ ಹೆಸರನ್ನು ಬದಲಾಯಿಸಲಾಗುತ್ತಿದ್ದು ಎಲ್ಲಾ ಕುರುಹುಗಳನ್ನು ಅಳಿಸಿಹಾಕುತ್ತೇವೆ.

ಲಖನೌ: ಮಾಫಿಯಾ ಡಾನ್ ಅತಿಕ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಪಾಪ ಕೃತ್ಯಗಳಿಗೆ ಹೆಸರುವಾಸಿಯಾಗಿದ್ದ ಕಸರಿ-ಮಸಾರಿ ಹೆಸರನ್ನು ಬದಲಾಯಿಸಲಾಗುತ್ತಿದ್ದು ಎಲ್ಲಾ ಕುರುಹುಗಳನ್ನು ಅಳಿಸಿಹಾಕಿ, ಅದನ್ನು ಕೃಷ್ಣಪುರಿಯಾಗಿ ಅಭಿವೃದ್ಧಿಪಡಿಸುತ್ತೇವೆ. ಇದು ಅಭಿವೃದ್ಧಿ ಪ್ರಕ್ರಿಯೆಯ ಭಾಗವಾಗಿದೆ ಎಂದು ಸಿಎಂ ಯೋಗಿ ಹೇಳಿದರು.

ಶರದಿಯಾ ನವರಾತ್ರಿಯ ಸಮಯದಲ್ಲಿ ಇಲ್ಲಿ ನಿರ್ಮಿಸಲಾಗುವ ವಸತಿ ಮತ್ತು ಅಭಿವೃದ್ಧಿಪಡಿಸಲಾಗುವ ಪಟ್ಟಣವು ಈ ಕೃಷ್ಣಪುರಿಯ ಭಾಗವಾಗಿರುತ್ತದೆ. ಇಡೀ ಪ್ರದೇಶವು ಹೊಸ ಪ್ರಭಾವಲಯದೊಂದಿಗೆ ಮುಂದುವರಿಯುತ್ತದೆ ಎಂದರು. ಕಸರಿ-ಮಸಾರಿ ಬಹಳ ಹಿಂದಿನಿಂದಲೂ ಅತಿಕ್ ಅಹ್ಮದ್ ನ ಭದ್ರಕೋಟೆಯಾಗಿತ್ತು. ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಪುತ್ರರನ್ನು ಈ ಮಣ್ಣಲ್ಲಿ ಸಮಾಧಿ ಮಾಡಲಾಗಿದೆ. ಇನ್ಮುಂದೆ ಈ ಪ್ರದೇಶವನ್ನು ಕೃಷ್ಣಪುರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಈ ಪ್ರದೇಶವನ್ನು ಇನ್ನು ಮುಂದೆ ಯಾವುದೇ ಮಾಫಿಯಾದ ಹೆಸರಿನಿಂದ ಗುರುತಿಸಲಾಗುವುದಿಲ್ಲ ಎಂದರು.

ಮಾಫಿಯಾ ಆಳ್ವಿಕೆಯಿಂದಾಗಿ ಪ್ರಯಾಗ್‌ರಾಜ್‌ನ ಇಮೇಜ್ ಕಳಂಕಿತವಾಗಿದ್ದ ಒಂದು ಕಾಲವಿತ್ತು. ಇದು ಉದ್ಯಮಿಗಳು, ಮಹಿಳೆಯರು, ಆಡಳಿತ ಮತ್ತು ನ್ಯಾಯಾಂಗಕ್ಕೆ ದೊಡ್ಡ ಸವಾಲಾಗಿತ್ತು. ಮಾಫಿಯಾ ಇಲ್ಲಿನ ಪ್ರತಿಭೆಗಳನ್ನು ಹತ್ತಿಕ್ಕಲು ಹೇಯ ಪ್ರಯತ್ನವನ್ನೂ ಮಾಡಿತು. ಆದರೆ ಇಂದು ಆ ಮಾಫಿಯಾ ನಾಶವಾಗಿದೆ. ಕಳೆದ ವರ್ಷದ UPSC ಫಲಿತಾಂಶಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲಿ ಪ್ರಯಾಗ್‌ರಾಜ್‌ನ ಮಗಳು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ನಗರದ ಹೆಮ್ಮೆಯನ್ನು ಪುನಃಸ್ಥಾಪಿಸಿದಳು ಎಂದರು.

ಸಂಗಮ್ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, "ನೆನಪಿಡಿ... ಪ್ರಯಾಗ್‌ರಾಜ್‌ನಲ್ಲಿ, ಮಾಫಿಯಾ ಅತಿಕ್ ಮತ್ತು ಮಾಫಿಯಾ ಅಶ್ರಫ್ ಒಮ್ಮೆ ಅವರು ಕಾಲಿಟ್ಟ ಪ್ರತಿಯೊಂದು ಭೂಮಿಯೂ ಅವರದ್ದಾಗುತ್ತಿತ್ತು. ಅಂದಿನ ಸರ್ಕಾರ ಮೌನವಾಗಿತ್ತು. ಈ ಮಾಫಿಯಾಗಳ ಮುಂದೆ ಮಂಡಿಯೂರಿ. ಹೆಣ್ಣುಮಕ್ಕಳ ಸುರಕ್ಷತೆಗೆ ಹೇಗೆ ಬೆದರಿಕೆ ಇತ್ತು. ಶಸ್ತ್ರಾಸ್ತ್ರಗಳನ್ನು ರಾಜಾರೋಷವಾಗಿ ಪ್ರಯಾಗ್‌ರಾಜ್‌ನ ಬೀದಿ ಬೀದಿಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ರಚನೆಯಾದಾಗ, ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ನಾವು ಮೊದಲ ದಿನವೇ ಘೋಷಿಸಿದ್ದೇವೆ. ಅದರಂತೆ ಇಂದು ಮಾಫಿಯಾವನ್ನು ತಡೆಗಟ್ಟಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ