ಸುಪ್ರೀಂ ಕೋರ್ಟ್ Online Desk
ದೇಶ

ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡುವವರೆಲ್ಲ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!

ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳ ಕುರಿತು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನ ಮಾಡಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಕೇವಲ ಮೊಬೈಲ್ ಹಿಡಿದುಕೊಂಡು ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಆರಂಭಿಸಿದರೆ, ಅದು ಎಲ್ಲರಿಗೂ ದೊಡ್ಡ ಸಮಸ್ಯೆ ಸೃಷ್ಟಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಡಿಜಿಟಲ್ ಯುಗದ ಪತ್ರಿಕೋದ್ಯಮದ ಗಡಿಗಳ ಕುರಿತು ಅತ್ಯಂತ ಮಹತ್ವದ ಮೌಖಿಕ ಅವಲೋಕನವನ್ನು ಮಾಡಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಕೇವಲ ಮೊಬೈಲ್ ಫೋನ್ ಹಿಡಿದುಕೊಂಡು ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಆರಂಭಿಸಿದರೆ, ಅದು ಎಲ್ಲರಿಗೂ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಸುಪ್ರೀಂ ಕೋರ್ಟ್ ಪೀಠ ಹೇಳಿದ್ದೇನು?

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗಳ ಪ್ರತಿಭಟನೆಗಳ ವರದಿಗಾರಿಕೆ ವೇಳೆ ಸ್ವತಂತ್ರ ಹಾಗೂ ಫ್ರೀಲ್ಯಾನ್ಸ್ ಪತ್ರಕರ್ತರಿಗೆ ಪೊಲೀಸ್ ಕಿರುಕುಳವಾಗುತ್ತಿದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸುವಾಗ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲಾ ಬಾಗ್ಚಿ ಅವರನ್ನೊಳಗೊಂಡ ಪೀಠವು, ಸಂವಿಧಾನದ 19(1)(a) ವಿಧಿ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಲಭ್ಯವಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ದೇಶದ ಪ್ರತಿಯೊಬ್ಬ ನಾಗರಿಕನೂ ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಸಾಧ್ಯವೇ ಎಂಬುದನ್ನು ಆಳವಾಗಿ ಪರಿಶೀಲಿಸಬೇಕಿದೆ ಎಂದು ಹೇಳಿದೆ. ಜೊತೆಗೆ, ಎಲ್ಲರೂ ಪತ್ರಕರ್ತರಾಗಲು ಹೊರಟರೆ ವ್ಯವಸ್ಥೆಯಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಪೀಠ ಎಚ್ಚರಿಸಿದೆ.

ಮುಂದುವರೆದು, ಮಾನ್ಯತೆ ಪಡೆದ ಪತ್ರಕರ್ತರು, ನೋಂದಾಯಿತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ಪತ್ರಕರ್ತರು ಹಾಗೂ ಕೇವಲ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್ ಅಥವಾ ರೀಲ್ಸ್ ಮಾಡುವವರ ನಡುವೆ ಸ್ಪಷ್ಟವಾದ ವ್ಯತ್ಯಾಸಗಳು ಮತ್ತು ರಕ್ಷಣೆಯ ಹಂತಗಳಿವೆ ಎಂದು ಅಭಿಪ್ರಾಯಪಟ್ಟ ಜಸ್ಟಿಸ್ ಬಾಗ್ಚಿ, ದುಡಿಯುವ ಪತ್ರಕರ್ತರ ಕಾಯ್ದೆಯಲ್ಲಿ ಪತ್ರಕರ್ತರಲ್ಲಿ ಕೆಲವು ವರ್ಗಗಳನ್ನು ಮಾಡಿದೆ, ಇದರ ಸಂಪೂರ್ಣ ಆಳವಾದ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಿದರು.

ಕೈಯಲ್ಲೊಂದು ಮೈಕ್ ಹಿಡಿದವರೆಲ್ಲಾ ತಾವು ಸ್ವತಂತ್ರ ಪತ್ರಕರ್ತರು....

ಇನ್ನು ವಿಚಾರಣೆಯ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಡಿಜಿಟಲ್ ತಂತ್ರಜ್ಞಾನದ ಇಂದಿನ ಯುಗದಲ್ಲಿ ಎದುರಾಗುತ್ತಿರುವ ಪ್ರಾಯೋಗಿಕ ಸವಾಲುಗಳನ್ನು ಕೋರ್ಟ್ ಗಮನಕ್ಕೆ ತಂದರು. ಅದರಂತೆ, ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಮತ್ತು ಕೈಯಲ್ಲೊಂದು ಮೈಕ್ ಹಿಡಿದವರೆಲ್ಲಾ ತಾವು ಸ್ವತಂತ್ರ ಪತ್ರಕರ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ, ಪ್ರತಿಭಟನಾ ಸ್ಥಳಗಳಲ್ಲಿ ವೃತ್ತಿಪರ ವರದಿಗಾರಿಕೆಗಿಂತ ಹೆಚ್ಚಾಗಿ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಮತ್ತು ಹಣಗಳಿಸುವ ಉದ್ದೇಶದಿಂದ ಏಕಪಕ್ಷೀಯ ಅಥವಾ ವಿಷಯಗಳನ್ನು ಅತಿರಂಜಿತಗೊಳಿಸಿ ರೀಲ್ಸ್ ಮಾಡುವ ಹಾವಳಿ ಹೆಚ್ಚಾಗಿದೆ. ಹೀಗಾಗಿ ನೈಜ ಪತ್ರಕರ್ತರು ಯಾರು ಮತ್ತು ರೀಲ್ಸ್ ಮಾಡುವವರು ಯಾರು ಎಂದು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ವಾದಿಸಿದರು.

ಏತನ್ಮಧ್ಯೆ, ಕೇವಲ ಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಇತ್ತೀಚೆಗೆ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿತ್ತು. ಯುಟ್ಯೂಬ್‌ ಚಾನೆಲ್‌ಗಳ ಸ್ವಯಂ ಘೋಷಿತ ವರದಿಗಾರರು ಯಾವುದೇ ಪತ್ರಿಕೋದ್ಯಮದ ತರಬೇತಿ, ನೈತಿಕತೆ ಅಥವಾ ಜವಾಬ್ದಾರಿ ಇಲ್ಲದೆ ಜನರನ್ನು ಗುರಿಯಾಗಿಸುತ್ತಿದ್ದಾರೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆ ಎಂದು ಕೋರ್ಟ್ ಹೇಳಿತ್ತು. ಡಿಜಿಟಲ್ ಮಾಧ್ಯಮದ ಉತ್ತರದಾಯಿತ್ವಕ್ಕಾಗಿ ಸೂಕ್ತ ನಿಯಂತ್ರಣ ಚೌಕಟ್ಟನ್ನು ರೂಪಿಸಲು ಶಾಸಕಾಂಗಕ್ಕೆ ಹೈಕೋರ್ಟ್ ಕರೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ